ಮಡಿಕೇರಿ, ಆ. ೨೨: ಧರ್ಮಸ್ಥಳ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸತ್ಯ ಮತ್ತು ಧರ್ಮಕ್ಕೆ ಹೆಸರಾದ ಶ್ರೀ ಮಂಜುನಾಥನ ಸನ್ನಿಧಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೆಲವು ಧರ್ಮದ್ರೋಹಿಗಳು, ಎಡ ಪಂಥೀಯರು ಅಪಪ್ರಚಾರ ಮಾಡುವ ಮೂಲಕ ಕ್ಷೇತ್ರಕ್ಕೆ ಅಪಚಾರವೆಸಗುತ್ತಿದ್ದಾರೆಂದರು. ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂಳಲಾಗಿದೆಯೆನ್ನುವ ಅನಾಮಿಕ ವ್ಯಕ್ತಿಯ ದೂರನ್ನು ಆಧರಿಸಿ ಗುಂಡಿಗಳನ್ನು ತೋಡಿದರು ಸೂಕ್ತವಾದ ಯಾವುದೇ ಸಾಕ್ಷಾö್ಯಧಾರಗಳು ದೊರಕಿಲ್ಲ. ದೂರು ನೀಡುವ ಹಂತದಲ್ಲೆ ಅನಾಮಿಕ ವ್ಯಕ್ತಿ ನೀಡಿರುವ ದೂರಿನಲ್ಲಿ ಹುರುಳಿದೆಯೇ ಎನ್ನುವುದನ್ನು ಪರಿಶೀಲಿಸದೆ ಪ್ರಕರಣವನ್ನು ಸರ್ಕಾರ ಎಸ್‌ಐಟಿ ತನಿಖೆಗೆ ಒಪ್ಪಿಸಿ ಇದೀಗ ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವ ಮೊದಲಾಗಿ ಷಡ್ಯಂತ್ರಕ್ಕೆ ಸಂಬAಧಿಸಿದAತೆ ತನಿಖೆ ನಡೆಸಲೆಂದು ತೀಕ್ಷ÷್ಣವಾಗಿ ನುಡಿದರು.
ಅನಾಮಿಕ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆೆಯಿಂದ ಆತನ ಆರೋಪಗಳಿಗೆ ಯಾವುದೇ ಪುರಾವೆಗಳು ದೊರಕಿಲ್ಲ. ಇದೀಗ ಗೃಹಸಚಿವರು ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎನ್ನುವ ಮಾತನಾಡುತ್ತಿದ್ದಾರೆಂದು ಟೀಕಿಸಿ, ಇಂದು ಶ್ರೀ ಧರ್ಮಸ್ಥಳಕ್ಕೆ ಸಂಬAಧಿಸಿದAತೆ ಅನ್ಯ ಧರ್ಮೀಯ ವ್ಯಕ್ತಿ ಆರೋಪಗಳನ್ನು ಮಾಡಿದ್ದಾನೆ. ಅದೇ ನಾವು ಅನ್ಯಧರ್ಮೀಯರ ವಿರುದ್ಧ ಏಳನೇ ಪುಟಕ್ಕೆ
ಆರೋಪಗಳನ್ನು ಮಾಡಿದ್ದರೆ ಸರ್ಕಾರ ಒಪ್ಪುತಿತ್ತೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿ, ಅನಾಮಿಕ ವ್ಯಕ್ತಿಯ ಬಗ್ಗೆ ತನಿಖೆÉ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹಿಂದೂ ಧಾರ್ಮಿಕ ಕೇಂದ್ರಕ್ಕೆ ಧಕ್ಕೆಯನ್ನುಂಟುಮಾಡುವ ಈ ಪ್ರಕರಣಕ್ಕೆ ಸರ್ಕಾರ ತಾರ್ಕಿಕ ಅಂತ್ಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಬಿಜೆಪಿ ದೊಡ್ಡ ಮಟ್ಟದ ಹೋರಾಟಗಳನ್ನು ರೂಪಿಸಲಿದೆಯೆಂದು ತಿಳಿಸಿದ ಅವರು, ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರನ್ನು ತಕ್ಷಣ ಬಂಧಿಸಬೇಕೆAದು ಆಗ್ರಹಿಸಿದರು.
ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಶ್ರೀ ಧರ್ಮಸ್ಥಳ ಕ್ಷೇತ್ರ ಮಾತ್ರವಲ್ಲ ಹಿಂದೂಗಳ ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡಿ ಹಿಂದೂಗಳನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಇಲ್ಲಿಯವರೆಗಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಡಪಂಥೀಯರು, ದೇಶದ್ರೋಹಿಗಳು ತಲೆಎತ್ತುವ ಕಾರ್ಯ ನಡೆಯುತ್ತಿದೆಯೆಂದು ಆರೋಪಿಸಿದರು.
ಅನ್ಯಧರ್ಮೀಯ ವ್ಯಕ್ತಿಯೊಬ್ಬಾತ ಯೂಟ್ಯೂಬ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಿದ್ದಾನೆ. ಇದೇ ರೀತಿ ಹಿಂದೂಗಳು ನಡೆದುಕೊಂಡರೆ ಏನಾದೀತೆಂದು ಪ್ರÀಶ್ನಿಸಿ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳೊAದಿಗೆ ಎಫ್‌ಐಆರ್ ಗ್ಯಾರಂಟಿಯೂ ನಮಗೆ ದೊರಕುತ್ತದೆಂದು ಮಾರ್ಮಿಕವಾಗಿ ನುಡಿದರು.
ಪ್ರಸ್ತುತ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ನಡೆಸಿ ಕೊಳ್ಳಲಾಗುತ್ತಿದೆಯೆಂದು ಆರೋಪಿಸಿದ ಕೆ.ಜಿ. ಬೋಪಯ್ಯ, ಮುಂಬರುವ ಹಿಂದೂಗಳ ಸಂಭ್ರಮದ ಶ್ರೀ ಗಣೇಶೋತ್ಸವಕ್ಕೆ ಈಗಾಗಲೇ ಹತ್ತು ಹಲವು ನಿಬಂಧನೆಗಳನ್ನು ಹಾಕುವ ಮೂಲಕ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯನ್ನುಂಟುಮಾಡುವ ಪ್ರಯತ್ನಗಳು ನಡೆದಿದೆ. ಉತ್ಸವದ ಆಚರಣೆ ಬೆಳಿಗ್ಗೆ ೬ ರಿಂದ ರಾತ್ರಿ ೧೦ ರವರೆಗೆ ಮಾತ್ರ ಎನ್ನಲಾಗುತ್ತಿದೆ. ಇದು ಯಾವ ನಿಯಮವೆಂದು ಪ್ರಶ್ನಿಸಿ, ವಿಶೇಷ ಸಂದರ್ಭಗಳಲ್ಲಿ ರಾತ್ರಿ ೧೨ ಗಂಟೆಯವರೆಗೂ ಅವಕಾಶವನ್ನು ಕೊಡಲು ಸಾಧ್ಯವಿದೆಯೆಂದು ತಿಳಿಸಿದರು.
ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಶ್ರೀ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕೆಲವರು ಮನಸ್ಸಿಗೆ ಬಂದAತೆ ಆರೋಪಗಳನ್ನು ಮಾಡುತ್ತಿದ್ದಾರೆ. ಅನಾಮಿಕ ವ್ಯಕ್ತಿ ಆರೋಪಗಳನ್ನು ಮಾಡುವ ಹಂತದಲ್ಲೆ ಆತನನ್ನು ಮೊದಲು ಬಂಧಿಸಿ ತನಿಖೆÉ ನಡೆಸಬೇಕಿತ್ತು. ಇದಕ್ಕೆ ಬದಲಾಗಿ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಯಿತೆಂದು ತಿಳಿಸಿ, ಪೊಲೀಸರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸರ್ಕಾರ ಬಿಡುತ್ತಿಲ್ಲವೆಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರುಗಳಾದ ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಸಜಿಲ್ ಕೃಷ್ಣನ್, ನಾಗೇಶ್ ಕುಂದಲ್ಪಾಡಿ, ಕನ್ನಂಡ ಸಂಪತ್, ಪಿ.ಎಂ. ರವಿ, ಎಸ್.ಸಿ. ಸತೀಶ್, ಅರುಣ್ ಶೆಟ್ಟಿ,ಸÀವಿತಾ ರಾಕೇಶ್, ಕನ್ನಿಕೆ, ಉಮಾ ಪ್ರಭು, ಬೊಳ್ಳಜಿರ ಅಯ್ಯಪ್ಪ, ಅಪ್ಪಣ್ಣ, ಮನು ಮಂಜುನಾಥ್, ನೆಲ್ಲೀರ ಚಲನ್, ಡೀನ್ ಬೋಪಣ್ಣ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕಾಂಗೀರ ಸತೀಶ್ ಮೊದಲಾದವರು ಪಾಲ್ಗೊಂಡಿದ್ದರು.