ಮಡಿಕೇರಿ, ಆ. ೧೯: ವೀರಾಜಪೇಟೆ ಕಾವೇರಿ ಕಾಲೇಜು ಆವರಣದಲ್ಲಿ ಕಾನೂನು ಪದವಿ ಕಾಲೇಜನ್ನು ಪ್ರಾರಂಭಿಸಲಾಗಿದೆ ಎಂದು ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೆಪAಡ ಸುಗುಣ ಮುತ್ತಣ್ಣ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಾನೂನು ಕಾಲೇಜು ಪ್ರಾರಂಭಿಸಬೇಕೆAಬ ಕೊಡಗಿನ ಶಿಕ್ಷಣ ಪ್ರೇಮಿಗಳ ಮನದಿಂಗಿತವನ್ನು ಅರಿತು ಇಲ್ಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಾನೂನು ಪದವಿ ಶಿಕ್ಷಣವನ್ನು ಕೊಡಿಸುವ ನಿಟ್ಟಿನಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ವೀರಾಜಪೇಟೆಯ ಕಾವೇರಿ ಕಾಲೇಜ್ ಆವರಣದಲ್ಲಿ ಬೆಂಗಳೂರು ಕೆ.ವಿ.ವಿ. ಎಜುಕೇಷನ್ ಟ್ರಸ್ಟ್ ಅವರ ಸಹಯೋಗದೊಂದಿಗೆ ಮೂರು ವರ್ಷಗಳ ಕಾನೂನು ಪದವಿ ಕಾಲೇಜನ್ನು ನೂತನವಾಗಿ ಪ್ರಾರಂಭಿಸಲಾಗಿದ್ದು ಇದಕ್ಕೆ ಸಂಬAಧಿಸಿದAತೆ ರಾಜ್ಯ ಸರ್ಕಾರ ಮತ್ತು ಬಾರ್ ಕೌನ್ಸಿಲ್‌ನ ಅನುಮತಿಯನ್ನು ಪಡೆದುಕೊಂಡಿದೆ ಎಂದರು. ಈ ಕಾನೂನು ಪದವಿ ಕಾಲೇಜು ಕರ್ನಾಟಕ ರಾಜ್ಯ ಕಾನೂನು ಮಹಾ ವಿಶ್ವವಿದ್ಯಾನಿಲಯ ಹುಬ್ಬಳ್ಳಿ ಮಾನ್ಯತೆಗೊಳಪಟ್ಟಿದ್ದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ದೆಹಲಿ ಇವರಿಂದ ಅನುಮೋದನೆಗೊಂಡಿದೆ.

ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿರುವ ಏಕೈಕ ಕಾನೂನು ಪದವಿ ಕಾಲೇಜು ಇದಾಗಿದ್ದು, ಇದೇ ಶೈಕ್ಷಣಿಕ ವರ್ಷದಿಂದ ಮೂರು ವರ್ಷಗಳ ಕಾನೂನು ಪದವಿ ಕೋರ್ಸ್ಗಳಿಗೆ ದಾಖಲಾತಿ ಪ್ರಾರಂಭಿಸಲಾಗಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನಿಗದಿಪಡಿಸಿರುವ ದಿನಾಂಕದAತೆ ತಾ.೨೮ರಂದು ಪ್ರವೇಶಾತಿ ಪಡೆಯಲು ಕೊನೆಯ ದಿನವಾಗಿದೆ. ತರಗತಿಗಳು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗುತ್ತವೆ.

ಮೂರು ವರ್ಷದ ಕಾನೂನು ಪದವಿ ಶಿಕ್ಷಣಕ್ಕೆ ಅತ್ಯಾಧುನಿಕ ಸೌಲಭ್ಯದೊಂದಿಗೆ ನುರಿತ ಉಪನ್ಯಾಸಕರು, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಮಾದರಿ ಕೋರ್ಟ್, ಇಂಟರ್ನ್ಶಿಪ್ ಸಹಾಯ, ಪ್ರಾಯೋಗಿಕ ತರಗತಿಗಳು, ಕರ್ನಾಟಕ ಲಾ ಅಕಾಡೆಮಿ ಇವರೊಂದಿಗೆ ಆನ್‌ಲೈನ್ ಉಪಾನ್ಯಾಸಗಳು, ವಸತಿ ನಿಲಯ ಬಸ್ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಪ್ರವೇಶಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್ ೮೭೯೨೮೩೯೧೭೬, ೯೮೪೪೨೩೧೧೯೧ ಸಂಪರ್ಕಿಸಬಹುದೆAದು ಸುಗುಣ ಮುತ್ತಣ್ಣ ತಿಳಿಸಿದರು.

ಸೊಸೈಟಿಯ ಗೌರವ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ೬೦ ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳು ಕಾನೂನು ಪದವಿಗೆ ಪ್ರವೇಶ ಪಡೆಯಬಹುದಾಗಿದೆ ಎಂದರು.

ಕೆವಿವಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಜಿ.ಎನ್. ನಾಗೇಂದ್ರ ಮಾತನಾಡಿ ಮಾನ್ಯತೆ ಪಡೆದ ವಿವಿಯಿಂದ ಡಿಗ್ರಿ ಪಡೆದ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಬಹುದಾಗಿತ್ತು ಕೊಡಗಿನವರಿಗೂ ಆದ್ಯತೆ ನೀಡಲಾಗುತ್ತದೆ. ಮೆರಿಟ್ ಆಧಾರದಲ್ಲಿ ವಿವಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದರು.

ಗೋಷ್ಠಿಯಲ್ಲಿ ಕೆವಿವಿ ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿ ವೇದಿಕ ರೆಡ್ಡಿ, ಸದಸ್ಯ ಟ್ರಸ್ಟಿ ಪ್ರಶಾಂತ್ ಉಪಸ್ಥಿತರಿದ್ದರು.