ಮಡಿಕೇರಿ, ಸೆ. ೫ : ಮುಸ್ಲಿಂ ಸಮುದಾಯದ ಪ್ರವಾದಿಗಳಲ್ಲಿ ಶ್ರೇಷ್ಠರಾದ ಮಹಮ್ಮದ್ ಪೈಗಂಬರ್ ಸ.ಅ.ರ ಜನನ ದಿನವಾದ ಮಿಲಾದುನ್-ನೆಬಿ ಅಥವಾ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರದಿಂದ ಆಚರಿಸಲಾಯಿತು. ವಿಶೇಷ ಪ್ರಾರ್ಥನೆ, ಮೆರವಣಿಗೆ, ಕಾರ್ಯಕ್ರಮಗಳ ಮೂಲಕ ಪ್ರವಾದಿಯನ್ನು ಸ್ಮರಿಸಿಕೊಂಡರು.
ಜಿಲ್ಲಾ ಕೇಂದ್ರ ಮಡಿಕೇರಿಯ ಬದ್ರಿಯಾ ಜಮಾಅತ್ ವತಿಯಿಂದ ಜಮಾಅತ್‌ನಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಜಮಾಅತ್ ಅಧ್ಯಕ್ಷ ಅಮೀನ್ ಮೊಹಿಸಿನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಕ್ಕಳಿಂದ ಸಾಂಪ್ರದಾಯಿಕ ದಫ್ ಕಾರ್ಯಕ್ರಮಗಳು ನೆರವೇರಿದವು. ಸಂಜೆ ಜಮಾಅತ್ ಸಭಾಂಗಣದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಜಮಾಅತ್‌ನ ಸದರ್(ಮದರಸದ ಪ್ರಾಂಶುಪಾಲ) ಹನೀಫ್ ಮೌಲೂದ್ ಪಾರಾಯಣ ನೆರವೇರಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ನಾಳೆ ರ‍್ಯಾಲಿ-ಸಮಾರೋಪ
ತಾ. ೭ರಂದು ಮಿಲಾದ್ ರ‍್ಯಾಲಿ ನಡೆಯಲಿದೆ. ಅಂದು ಬೆಳಿಗ್ಗೆ ಗದ್ದುಗೆಯಿಂದ ಮಹದೇವಪೇಟೆ, ಇಂದಿರಾಗಾAಧಿ ವೃತ್ತ, ಹಳೆ ಖಾಸಗಿ ನಿಲ್ದಾಣವನ್ನು ಹಾದು ಗಣಪತಿ ಬೀದಿಗಾಗಿ ತೆರಳಿ ಬದ್ರಿಯಾ ಜಮಾ ಅತ್‌ನಲ್ಲಿ ರ‍್ಯಾಲಿ ಸಮಾಪನಗೊಳ್ಳಲಿದೆ. ನಂತರ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಅಮೀನ್ ಮೊಹಿಸಿನ್ ಹಾಗೂ ಪ್ರಮುಖರಾದ ಎಂ.ಎ. ಮನ್ಸೂರ್ ತಿಳಿಸಿದ್ದಾರೆ. ೪ಏಳನೇ ಪುಟಕ್ಕೆ
ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿರುವ ಮುಸ್ಲಿಂ ಸಮುದಾಯದವರು ಈದ್‌ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಬೆಳಿಗ್ಗೆ ಪ್ರಾರ್ಥನಾ ಮಂದಿರಕ್ಕೆ ತೆರಳಿ ದಿನದ ಅಂಗವಾಗಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರವಾದಿ ಮಹಮ್ಮದ್ ಅವರ ಗುಣಗಾನ ಮಾಡಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವು ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮದ್ರಸಾದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪಟ್ಟಣದ ಜಲಾಲಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರು ಅಬ್ದುಲ್ ಹಮೀದ್ ಸಖಾಫಿ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಜಲಾಲಿಯ ಮದರಸ ಅಧ್ಯಕ್ಷ ಮುನೀರ್ ಸಹದಿ, ಮಸೀದಿಯ ಅಧ್ಯಕ್ಷ ಕೆ.ಎ. ಆದಂ, ಉಪಾಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಆಸಿಫ್ ಸೇರಿದಂತೆ ಇತರರು ಇದ್ದರು.
