ಕೊಡ್ಲಿಪೇಟೆ, ಆ. ೨೩: ಕೊಡ್ಲಿಪೇಟೆಯ ಹಲಸಿನಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಯಿತು.
ಯು.ಎಸ್.ಎ.(ಅಮೇರಿಕಾ)ನ ಹೆಸರಾಂತ ಪ್ರಿನ್ಸ್ ಟನ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಸುಯೋಗ್ ಚಂದ್ರಮೌಳಿ ಹಾಗೂ ಸೋನಿ ಎ.ಐ ನ ರೀಸರ್ಚ್ ಸೈಂಟಿಸ್ಟ್ ರಕ್ಷಾ ಕುಮಾರಸ್ವಾಮಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದೇ ವಿಷಯದ ಅಧ್ಯಯನ ನಡೆಸಬೇಕು. ಕೇವಲ ಒಂದೇ ಪುಸ್ತಕದ ಅಧ್ಯಯನ ಸಾಲದು. ಒಂದು ವಿಷಯಕ್ಕೆ ಸಂಬAಧಿಸಿದAತೆ ಒಂದಕ್ಕಿAತ ಹೆಚ್ಚು ಪುಸ್ತಕಗಳ ಅಧ್ಯಯನ ನಡೆಸಬೇಕೆಂದು ಅವರು ಸಲಹೆ ಇತ್ತರು. ಬರಿ ವಿದ್ಯಾಭ್ಯಾಸವಷ್ಟೇ ಸಾಲದು, ಕೌಶಲ್ಯಗಳ ಕಲಿಕೆ ಅಗತ್ಯ ಎಂದು ಸಲಹೆ ನೀಡಿದರು. ನಂತರ ಆಧುನಿಕ ಯುಗದ ತಂತ್ರಜ್ಞಾನದ ಅಭಿವೃದ್ಧಿಯ ಬಗ್ಗೆ ಹಾಗೂ ನೂತನ ನಿರಂತರ ತಂತ್ರಜ್ಞಾನದ ಆವಿಷ್ಕಾರಗಳ ಬಗ್ಗೆ ಕನ್ನಡದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಚಂದ್ರಮೌಳಿ, ನಿರ್ದೇಶಕರಾದ ಬಿ.ಕೆ ಯತೀಶ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ನಿರಂಜನ್, ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪವಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಅಬ್ದುಲ್ ರಬ್, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕ ಯೋಗೇಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.