ಮಡಿಕೇರಿ, ಆ. ೧೭: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಎಂ.ಎನ್. ತನ್ಮಯ್‌ನನ್ನು ಮಡಿಕೇರಿ ಲಯನ್ಸ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ, ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮದನ್ ಮಾದಯ್ಯ, ಕಾರ್ಯದರ್ಶಿ ಕೆ. ಮಧುಕರ್, ವಲಯಾಧ್ಯಕ್ಷ ಕೆ.ಎಸ್. ನಟರಾಜ್, ಖಜಾಂಜಿ ಕೆ. ದಾಮೋದರ್ ಸೇರಿದಂತೆ ಗಣ್ಯರು ಸನ್ಮಾನಿಸಿದರು.