ಮಡಿಕೇರಿ ಆ. ೧೭: ನಗರದ ರಾಜರಾಜೇಶ್ವರಿ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಮಡಿಕೇರಿಯಿಂದ ಪ್ರಾಯೋಜಿಸಲ್ಪಟ್ಟ ಇಂಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ, ಕಾರ್ಯದರ್ಶಿಯಾಗಿ ಪೆಮ್ಮಯ್ಯ ಅಧಿಕಾರ ಸ್ವೀಕರಿಸಿದರು. ಎಂ.ಈಶ್ವರ ಭಟ್ ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಪದಗ್ರಹಣ ನೀಡಿದರು. ನಂತರ ಮಾತನಾಡಿದ ಅವರು, ಎಳೆ ವಯಸ್ಸಿನಲ್ಲಿಯೇ ದೊರೆತ ನಾಯಕತ್ವದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದಿನ ಜೀವನವನ್ನು ಉಜ್ವಲಗೊಳಿಸುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು. ರೋಟರಿ ಮಡಿಕೇರಿಯ ಅಧ್ಯಕ್ಷೆ ಲಲಿತ ರಾಘವನ್ ಮಾತನಾಡಿ, ೧೨ ರಿಂದ ೧೮ ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸುವ ಸದುದ್ದೇಶದಿಂದ ಅಂತಾರಾಷ್ಟಿçÃಯ ರೋಟರಿ ಸಂಸ್ಥೆ ಇಂಟರಾಕ್ಟ್ ಕ್ಲಬ್‌ನ್ನು ರಚಿಸಿದ್ದು, ಇದರ ಧ್ಯೇಯೋದ್ದೇಶಗಳನ್ನು ಅರಿತುಕೊಳ್ಳಬೇಕೆಂದು ವಿವರಿಸಿದರು.

ರೋಟರಿ ಕಾರ್ಯದರ್ಶಿ ಆದರ್ಶ್ ಸೋಮಣ್ಣ, ಇಂಟರಾಕ್ಟ್ ಸಮಿತಿ ಅಧ್ಯಕ್ಷೆ ಮೃಣಾಲಿನಿ, ಯುವ ವಿಭಾಗದ ನಿರ್ದೇಶಕÀ ಅನಿಲ್ ಕೃಷ್ಣಾನಿ, ರಾಜೇಶ್ವರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚಿನ್ ವಾಸುದೇವ, ಕಾಲೇಜು ಆಡಳಿತಾಧಿಕಾರಿ ಲಕ್ಷಿö್ಮ ಸಚಿನ್ ಉಪಸ್ಥಿತರಿದ್ದರು.