ಮಡಿಕೇರಿ, ಆ. ೨೮: ಕರ್ನಾಟಕ ಜಾನಪದ ಪರಿಷತ್ ದುಬೈನ ಯುಎಇ ಘಟಕದ ವತಿಯಿಂದ ಜಾನಪದ ಕ್ಷೇತ್ರದಲ್ಲಿನ ಸೇವೆ ಹಾಗೂ ಸಾಧನೆಗಾಗಿ ನೀಡಲಾಗುವ ಹೆಚ್.ಎಲ್. ನಾಗೇಗೌಡ ಅಂತರರಾಷ್ಟಿçÃಯ ಜಾನಪದ ಪ್ರಶಸ್ತಿಗೆ ಪದ್ಮಶ್ರೀ ರಾಣಿ ಮಾಚಯ್ಯ ಭಾಜನರಾಗಿದ್ದಾರೆ. ಸೆ. ೬ ಮತ್ತು ೭ ರಂದು ದುಬೈನ ರಾಮಿಡ್ರೀಮ್ಸ್ ಪಂಚತಾರ ಹೊಟೇಲ್ ಸಭಾಂಗಣದಲ್ಲಿ ನಡೆಯುವ ಅಂತರರಾಷ್ಟಿçÃಯ ಜಾನಪದ ಉತ್ಸವದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.