ಭಾಗಮಂಡಲ, ಆ. ೨೨: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಕೈಲ್ ಮುಹೂರ್ತ ಹಬ್ಬವನ್ನು ಆಗಸ್ಟ್ ೨೭ ಮತ್ತು ೨೮ ರಂದು ಆಚರಿಸಲಾಗುತ್ತಿದ್ದು ಪ್ರಸಕ್ತ ವರ್ಷ ಧಾರ್ಮಿಕ ಆಚರಣೆ ಗೌರಿ ಗಣೇಶ ಹಾಗೂ ಕೈಲ್ ಮುಹೂರ್ತ ಹಬ್ಬಗಳು ಜೊತೆಯಲ್ಲೇ ಬಂದಿರುವುದರಿAದ ಕೈಲ್ ಮುಹೂರ್ತ ಹಬ್ಬದ ಆಚರಣೆಯನ್ನು ಮುಂದೂಡುವುದಾಗಿ ಒಮ್ಮತದಿಂದ ತೀರ್ಮಾನಿಸಲಾಯಿತು. ಭಾಗಮಂಡಲದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.

ಈ ವರ್ಷ ಆಗಸ್ಟ್ ೨೭ರಂದು ಗೌರಿ ಗಣೇಶೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಗುತ್ತಿದೆ. ಅದೇ ಅವಧಿಯಲ್ಲಿ ಕೈಲ್ ಮುಹೂರ್ತ ಹಬ್ಬದ ಆಚರಣೆ ಸರಿಯಲ್ಲ. ಹಾಗಾಗಿ ಹಬ್ಬವನ್ನು ಆಗಸ್ಟ್ ೨೮ ಹಾಗೂ ೨೯ಕ್ಕೆ ಕೈಲ್ ಮುಹೂರ್ತ ಹಬ್ಬ ಆಚರಿಸಲಾಗುವುದು, ಕ್ರೀಡಾಕೂಟಗಳನ್ನು ತಾ.೨೯ರಂದು ಹಮ್ಮಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮರ್, ಗ್ರಾಮ ಪಂಚಾಯಿತಿ ಸದಸ್ಯ ರಾದ ನಾಗೇಶ್ ಶಿರಕಜೆ. ಭಾಗಮಂಡಲ ತಾವೂರು, ಕೋರಂಗಾಲ ತಣ್ಣಿಮಾನಿ ಗ್ರಾಮಗಳ ವಿವಿಧ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು, ಮೂರು ಗ್ರಾಮದ ದೇವಸ್ಥಾನದ ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು. -ಸುನಿಲ್