ನವದೆಹಲಿ, ಆ. ೨೨: ದೆಹಲಿ ಎನ್.ಸಿ.ಆರ್. ನಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾದ ಹಿನ್ನೆ ಲೆಯಲ್ಲಿ ಬೀದಿನಾಯಿಗಳ ತೆರವಿಗೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಕೊನೆಗೂ ತನ್ನ ಆದೇಶವನ್ನು ಸಡಿಲಿಸಿದ್ದು, ಸಂತಾನಹರಣ ಚಿಕಿತ್ಸೆ ಮಾಡಿಸಿ ಹೊರಗೆ ಬಿಡಬಹುದು ಎಂದು ಹೇಳಿದೆ.

ದೆಹಲಿ-ಎನ್.ಸಿ.ಆರ್ ಸುತ್ತಮುತ್ತ ಲಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವAತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ನಿರ್ದೇಶಿಸಿತ್ತು.

ಈ ನಿರ್ದೇಶನದ ವಿರುದ್ಧ ಶ್ವಾನ ಪ್ರಿಯರು ಮತ್ತು ಪ್ರಾಣಿ ಸಂಘಟನೆಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಬೀದಿ ನಾಯಿ ಗಳಿಗೆ ಲಸಿಕೆ, ಸಂತಾನ ಹರಣ ಚಿಕಿತ್ಸೆ ಮಾಡಿಸಿ ಬಳಿಕ ಅದೇ ಸ್ಥಳದಲ್ಲಿ ಬಿಡಬಹುದು ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠವು ನಿರ್ದೇಶನ ನೀಡಿದೆ.

ಆಕ್ರಮಣಕಾರಿ ನಡವಳಿಕೆ ಅಥವಾ ರೇಬೀಸ್ ಇರುವ ನಾಯಿಗಳಿಗೆ ಲಸಿಕೆ ನೀಡಲಾಗುತ್ತದೆ. ಅಂತಹ ರೋಗ ಪೀಡಿತ ನಾಯಿಗಳನ್ನು ಮಾತ್ರ ಬೀದಿಗಳಲ್ಲಿ ಬಿಡದೇ ಆಶ್ರಯ ತಾಣಗಳಿಗೆ ರವಾನಿಸಬೇಕು ಎಂದು ನ್ಯಾಯಮೂರ್ತಿ ನಾಥ್ ಹೇಳಿದರು.