ಗೋಣಿಕೊಪ್ಪ ವರದಿ, ಆ. ೨೩: ಕೊಡವ ಕೂಟಾಳಿಯಡ ಕೂಟ ಸಂಘಟನೆಯ ಅಧ್ಯಕ್ಷರಾಗಿ ಚೊಟ್ಟಂಡ ಪ್ರಭು ಸೋಮಯ್ಯ, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.

ಗೋಲ್ಡನ್‌ಗೇಟ್ ಸಭಾಂಗಣ ದಲ್ಲಿ ಸಂಘಟನೆ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಂಘಟನೆಯ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಆಡಳಿತ ಮಂಡಳಿಯ ಆಯ್ಕೆ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಚೆಕ್ಕೆರ ರಾಜೇಶ್, ಖಜಾಂಚಿಯಾಗಿ ಮಾಚಿಮಡ ಡಿಂಪಲ್, ನಿರ್ದೇಶಕರುಗಳಾಗಿ ಕಾಂಗಿರ ಸಂತೋಷ್ ದೇವಯ್ಯ, ಅಮ್ಮಾಟಂಡ ಚೇತನ್, ಚೇಂದಿರ ಪ್ರಿಯಾ ಲೋಹಿತ್, ನೂರೇರ ಸರಿತ ಉತ್ತಯ್ಯ, ಕೊಟ್ಟಂಗಡ ಕವಿತ ವಾಸುದೇವ, ಅಜ್ಜಮಾಡ ಸಾವಿತ್ರಿ, ಬೊಜ್ಜಂಗಡ ಭವ್ಯ ದೇವಯ್ಯ, ಇಟ್ಟಿರ ಭವ್ಯ ಈಶ್ವರ್, ಪಾಂಡಿರ ದಿವ್ಯ ಉತ್ತಪ್ಪ, ಚೆಕ್ಕೆರ ಹೇಮಾ ಆಯ್ಕೆಗೊಂಡರು. ಸದಸ್ಯೆ ಚೋವಂಡ ಜಮುನಾ ಸುರೆಶ್ ಪ್ರಾರ್ಥಿಸಿದರು. ಕಾರ್ಯದರ್ಶಿ ಕಬ್ಬಚ್ಚಿರ ಕಾರ್ಯಪ್ಪ ವಾರ್ಷಿಕ ವರದಿ ವಾಚಿಸಿ, ವಂದಿಸಿದರು. ಖಜಾಂಚಿ ಬೊಜ್ಜಂಗಡ ಭವ್ಯ ಲೆಕ್ಕಪತ್ರ ಮಂಡಿಸಿದರು.ಸAಘಟನೆಯ ಸ್ಥಾಪಕ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್, ಗೌರವಾಧ್ಯಕ್ಷ ಚಂಗುಲAಡ ಸೂರಜ್ ಇದ್ದರು.