ಮಡಿಕೇರಿ, ಆ. ೨೧: ಜಮ್ಮಾಬಾಣೆ ವಿಚಾರಕ್ಕೆ ಸಂಬAಧಿಸಿದAತೆ ರಾಜ್ಯ ಸರಕಾರದ ಮೂಲಕ ಇಂದು ವಿಧಾನ ಪರಿಷತ್ನಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಆದರೆ ಈ ಮಸೂದೆ ಪ್ರಸ್ತುತ ಎದುರಾಗಿರುವ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಮರ್ಪಕವಾಗಿಲ್ಲ. ಬದಲಾಗಿ ಈಗಿರುವ ಬೇಡಿಕೆಗೆ ತದ್ವಿರುದ್ದವಾದಂತಿದೆ ಎಂಬುದಾಗಿ ಜಿಲ್ಲೆಯ ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ಗೌಡ ಅವರುಗಳು ಗಮನ ಸೆಳೆದರು.
ಈಗ ಮಂಡಿಸಲಾದ ತಿದ್ದುಪಡಿ ಮಸೂದೆಯನ್ನು ಸರಿಪಡಿಸಬೇಕಾಗಿದ್ದು, ಇದಕ್ಕೆ ವಿಧಾನಸಭೆಯ ಆಯ್ಕೆ ಸಮಿತಿ ರಚನೆ ಮಾಡಬೇಕೆಂಬ ಒತ್ತಾಯದೊಂದಿಗೆ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ. ಶಾಸಕರುಗಳ ಒತ್ತಾಯಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪೂರಕವಾಗಿ ಮಾತನಾಡಿದರು.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ತಿದ್ದುಪಡಿ ವಿದೇಯಕ ಮಂಡಿಸಿದ್ದು, ಈ ಬಗ್ಗೆ ಚರ್ಚೆ ನಡೆದು ಬಳಿಕ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸೂಚನೆಯನ್ವಯ ವಿಧಾನಸಭಾ ಆಯ್ಕೆ ಸಮಿತಿ ರಚಿಸಿ ಈ ಸಮಿತಿಯ ಮೂಲಕ ಮರುಪರಿಶೀಲನೆ ನಡೆಸಲು ಒಪ್ಪಿಗೆ ನೀಡಲಾಯಿತು. ಈ ಬಗ್ಗೆ ಕಾನೂನು ಸಚಿವರೂ ಸಮ್ಮತಿಯಿತ್ತರು.
ಜಮ್ಮಾಬಾಣೆ ಭೂ ಹಿಡುವಳಿ ವ್ಯವಸ್ಥೆ ಕುರಿತ ಮಸೂದೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್.ಕೆ. ಪಾಟೀಲ್ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು. ರಾಜ್ಯದ ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಭಿನ್ನ ಭೂ ಕಂದಾಯ ವ್ಯವÀಸ್ಥೆ ಚಾಲ್ತಿಯಲ್ಲಿರುವ ಪರಿಣಾಮ ಕೃಷಿಕರಿಗೆ ಸಮಸ್ಯೆಯಾಗುತ್ತಿದೆ ಎಂದ ಅವರು, ಕೊಡಗಿನ ಶಾಸಕರ ಅಭಿಪ್ರಾಯದ ಮೇರೆಗೆ ಮುಂದುವರೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಉದ್ದೇಶಿತ ತಿದ್ದುಪಡಿ ವಿಧೇಯಕ ವಿಶೇಷವಾಗಿ ಕೊಡಗಿಗೆ ಸಂಬAಧಪಟ್ಟಿದೆ. ಕಂದಾಯ ಸಚಿವರು ಕಾಳಜಿವಹಿಸಿ ತಿದ್ದುಪಡಿ ಮಾಡಲು ಪ್ರಯತ್ನಿಸಿದ್ದಾರೆ. ಕೂರ್ಗ್ಲ್ಯಾಂಡ್ ರೆವಿನ್ಯೂ ಮತ್ತು ರೆಗ್ಯುಲೇಷನ್ ಕಾಯಿದೆ ೧೯೬೪ರ ಭೂ ಕಂದಾಯ ಕಾಯಿದೆ ಜಾರಿ ತನಕ ಅಸ್ತಿತ್ವದಲ್ಲಿತ್ತು. ಜಮ್ಮಾಬಾಣೆ ವಿಚಾರದಲ್ಲಿ ಕರ್ನಾಟಕ ಸರಕಾರದ ಕಾಯಿದೆಯಲ್ಲಿಲ್ಲದ ಕೆಲವೊಂದು ನಿಯಮವನ್ನು ಮುಂದುವರೆಸಿಕೊAಡು ಬಂದಿರುವುದು ಜಠಿಲ ಸಮಸ್ಯೆಗೆ ಕಾರಣವಾಗಿದೆ. ಚೆಕ್ಕೇರ ಪೂವಯ್ಯ ಹಾಗೂ ರಾಜ್ಯ ಸರಕಾರದ ನಡುವಿನ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ತೀರ್ಪು ಪ್ರಕಟದ ಅಡಿ ೨ ತಿದ್ದುಪಡಿಯನ್ನೂ ತರಲಾಗಿದೆ. ಆದರೆ, ಪಟ್ಟೆದಾರರು ಮೃತಪಟ್ಟಿದ್ದರೂ ಅವರ ಹೆಸರನ್ನೂ ಮುಂದುವರೆಸಿಕೊAಡು ಹೋಗಲಾಗುತ್ತಿದೆ. ಕರ್ನಾಟಕ ಕಂದಾಯ ಇಲಾಖೆಯಲ್ಲಿ ಇದಕ್ಕೆ ಅವಕಾಶವಿಲ್ಲದಿದ್ದರೂ ಮುಂದುವರೆಯುತ್ತಿದೆ. ಇದೀಗ ಮಾಡಿರುವ ತಿದ್ದುಪಡಿ ನಮ್ಮ ಬೇಡಿಕೆಗೆ ತದ್ವಿರುದ್ಧವಾಗಿದೆ. ಹಾಗಾಗಿ ಮರುಪರಿಶೀಲನೆ ಕೈಗೊಳ್ಳಲು ಆಯ್ಕೆ ಸಮಿತಿ ರಚಿಸುವಂತೆ ಒತ್ತಾಯಿಸಿದರು.
ಮಡಿಕೇರಿ ಶಾಸಕ ಮಂತರ್ ಗೌಡ ಮಾತನಾಡಿ, ಪುನರ್ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಕಾನೂನಾತ್ಮಕ ಬದಲಾವಣೆ ಆಗಬೇಕು. ಆಯ್ಕೆ ಸಮಿತಿ ಮಾಡಲು ಒಪ್ಪಿಗೆ ನೀಡಬೇಕು ಎಂದರು. ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಗೊಂದಲ ಹಾಗೂ ಕೊಡಗಿನ ಕಂದಾಯ ಸಮಸ್ಯೆ ಕಷ್ಟಕರವಾಗಿರುವ ಹಿನ್ನೆಲೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದರು. ಸ್ಪೀಕರ್ ಯು.ಟಿ. ಖಾದರ್ ಅವರು ವಿಧಾನಸಭೆ ಜಂಟಿ ಸಮಿತಿ ರಚನೆಗೆ ಒಪ್ಪಿಗೆ ಸೂಚಿಸಿ ಪ್ರಕಟಿಸಿದರು.