Àರಿಕೆ, ಆ. ೨೧: ಸಮೀಪದ ಎಳ್ಳುಕೊಚ್ಚಿ ಕುಡಿಯಂಗಲ್ ಬಳಿ ಬ್ರಹತ್ ಗಾತ್ರದ ಮರ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಡರಾತ್ರಿ ಮರ ಬಿದ್ದ ಪರಿಣಾಮ ಈ ಭಾಗದಿಂದ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನ ತೆರಳಲು ಸಾಧ್ಯವಾಗದೆ ಪೋಷಕರು ಪರದಾಡುವಂತಾಯಿತು. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಮರ ತೆರವುಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.