ಮಡಿಕೇರಿ, ಆ. ೨೦ : ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತೀರ್ಪುಗಾರಿಕೆಯ ಗೊಂದಲದಿAದ ಚೌಡೇಶ್ವರಿ ಅಮ್ಮತ್ತಿ ತಂಡವು ಪಂದ್ಯದ ಅರ್ಧದಲ್ಲೇ ಹೊರನಡೆದ ಘಟನೆ ಮಂಗಳವಾರ ನಡೆದಿದೆ. ಫೈನಲ್ ಪಂದ್ಯವು ನೆಹರು ಎಫ್.ಸಿ ಪಾಲಿಬೆಟ್ಟ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ನಿಗದಿಯಾಗಿತ್ತು. ಪಂದ್ಯದ ಆರಂಭದಲ್ಲೇ ನೆಹರು ಎಫ್.ಸಿ ತಂಡವು ಅಜಯ್ ಅವರು ದಾಖಲಿಸಿದ ಗೋಲ್ ಆಫ್‌ಸೈಡ್ ಎಂದು ಅಮ್ಮತ್ತಿ ಆಟಗಾರರು ಅಪೀಲ್ ಮಾಡಿದರು. ಸೈಡ್ ತೀರ್ಪುಗಾರರು ಮೊದಲು ಆಫ್‌ಸೈಡ್ ಎಂದು ಪ್ಲಾö್ಯಗ್ ರೈಸ್ ಮಾಡಿ ನಂತರ ಕೆಳಗೆ ಇಳಿಸಿದ್ದಾರೆ ಎಂದು ಚೌಡೇಶ್ವರಿ ಅಮ್ಮತ್ತಿ ತಂಡದ ಆಟಗಾರರು ಆರೋಪಿಸಿದ್ದಾರೆ.

ಫುಟ್ಬಾಲ್ ನಿಯಮ ಬಾರದವರನ್ನು ತೀರ್ಪುಗಾರರನ್ನಾಗಿ ನೇಮಿಸಿ ಕಾಟಾಚಾರಕ್ಕೆ ದಸರಾ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ವಿರುದ್ಧ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತೀರ್ಪುಗಾರರ ಗೊಂದಲದಿAದ ತೀರ್ಪಿನಿಂದಾಗಿ ಚೌಡೇಶ್ವರಿ ಅಮ್ಮತ್ತಿ ತಂಡ ಫೈನಲ್ ಪಂದ್ಯದಿAದ ಹೊರ ನಡೆದು ಆಕ್ರೋಶ ಹೊರಹಾಕಿದ್ದಾರೆ. -ಇಸ್ಮಾಯಿಲ್ ಕಂಡಕರೆ