ಸೋಮವಾರಪೇಟೆ, ಆ. ೧೯: ಯುನೈಟೆಡ್ ಅರಬ್ ಎಮಿರೇಟ್ಸ್ನ ಕ್ರೀಡಾ ಇಲಾಖೆ, ಯುಎಇ ಸ್ಪೋರ್ಟ್ಸ್ ಫಾರ್ ಆಲ್ ಫೆಡರೇಷನ್ ಹಾಗೂ ಯುಎಇ ಯೋಗ ಕಮಿಟಿ ವತಿಯಿಂದ ಏಷ್ಯನ್ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ ಸಹಯೋಗದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಮೂಲತಃ ಸೋಮವಾರಪೇಟೆಯ ವಿ. ವಿಹಾನ್ ಚಿನ್ನದ ಪದಕ ಗಳಿಸಿದ್ದಾನೆ.

ಬಾಲಕರ ಸಬ್ ಜೂನಿಯರ್ ಕಲಾತ್ಮಕ ಯೋಗಾಸನ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಹಾನ್, ಚಿನ್ನದ ಪದಕಕ್ಕೆ ಭಾಜನನಾಗಿದ್ದಾನೆ.

ಸೋಮವಾರಪೇಟೆ ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಿವೇಕ್ ಸಿದ್ದೇಶ್ವರ ಹಾಗೂ ನಯನ ದಂಪತಿಯ ಪುತ್ರನಾಗಿರುವ ವಿಹಾನ್, ಬೆಂಗಳೂರು ಆರ್.ಆರ್. ನಗರದ ಶಾಲೆಯಲ್ಲಿ ೫ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.