Ãರಾಜಪೇಟೆ, ಆ ೧೭: ವೀರಾಜಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಕಾನೂರು ವಲಯದ ಬ್ರಹ್ಮಗಿರಿ ಕಾರ್ಯಕ್ಷೇತ್ರದ ಕೋತೂರು - ಬೊಮ್ಮಾಡು ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು.
ನಾಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಯ್ಯ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಪರಿಸರದ ಬಗ್ಗೆ ಮಾತನಾಡಿ ಗಿಡಮರಗಳನ್ನು ಬೆಳೆಸಬೇಕು, ನೆಟ್ಟ ಗಿಡಗಳನ್ನು ಪೋಷಣೆ ಮಾಡಬೇಕು ಎಂದರು. ಕೃಷಿ ಮೇಲ್ವಿಚಾರಕ ವಸಂತ್, ಶಾಲಾ ಶಿಕ್ಷಕರಾದ ದಿವ್ಯ ಪಿ.ಎಂ, ಲಕ್ಷಿ÷್ಮ ಪಿ.ಕೆ. ಪ್ರವೀಣ್, ಎಚ್.ಎನ್., ಲಕ್ಷಿ÷್ಮ ಪಿ.ಎಸ್., ತೀರ್ಥಂಜಲಿ ಬಿ.ಪಿ., ರೂಪ ಜಿ.ಕೆ., ಒಕ್ಕೂಟದ ಅಧ್ಯಕ್ಷರಾದ ಸುನೀತಾ, ಸೇವಾಪ್ರತಿನಿಧಿ ಮುತ್ತಪ್ಪ, ಶಾಲಾ ಮಕ್ಕಳು ಇದ್ದರು.
ಶಾಲಾ ಆವರಣದಲ್ಲಿ, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು.