ಕೂಡಿಗೆ, ಆ. ೨೪: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ಸಾಲಿನಲ್ಲಿ ನಾಲ್ಕು ಬಾರಿ ಸಂಪೂರ್ಣವಾಗಿ ಭರ್ತಿ ಯಾಗಿದ್ದು, ಕಾವೇರಿ ನೀರಾವರಿ ನಿಗಮದ ಸಭೆಯ ತೀರ್ಮಾನ ದಂತೆ ಅಚ್ಚುಕಟ್ಟು ಪ್ರದೇಶ ರೈತರಿಗೆ ಅನುಕೂಲವಾಗುವಂತೆ ಮುಖ್ಯ ನಾಲೆಯ ಮೂಲಕ ಎಡದಂಡೆ ಮತ್ತು ಬಲದಂಡೆಯ ಮುಖಾಂತರ ರೈತರ ಜಮೀನಿಗೆ ಬೇಸಾಯಕ್ಕೆ ನೀರನ್ನು ಹರಿಸಲಾಗಿದೆ.
ಕೊಡಗಿನ ಗಡಿ ಭಾಗವಾದ ಶಿರಂಗಾಲದವರೆಗೆ ಅಚ್ಚುಕಟ್ಟು ಪ್ರದೇಶವಾಗಿರುವ ೬.೯೦೦. ಎಕರೆಗಳಷ್ಟು ಪ್ರದೇಶದಲ್ಲಿ ಈಗಾಗಲೇ ರೈತರು ನಾಲೆಯ ನೀರನ್ನು ಬಳಕೆ ಮಾಡಿಕೊಂಡು ಉಳುಮೆ ಮಾಡಿ ಶೇಕಡಾ ೯೦.ರಷ್ಟು ಭತ್ತದ ನಾಟಿ ಕಾರ್ಯ ಮುಗಿಸಿದ್ದಾರೆ.
ಹಾರಂಗಿ ಅಣೆಕಟ್ಟೆಯಿಂದ ಈ ಸಾಲಿನಲ್ಲಿ ೫೦೦ ಕ್ಯೂಸೆಕ್ಸ್ ನೀರನ್ನು ನಾಲೆಗೆ ಹರಿಸಲಾಗಿದೆ. ಇದರ ಜೊತೆÀೆಗೆ ಎಡದಂಡೆ ನಾಲೆಯಲ್ಲಿ ಅಳವಡಿಕೆ ಮಾಡಲಾಗಿರುವ ಏತ ನೀರಾವರಿ ಯೋಜನೆ ಅಡಿಯಲ್ಲಿ ೧,೫೦೦ ಎಕರೆಗಳಷ್ಟು ಪ್ರದೇಶವಾಗಿರುವ ಚಿಕ್ಕ ಅಳುವಾರ, ದೊಡ್ಡ ಅಳುವಾರ ಸೇರಿದಂತೆ ಬಯಲು ಪ್ರದೇಶದ ಭೂಮಿಗೆ ನೀರು ಒದಗಿಸಿದ ಹಿನ್ನೆಲೆಯಲ್ಲಿ ಆ ಭಾಗದ ರೈತÀರು ಭತ್ತ ಕೃಷಿ ನಾಟಿ ಕಾರ್ಯ ಮಾಡಿದ್ದಾರೆ ಎಂದು ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.