ನಾಪೋಕ್ಲು, ಆ. ೨೨: ಕಾಫಿ ಬೆಳೆಗಾರರ ಮೇಲೆ ನಿರಂತರವಾಗಿ ದಬ್ಬಾಳಿಕೆ ಆಗುತ್ತಿದೆ. ಕಾಫಿಗೆ ಬೆಲೆ ಏರಿಕೆ ಆಗಿದ್ದರು ಬೆಳೆಗಾರರಿಗೆ ಅದರ ಲಾಭ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿರುವ ಕುಶಾಲನಗರದ ಕಾಫಿ ರಫ್ತು ಸಂಸ್ಥೆಗಳಿಗೆ ಮುತ್ತಿಗೆ ಕಾರ್ಯಕ್ರಮಕ್ಕೆ ಸೇವ್ ಕೊಡಗು ವೇದಿಕೆ ಹಾಗೂ ನಾಲ್ಕುನಾಡು ಕಾಫಿ ಬೆಳೆಗಾರರ ಒಕ್ಕೂಟ ವತಿಯಿಂದ ಬೆಂಬಲ ನೀಡಲಾಗುವುದು ಎಂದು ಕಾಫಿ ಬೆಳೆಗಾರ ಕುಲ್ಲೇಟಿರ ಅರುಣ್ ಬೇಬಾ ಹೇಳಿದರು.

ನಾಪೋಕ್ಲು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಕಾಫಿಗೆ ಬೆಲೆ ಏರಿಕೆಯಾದ ನಂತರ ಕೊಡಗಿನ ಬೆಳೆಗಾರರು ತುಸು ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾಫಿ ದರಕುಸಿದಿದ್ದು ಇದರಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರಿಗೆ ಪುನಃ ಕಾಫಿ ಧಾರಣೆಯಲ್ಲಿ ಚೇತರಿಗೆ ಕಂಡರೂ ಸಹ ಅಂರ‍್ರಾಷ್ಟಿçÃಯ ಮಾರುಕಟ್ಟೆಗೆ ಸರಿಯಾಗಿ ಇಲ್ಲಿ ಕಾಫಿಗೆ ಬೆಲೆ ನಿಗದಿ ಆಗುತ್ತಿಲ್ಲ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಕಾಫಿ ಬೆಳಗಾದ ಜಿನ್ನು ನಾಣಯ್ಯ ಮಾತನಾಡಿ ಶ್ರೀಮಂಗಲದ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿರುವ ಮುತ್ತಿಗೆ ಕಾರ್ಯಕ್ರಮಕ್ಕೆ ಸೇವ್ ಕೊಡಗು ವೇದಿಕೆ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು. ಕಾಫಿ ಬೆಳೆಗಾರ ಪಟ್ರಪಂಡ ಮೋಹನ್ ಮುದ್ದಪ್ಪ ಮಾತನಾಡಿ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಧಾರಣೆಯಿದ್ದರೂ ವ್ಯಾಪಾರಸ್ಥರು ದರ ಕಡಿಮೆ ಮಾಡುತ್ತಿದ್ದಾರೆ. ರಫ್ತುದಾರರು ಹಾಗೂ ಮಧ್ಯವರ್ತಿಗಳು ಅಂರ‍್ರಾಷ್ಟಿçÃಯ ಮಾರುಕಟ್ಟೆ ಬೆಲೆಗೆ ಸಂಬAಧಪಟ್ಟ ಬೆಲೆ ನಿಗದಿಪಡಿಸುತ್ತಿಲ್ಲ. ಹೋರಾಟಕ್ಕೆ ಕಾಫಿ ಬೆಳೆಗಾರರ ಸಂಪೂರ್ಣ ಬೆಂಬಲವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೇವ್ ಕೊಡಗು ವೇದಿಕೆ ಸದಸ್ಯರಾದ ಕುಲ್ಲೇಟಿರ ನಾಚಪ್ಪ, ಬಿದ್ದಾಟಂಡ ಡಿಕ್ಕಿ ಸೋಮಯ್ಯ, ನೂರಂಬಾಡ ಎಸ್.ಉದಯಶಂಕರ, ಫುಲ್ಲೇರ ಸನ್ನು ಸುಬ್ಬಯ್ಯ, ಬಿದ್ದಾಟಂಡ ಸಂಪತ್, ನಿಡುಮಂಡ ಕೃತಿ, ಕುಲ್ಲೇಟಿರ ರಾಜ ಪಾಲ್ಗೊಂಡಿದ್ದರು.