ಸೋಮವಾರಪೇಟೆ, ಆ. ೧೯: ಆಲೇಕಟ್ಟೆ ರಸ್ತೆಯಲ್ಲಿನ ಸೈನಿಕ ಬಡಾವಣೆ-ಕಾವೇರಿ ಬಡಾವಣೆಯಲ್ಲಿರುವ ಏಕದಂತ ಸೇವಾ ಸಮಿತಿ ಹಾಗೂ ಯುವಕ ಸಂಘದ ಆಶ್ರಯದಲ್ಲಿ ತಾ. ೨೭ ಹಾಗೂ ೨೮ರಂದು ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಎರಡನೇ ವರ್ಷದ ಗೌರಿ ಗಣೇಶೋತ್ಸವ ಅಂಗವಾಗಿ ಸೈನಿಕ ರಸ್ತೆಯ ಬದಿಯಲ್ಲಿರುವ ಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟಗಳನ್ನು ಆಯೋಜಿಸಲಾಗಿದೆ. ತಾ. ೨೭ ರಂದು ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ: ೭೬೧೯೧೫೦೦೮೫, ೯೪೭೬೫೨೩೭೮೭ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.