ವೀರಾಜಪೇಟೆ, ಸೆ. ೫: ಜನಮನ ಸೆಳೆಯುವ ಗಣೇಶ ವಿಸರ್ಜನೋತ್ಸವಕ್ಕೆ ಐತಿಹಾಸಿಕ ಪಟ್ಟಣ ವೀರಾಜಪೇಟೆ ಸಜ್ಜಾಗಿದ್ದು, ತಾ. ೬ ರಂದು (ಇಂದು) ರಾತ್ರಿ ಏಕಕಾಲದಲ್ಲಿ ಪಟ್ಟಣದಲ್ಲಿ ೨೨ ಮೂರ್ತಿಗಳ ಶೋಭಾಯಾತ್ರೆ ನಡೆಯಲಿದೆ.

ವೀರಾಜಪೇಟೆಯ ವಿವಿಧ ದೇವಸ್ಥಾನ ಹಾಗೂ ಜಾಗಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ೬ರ ರಾತ್ರಿ ಶೋಭಾಯಾತ್ರೆ ಬಳಿಕ ತಾ. ೭ ರ ಬೆಳಿಗ್ಗೆ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ.

ಜಾತ್ರೆ ವಾತಾವರಣ

ವೀರಾಜಪೇಟೆ ಪಟ್ಟಣ ಮಧುವಣಗಿತ್ತಿಯಂತೆ ಶೃಂಗಾರಗೊAಡಿದ್ದು ನೋಡುಗರನ್ನು ಸೆಳೆಯುತ್ತಿದೆ. ರಾತ್ರಿ ಆಕರ್ಷಕ ವಿದ್ಯುತ್ ಅಲಂಕಾರದಿAದ ಕಂಗೊಳಿಸುತ್ತಿದೆ. ವಿಸರ್ಜನೆಯವರೆÀಗೂ ಜಾತ್ರೆ ವಾತಾವರಣ ನಿರ್ಮಾಣವಾಗಿದೆ.

ನಗರದ ೨೨ ಸ್ಥಳಗಳಲ್ಲಿ ಚತುರ್ಥಿiÀÄಂAದು ವಿಘ್ನವಿನಾಯಕನ ವಿವಿದ ಭಂಗಿಗಳಲ್ಲಿರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಇಂದು ಸಂಜೆ ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ಪುನಷ್ಕಾರಗಳಿಂದ ಎಲ್ಲಾ ಸಮಿತಿಗಳ ಉತ್ಸವ ಮೂರ್ತಿಗಳನ್ನು ವಿದ್ಯುತ್ ಅಲಂಕೃತ ಪಂಟಪದಲ್ಲಿ ಕುಳ್ಳಿರಿಸಿ ಶೋಭಾಯಾತ್ರೆಯ ಮೂಲಕ ಮುಖ್ಯ ಬೀದಿಗಾಗಿ ಸಾಗಿ ವಿಸರ್ಜಿಸಲಾಗುತ್ತದೆ.

ಮುಂಜಾಗ್ರತಾ ಕ್ರಮ

ಈ ಬಾರಿ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಬಿಗಿ ಭದ್ರತೆ ವಹಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ೧, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ೧, ಡಿವೈಎಸ್‌ಪಿ ೪, ವೃತ್ತ ನಿರೀಕ್ಷಕರು ೧೦, ಸಬ್ ಇನ್ಸ್ಪೆಕ್ಟರ್ ೩೦, ಪೊಲೀಸ್ ಸಿಬ್ಬಂದಿ ೫೭೫, ಕೆಎಸ್‌ಆರ್ ಪಿ ೫, ಸಶಸ್ತç ಮೀಸಲು ದಳದ ತುಕಡಿ ೬ ಸೇರಿದಂತೆ ಈ ವರ್ಷ ವಿಶೇಷವಾಗಿ ೫ ಜಂಬೋ ತಂಡ ಹಾಗೂ ೩೦ ಚೀತಾ ತಂಡಗಳು ಹಾಗೆಯೇ ಪೊಲೀಸ್ ಇಲಾಖೆಯಿಂದ ೫೦ ಕ್ಯಾಮರಮೆನ್ ತಂಡ ಕಾರ್ಯ ನಿರ್ವಹಿಸಲಿದೆ. ೩೦ ಜಾಗದಲ್ಲಿ ೫೦ ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ. ಎಲ್ಲಾ ಸಮಿತಿಯಲ್ಲಿಯೂ ಪೊಲೀಸ್ ಇಲಾಖೆಯಿಂದ ವೀಡಿಯೋ ರೆಕಾರ್ಡ್ ಮಾಡಲಾಗುತ್ತದೆ. ಮತ್ತು ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಪೊಲೀಸ್ ಸಿಬ್ಬಂದಿಗಳು ಸಾಮಾನ್ಯ ಉಡುಪಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಡಿಜೆ ಬಳಕೆಗೆ ಸಂಬAಧಿಸಿದAತೆ ಶಬ್ದದ ಬಗ್ಗೆ ನಿಯಂತ್ರಣ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯನಿರ್ವಹಿಸಲಿದೆ. ಸಂಜೆ ೪ ಗಂಟೆಯಿAದ ನಗರದೊಳಗಡೆ ವಾಹನ ಸಂಚಾರ ಮತ್ತು ನಿಲುಗಡೆ ಮಾಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರಿಗೆ ಪ್ರಯಾಣ ಬೆಳೆಸಲು ಬದಲಿ ಮಾರ್ಗ ಮಾಡಲಾಗಿದೆ.