ಮಡಿಕೇರಿ, ಆ. ೧೭: ಕೊಡಗು ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿAದ ತಾ. ೧೯ ರಂದು (ನಾಳೆ) ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಯೋಜಿಸಲಾಗಿದೆ.

ಕುಶಾಲನಗರ ಗೌಡ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಆಯೋಜಿತ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆಯಲ್ಲಿ ನಡೆಯವ ಸಭಾ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್, ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಉದ್ಯಮಿ ಹೆನ್ರಿಕ್ ಮಾರ್ಟಿನ್, ಬಿಜೆಪಿ ಯುವ ಮುಖಂಡ ಚಂದ್ರಶೇಖರ್ ಹೇರೂರು, ಗುಡ್ಡೆಹೊಸೂರು ಯೂತ್ ಪಂಚಾಯಿತಿ ಸಂಘಟನೆ ಕಾರ್ಯದರ್ಶಿ ಎಂ.ಎಸ್. ರಂಜಿತ್, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಸಿ.ಎಂ.ಗಣಿಪ್ರಸಾದ್, ಗುಡ್ಡೆಹೊಸೂರು ಗ್ರಾಪಂ ಸದಸ್ಯ ನಿತ್ಯಾನಂದ ಕುಡೆಕಲ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ, ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ, ಕಾಫಿ ಬೆಳೆಗಾರರಾದ ಟಿ.ಕೆ.ಸಾಯಿಕುಮಾರ್, ಕೊರವಂಡ ವಸಂತಿ ಪೊನ್ನಪ್ಪ, ಜಿ.ಮುಕುಲ್ ಮಹೀಂದ್ರ, ಪುಲಿಯಂಡ ರಾಮ್ ದೇವಯ್ಯ ಪಾಲ್ಗೊಳ್ಳಲಿದ್ದಾರೆ.

ವಿಶ್ವಛಾಯಾಗ್ರಹಣ ದಿನಾಚರಣೆ ಅಂಗವಾಗಿ ಪತ್ರಕರ್ತರ ಸಂಘದಿAದ ಹಿರಿಯ ಛಾಯಾಗ್ರಾಹಕರಾದ ಸಂದೀಪ್ ಮತ್ತು ಮಹಮ್ಮದ್ ಹನೀಫ್ ಅವರನ್ನು ಸನ್ಮಾನಿಸಲಾಗುತ್ತದೆ. ಪುಲಿಯಂಡ ರಾಮ್ ದೇವಯ್ಯ ಅವರು ಜ್ಞಾನಗಂಗಾ ಶಾಲೆಯ ಹೆಸರಿನಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಲ್ಲಿ ಹಿರಿಯ ವರದಿಗಾರರಿಗೆ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಹಿರಿಯ ವರದಿಗಾರ ಕೆ. ಶಿವಣ್ಣ ಅವರಿಗೆ ಪ್ರದಾನ ಮಾಡಲಾಗುವುದು ಸಂಘದ ನಿರ್ದೇಶಕ ನವೀನ್ ಚಿನ್ನಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್ ಮಾಹಿತಿ ನೀಡಿದ್ದಾರೆ.

೭ ಮಂದಿಗೆ ಬಹುಮಾನ : ಪತ್ರಕರ್ತರ ಸಂಘದಿAದ ಆಯೋಜಿತ ಛಾಯಾಚಿತ್ರ, ವಿಡಿಯೋ, ರೀಲ್ಸ್ ಸ್ಪರ್ಧೆಗಳಲ್ಲಿ ೭ ಮಂದಿ ಬಹುಮಾನ ಪಡೆದುಕೊಂಡಿದ್ದಾರೆ

ಅತ್ಯುತ್ತಮ ಮಾನವೀಯ ಛಾಯಾಚಿತ್ರಕ್ಕಾಗಿ ಸಂಘದ ಗೌರವ ಸಲಹಗಾರ ಬಿ.ಜಿ. ಅನಂತಶಯನ ನೀಡಿರುವ ದತ್ತಿ ಪ್ರಶಸ್ತಿಗೆ ವಿಘ್ನೇಶ್ ಭೂತನಕಾಡು ಅವರು ತೆಗೆದ ಛಾಯಾಚಿತ್ರ ಆಯ್ಕೆಯಾಗಿದೆ . ಅತ್ಯುತ್ತಮ ಸುದ್ದಿ ಚಿತ್ರಕ್ಕಾಗಿ ಸುಂಟಿಕೊಪ್ಪದ ಪತ್ರಕರ್ತ ಕೆ.ಎಸ್. ಅನಿಲ್ ಕುಮಾರ್ (ಪ್ರಥಮ) , ವಿಶ್ವಕುಮಾರ್ ಗುಡ್ಡೆಹೊಸೂರು (ದ್ವಿತೀಯ), ಜಲಜಲಜಲಧಾರೆ ವಿಷಯದ ಅತ್ಯುತ್ತಮ ವಿಡಿಯೋ ಸ್ಪರ್ಧೆಯಲ್ಲಿ ಮಡಿಕೇರಿಯ ಮಹಮ್ಮದ್ ಹನೀಫ್ (ಪ್ರಥಮ), ವೀರಾಜಪೇಟೆಯ ಉಷಾಪ್ರೀತÀಮ್ (ದ್ವಿತೀಯ), ಮಳೆಗಾಲದ ಸಂಕಷ್ಟಗಳು ವಿಷಯದ ಕುರಿತ ಸಾರ್ವಜನಿಕರಿಗಾಗಿನ ರೀಲ್ಸ್ ಸ್ಪರ್ಧೆಯಲ್ಲಿ ಭಾಗೀರಥಿ ಹುಲಿತಾಳ (ಪ್ರಥಮ) ಕುಶಾಲನಗರದ ರಮ್ಯ ಮಾಚಯ್ಯ (ದ್ವಿತೀಯ) ಬಹುಮಾನ ಪಡೆದಿದ್ದಾರೆ.