ಮಡಿಕೇರಿ, ಆ. ೨೩: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿನ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಲಾಯಿತು.
ಇದಕ್ಕೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಶಾಸಕರಾದ ಪೊನ್ನಣ್ಣನವರು ಈ ವಿಚಾರವನ್ನು ಈಗಾಗಲೇ ತಿಳಿಸಿದ್ದು, ಆದಷ್ಟು ಶೀಘ್ರವಾಗಿ ಕೊಡಗು ಹೆಗ್ಗಡೆ ಸಮಾಜದ ಅಭಿವೃದ್ಧಿಗೆ ಅರ್ಥಿಕ ನೆರವನ್ನು ಬಿಡುಗಡೆ ಮಾಡುವ ಭರವಸೆ ನೀಡಿದರು. ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಕೊರಕುಟ್ಟೀರ ಸರ ಚಂಗಪ್ಪ, ಮಾಜಿ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ, ಸಮಾಜದ ಉಪಾಧ್ಯಕ್ಷರಾದ ಚರ್ಮಂಡ ಪೂವಯ್ಯ, ಖಜಾಂಚಿಗಳಾದ ಕೊರಂಡ ಪ್ರಕಾಶ್ ನಾಣಯ್ಯ, ಕೊರ್ಕಂಡ ಚಂದ್ರು ಮುಂತಾದವರು ಹಾಜರಿದ್ದರು.