ನಾಪೋಕ್ಲು, ಆ. ೨೨: ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಬಾಚಮಂಡ ಯು. ಪೂವಣ್ಣ ಆಯ್ಕೆಯಾಗಿದ್ದಾರೆ.
ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಒಮ್ಮತದಿಂದ ಬಿ.ಯು.ಪೂವಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಅವರು ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಸಂದರ್ಭ ಸಮಿತಿಯ ಸದಸ್ಯರುಗಳಾದ ಕುಶ ಭಟ್, ಕೆ.ಸಿ. ರಮೇಶ್, ಸಿಡಿ. ಉಷಾ, ಕೆ.ಸಿ. ನೈಲ್, ಪಿ.ಎಂ. ನರೇಂದ್ರ, ಎ. ಜಗದೀಶ್, ಭೀಮಯ್ಯ, ಆರ್. ಉಲ್ಲಾಸ್, ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಪಿ. ಟಿ.ತಮ್ಮಯ್ಯ ಹಾಗೂ ಶ್ರೀಕಾಂತ್ ಹಾಜರಿದ್ದರು.