ಸೋಮವಾರಪೇಟೆ, ಆ.೨೦: ಇಲ್ಲಿನ ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ತಾ. ೨೨ರಂದು ಶ್ರಾವಣ ಮಾಸದ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಸೇವೆ, ೧೦.೩೦ ಕ್ಕೆ ದುರ್ಗಾಹೋಮ, ೧೨.೩೦ಕ್ಕೆ ಪೂರ್ಣಾಹುತಿ, ೧ ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ ೭ ಗಂಟೆಗೆ ವಿಶೇಷ ಮಹಾಮಂಗಳಾರತಿ, ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಅರ್ಚಕ ಬಸವಕುಮಾರ್ ಶಾಸ್ತಿçà ತಿಳಿಸಿದ್ದಾರೆ.