ಮುಳ್ಳೂರು, ಆ. ೨೨: ಆಲೂರು-ಸಿದ್ದಾಪುರ ಗ್ರಾ.ಪಂ.ಗೆ ಸೇರಿದ ಮಾಲಂಬಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಗ್ರಾ.ಪಂ.ಜಾನುವಾರು ದೊಡ್ಡಿಯನ್ನು ನಿರ್ಮಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳ ದೊಡ್ಡಿ ಇಲ್ಲದ ಕಾರಣದಿಂದ ದೂರದ ಊರಿನಿಂದ ರೈತರು ಮಾಲಂಬಿ ಗ್ರಾಮದಲ್ಲಿದ್ದ ದೊಡ್ಡಿಗೆ ಜಾನುವಾರುಗಳನ್ನು ಕೂಡಿಹಾಕುತ್ತಿದ್ದರು. ಇದರಿಂದ ಗ್ರಾ.ಪಂ.ಗೆ ಆದಾಯ ಬರುತ್ತಿತ್ತು ಜಾನುವಾರುಗಳ ಸಾಕಾಣಿಕೆ ಕಮ್ಮಿಯಾದಂತೆ ಮಾಲಂಬಿ ಗ್ರಾಮದ ದೊಡ್ಡಿ ಅನಾಥವಾಯಿತು.
ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಜಾನುವಾರು ದೊಡ್ಡಿಯನ್ನು ಮಾಲಂಬಿ ಗ್ರಾಮಸ್ಥರು, ಯುವಕರು ಸೇರಿಕೊಂಡು ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಮೂಲಕ ಗಿಡಗಂಟಿಗಳಿAದ ಮುಚ್ಚಿಹೋಗಿ ಶಿಥಿಲಗೊಂಡಿದ್ದ ದೊಡ್ಡಿಯನ್ನು ದುರಸ್ತಿ ಮತ್ತು ಸ್ವಚ್ಛಗೊಳಿಸಿದ್ದಾರೆ. ಸಂಬAಧಪಟ್ಟ ಗ್ರಾ.ಪಂ.ಯವರು ದುರಸ್ತಿ ಪಡಿಸಿಕೊಡಬೇಕಾಗಿದ್ದ ಕೆಲಸವನ್ನು ಗ್ರಾಮಸ್ಥರು ಮಾಡುವ ಮೂಲಕ ಮಾದರಿಯಾಗಿದ್ದಾರೆ