ಗೋಣಿಕೊಪ್ಪಲು, ಆ.೨೪: ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವೀರಾಜಪೇಟೆಯ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ನವದೆಹಲಿಯಲ್ಲಿ ಭೇಟಿ ಮಾಡಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ವೀರಾಜಪೇಟೆ ಪುರಸಭಾ ನಿಯೋಗವನ್ನು ನವದೆಹಲಿಗೆ ಬರಮಾಡಿಕೊಳ್ಳುವ ಮೂಲಕ ಸೋನಿಯಾ ಅವರನ್ನು ಭೇಟಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವೀರಾಜಪೇಟೆ ಪುರಸಭೆಯ ನಿಯೋಗವನ್ನು ಸೋನಿಯಾಗಾಂಧಿ ಬರಮಾಡಿಕೊಂಡು ಕೊಡಗಿನ ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುರಸಭಾ ಅಧ್ಯಕ್ಷರಾದ ಮನೆಯಪಂಡ ದೇಚಮ್ಮ ಕಾಳಪ್ಪ, ಸದಸ್ಯರುಗಳಾದ ಎಸ್.ಹೆಚ್. ಮತೀನ್, ರಾಜೇಶ್ ಪÀÀದ್ಮನಾಭ, ರಾಫಿ, ಬೆನ್ನಿ ಅಗಸ್ಟಿನ್ ನಿಯೋಗದಲ್ಲಿದ್ದರು.
ಸಂಸತ್ ಕಲಾಪದ ಕೊನೆಯ ದಿನದಂದು ಇವರುಗಳು ಕಲಾಪದ ಆಗು - ಹೋಗುಗಳನ್ನು ಅಧ್ಯಯನ ಮಾಡಿದರು. ಬಳಿಕ ಸೋನಿಯಾ ಅವರೊಂದಿಗೆ ಭೇಟಿಯಾಗಿದ್ದು, ಈ ಸಂದರ್ಭ ಅವರು ಕೊಡಗು ಹಾಗೂ ಕೊಡಗಿನ ಸಂಸ್ಕೃತಿಯ ಬಗ್ಗೆ ತಮಗೆ ಅರಿವಿದ್ದು, ವಿಶೇಷ ಅಭಿಮಾನವಿರುವುದಾಗಿ ತಿಳಿಸಿದ್ದಾಗಿ ದೇಚಮ್ಮ ಕಾಳಪ್ಪ ಅವರು “ಶಕ್ತಿ''ಗೆ ತಿಳಿಸಿದರು.