ಸೋಮವಾರಪೇಟೆ,ಆ.೨೦: ತಾಲೂಕಿನ ಭುವಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲನ್ನು ತುಳಿದು, ತಿಂದು ನಾಶಪಡಿಸುತ್ತಿವೆ. ಇದರಿಂದಾಗಿ ಈ ಭಾಗದ ಕೃಷಿಕರು ಬೆಳೆ ನಷ್ಟ ಅನುಭವಿಸುವಂತಾಗಿದೆ.

ಗ್ರಾಮದ ಕೆ.ಎಸ್. ವಿವೇಕ್ ಅವರಿಗೆ ಸೇರಿದ ೪ ಏಕರೆ ಜಾಗದಲ್ಲಿರುವ ತೆಂಗಿನ ತೋಟಕ್ಕೆ ಕಳೆದ ಒಂದು ವಾರದಿಂದಲೂ ಆಗಮಿಸುತ್ತಿರುವ ಎರಡು ಕಾಡಾನೆಗಳು, ಈವರೆಗೆ ೧೦ಕ್ಕೂ ಅಧಿಕ ತೆಂಗಿನ ಗಿಡಗಳು, ಮರಗೆಣಸು ಬೆಳೆಯನ್ನು ನಾಶಪಡಿಸಿವೆ.

ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಈವರೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ತಕ್ಷಣ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗಟ್ಟಬೇಕು. ಮತ್ತೆ ವಾಪಾಸ್ ಬರದಂತೆ ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ಬೆಳೆ ನಷ್ಟಕ್ಕೆ ಒಳಗಾದ ವಿವೇಕ್ ಒತ್ತಾಯಿಸಿದ್ದಾg