ಮಡಿಕೇರಿ, ಆ. ೧೭: ಜಿಲ್ಲೆಯಲ್ಲಿ ಕೊನೆಯ ಪಾದದಿಂದ ಆಶ್ಲೇಷ ಮಳೆ ಅಬ್ಬರ ತೋರಿದ್ದು, ತಾ. ೧೬ ರಿಂದ ಆರಂಭಗೊAಡಿರುವ ಮಖಾಮಳೆ ನಕ್ಷತ್ರದಲ್ಲೂ ಇದು ಮುಂದುವರಿದಿದೆ. ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಮೈ ಕೊರೆಯುವ ಚಳಿಯೊಂದಿಗೆ ಸಣ್ಣ ಪ್ರಮಾಣದ ಗಾಳಿಯಿಂದಲೂ ಜನರು ಪರಿತಪಿಸುತ್ತಿದ್ದಾರೆ.
ಬಹುತೇಕ ಇಡೀ ಜಿಲ್ಲೆಯಲ್ಲಿ ಮಳೆಗಾಲದ ಚಿತ್ರಣವಿದ್ದು, ಜನ - ಜೀವನ ಅಸ್ತವ್ಯಸ್ತಗೊಂಡAತಿದೆ. ತಾ. ೧೫ರ ಸ್ವಾತಂತ್ರೊö್ಯÃತ್ಸವ ದಿನದಂದೂ ಜನರ ಸಂಭ್ರಮಾ ಚರಣೆಗೆ ಮಳೆಯಿಂದಾಗಿ ಅಡ್ಡಿಯಾಗಿತ್ತು. ಶನಿವಾರ ಹಾಗೂ ಭಾನುವಾರವ ಮಳೆಯ ತೀವ್ರತೆ ಹೆಚ್ಚಿದೆ. ಹವಾಮಾನ ಇಲಾಖೆ ಸೋಮವಾರದ ತನಕ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೭೯ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೧೪, ಸೋವ Äವಾರಪೇಟೆ ೨.೭೧, ವೀರಾಜಪೇಟೆ ೧.೩೮ , ಪೊನ್ನಂಪೇಟೆ ೧.೭೦ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೦೨ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಜನರು ನಲುಗುವಂತಾಗಿದೆ.