ಸೋಮವಾರಪೇಟೆ, ಆ. ೧೭: ಕಳೆದ ಒಂದು ತಿಂಗಳಿನಿAದ ಇಲ್ಲಿನ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ನಿರಂತರವಾಗಿ ನಡೆದ ಕರ್ಕಾಟಕ (ಆಟಿ) ಮಾಸದ ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನಗೊAಡಿತು.

ಜುಲೈ ೧೭ರಂದು ಆರಂಭವಾದ ಪೂಜೆಯು ಅಶ್ವರೂಢ ಪಾರ್ವತಿ ಹೋಮದೊಂದಿಗೆ ಕೊನೆಗೊಂಡಿತು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಹಾಗೂ ಶ್ರೀಮಂಜುನಾಥಸ್ವಾಮಿ ದೇವಾಲಯದ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ದುರ್ಗಾದೀಪ ನಮಸ್ಕಾರ ಪೂಜೆಯು ನೆರವೇರಿತು.

ಕರ್ಕಾಟಕ ಮಾಸದಲ್ಲಿ ಭಗವತಿದೇವಿಗೆ ನಿತ್ಯ ದುರ್ಗಾದೀಪ ನಮಸ್ಕಾರ ಪೂಜೆಯು ನೆರವೇರಿತು. ಅಲ್ಲದೇ ಶತ್ರು ಸಂಹಾರ ಪೂಜೆ, ನಾಗರಪಂಚಮಿ ವಿಶೇಷ ಪೂಜೆ, ಶ್ರೀಅಯ್ಯಪ್ಪಸ್ವಾಮಿಗೆ ನಿರಾಂಜನ ಸೇವೆ, ನಿತ್ಯ ಸಂಕಲ್ಪ ಸೇವೆ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು. ಕ್ಷೇತ್ರದಲ್ಲಿ ಕಳೆದ ೨೨ ವರ್ಷಗಳಿಂದ ನಿರಂತರವಾಗಿ ಆಟಿ ಮಾಸದಲ್ಲಿ ಒಂದು ತಿಂಗಳು ದುರ್ಗಾದೀಪ ನಮಸ್ಕಾರ ಪೂಜೆಯನ್ನು ನಡೆಸುತ್ತಿದ್ದು, ಕ್ಷೇತ್ರದ ಭಕ್ತಾದಿಗಳ ಸಹಕಾರ, ಆಡಳಿತ ಮಂಡಳಿ ಹಾಗೂ ಅರ್ಚಕರುಗಳ ಸಹಕಾರದೊಂದಿಗೆ ಪೂಜಾ ಕೈಂಕರ್ಯಗಳನ್ನು ನಡೆಸಲು ಸಾಧ್ಯವಾಗಿದೆ. ಒಂದು ತಿಂಗಳು ಜರುಗಿದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಭಕ್ತಾದಿಗಳು ನಿತ್ಯ ಭಜನೆಯೊಂದಿಗೆ ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಭಕ್ತಾದಿಗಳಿಗೆ ಅನ್ನದಾನವನ್ನೂ ಕೂಡ ಕ್ಷೇತ್ರದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು ಎಂದು ಶ್ರೀಮುತ್ತಪ್ಪಸ್ವಾಮಿ ಹಾಗೂ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಅಧ್ಯಕ್ಷ ಎನ್.ಡಿ.ವಿನೋದ್