ಮಡಿಕೇರಿ, ಆ. ೧೬: ಜಿಲ್ಲೆಯಲ್ಲಿ ಹೃದ್ರೋಗ ತಜ್ಞರ ವಿಭಾಗವಿಲ್ಲದೆ ಹೃದಯ ಸಂಬAಧಿ ಕಾಯಿಲೆಗಳಿಗೆ ಹೊರ ಜಿಲ್ಲೆಗಳಿಗೆ ತೆರಳುವಂತಾಗಿದೆ. ಈ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆಯಲ್ಲಿಯೇ ಹೃದ್ರೋಗ ವಿಭಾಗ ತೆರೆಯಲು ಪ್ರಯತ್ನ ಆಗುತ್ತಿದೆ. ಈ ಸಂಬAಧ ಮಾತುಕತೆ ನಡೆದಿದ್ದು ರೂ. ೧೦ ಕೋಟಿ ವೆಚ್ಚದಲ್ಲಿ ವಿಭಾಗ ತೆರೆಯಲಾಗುವದೆಂದು ಶಾಸಕ ಡಾ.ಮಂತರ್ ಗೌಡ ಹೇಳಿದರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ಆವರಣದಲ್ಲಿರುವ ೪೫೦ ಹಾಸಿಗೆ ಸಾಮರ್ಥ್ಯದ ಬೋಧಕ ಆಸ್ಪತ್ರೆ ಕಟ್ಟಡದ ಉಳಿಕೆ ಹಾಗೂ ಹೆಚ್ಚುವರಿ ಕಟ್ಟದ ಎರಡನೇ ಹಂತದ ಕಾಮಗಾರಿಗಳಿಗೆ ಶುಕ್ರವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಸ್ಪತ್ರೆಯಲ್ಲಿ ರೇಡಿಯಾಜಿಸ್ಟ್ ವಿಭಾಗದಲ್ಲಿ ಕೊರತೆಯಿದೆ, ಅವಶ್ಯವೆನಿಸಿದಲ್ಲಿ ವೈದ್ಯಕೀಯ ಸೇವೆಯಲ್ಲೂ ಕೈಜೋಡಿಸುವದಾಗಿ ಶಾಸಕರು ಹೇಳಿದರು.