ಕಲ್ಕಂದೂರು: ಈದ್ ಮಿಲಾದ್ ಪ್ರಯುಕ್ತ ಕಲ್ಕಂದೂರು ಮುಯ್ಯುದ್ದೀನ್ ಜುಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು. ನಂತರ ಪ್ರವಾದಿಯವರ ಸಂದೇಶ ಸಾರುವ ಜಾಥಾವು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಕಲ್ಕಂದೂರಿನ ಮುಯ್ಯುದ್ದೀನ್ ಜುಮಾ ಮಸೀದಿಯಿಂದ ಆರಂಭವಾದ ಜಾಥಾಕ್ಕೆ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಹಮಾನ್ ಸಖಾಫಿ ಪ್ರಾರ್ಥನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಜಮಾಅತ್ ಅಧ್ಯಕ್ಷ ಕೆ.ಇ. ಶರೀಫ್, ಸದರ್ ಉಸ್ತಾದ್ ಬದುರುಲ್ ಮುನೀರ್ ಫಾಲಿಳಿ, ಕಾರ್ಯದರ್ಶಿ ಕೆ.ಸಿ. ಅಬ್ದುಲ್ ರೆಹಮಾನ್, ಜಮಾಅತ್ ಸದಸ್ಯರಾದ ಆಲಿ ಸಖಾಫಿ, ಸಮದ್ ನಿಜಾಮಿ, ಉಮ್ಮರ್, ಅಬ್ದುಲ್ ಸಲಾಮ್, ಫರೂಖ್, ಜಮಾಅತ್ ಪದಾಧಿಕಾರಿಗಳು ಭಾಗಿಯಾಗಿದ್ದರು. ಇರ್ಶಾದುಲ್ ಇಸ್ಲಾಂ ಮದ್ರಸದ ಮಕ್ಕಳಿಂದ ಆಕರ್ಷಕ ಧಫ್ ನಡೆಯಿತು.
ಬಜೆಗುಂಡಿ: ಸಮೀಪದ ಬಜೆಗುಂಡಿ ಗ್ರಾಮದ ಖಿಳಾರಿಯಾ ಮಸೀದಿಯಲ್ಲಿ ದಿನದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಬಜೆಗುಂಡಿಯ ಖಿಳಾರಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಸೀದಿಯ ಇಮಾಮ್ ಉಬೈದ್ ಫೈಝಿ ಪ್ರಾರ್ಥನೆಯ ನೇತೃತ್ವ ವಹಿಸಿ ಮಿಲಾಸ್ ಸಂದೇಶ ನೀಡಿದರು.
ಜಮಾತ್ ಅಧ್ಯಕ್ಷ ಕೆ.ಎ. ಯಾಕೂಬ್, ಕಾರ್ಯದರ್ಶಿ ಸುಲೈಮಾನ್, ಸದಸ್ಯರಾದ ಹನೀಫ್, ನಿಯಾಜ್, ಅಬ್ದುಲ್ ರಜಾಕ್, ಅಬ್ಬಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೊಸತೋಟ: ಹೊಸತೋಟದ ಬಟಕನಹಳ್ಳಿ ಜಾಮಿಯಾ ಮಸೀದಿಯಲ್ಲಿ ನಡೆದ ಹಬ್ಬಾಚರಣೆಯಲ್ಲಿ ಮಸೀದಿಯ ಖತೀಬರಾದ ಶಾಜಹಾನ್ ಸಖಾಫಿ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಈ ಸಂದರ್ಭ ಮಸೀದಿಯ ಪ್ರಮುಖರಾದ ಅಶ್ರಫ್ ಝೈನಿ, ಸಲಾಂ ಮದನಿ, ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಟ್ಟಿ, ಕಾರ್ಯದರ್ಶಿ ಸಲೀಂ ಹೊಸತೋಟ, ಖಾಲೀದ್, ಶಿಹಾಬ್, ಕೋಯ, ಉನೈಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಂತೆಯೇ ಮಾದಾಪುರ, ತಣ್ಣೀರುಹಳ್ಳ, ಕಾಗಡಿಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.ಪೊನ್ನಂಪೇಟೆ : ಪೊನ್ನಂಪೇಟೆ ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಶಾಪಿ ಜುಮಾ ಮಸೀದಿ, ಕಾಟ್ರಕೊಲ್ಲಿ ಮುಯಿಯದ್ದೀನ್ ಜುಮಾ ಮಸೀದಿ, ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿ, ಹಳ್ಳಿಗಟ್ಟು ಬದರ್ ಜುಮಾ ಮಸೀದಿ ಹಾಗೂ ಪೊನ್ನಂಪೇಟೆ ಹನಫಿ ಜುಮಾ ಮಸೀದಿ ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊನ್ನಂಪೇಟೆಯಲ್ಲಿ ಮಿಲಾದ್ ರ‍್ಯಾಲಿ ಆಯೋಜಿಸಲಾಗಿತ್ತು.
ಇಲ್ಲಿನ ರಾಮಕೃಷ್ಣ ಶಾರದಾಶ್ರಮದ ಸಮೀಪದಿಂದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಯುದ್ದಕ್ಕೂ ಮದರಸ ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕುತ್ತಾ ಬಂದು ಬಸ್ ನಿಲ್ದಾಣದಲ್ಲಿ ನೃತ್ಯ ಮಾಡಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೃತ್ಯಗಳನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶಾಪಿ ಜುಮ್ಮಾ ಮಸೀದಿ ಅಧ್ಯಕ್ಷ ಸಿ. ಎ.ಅಹಮದ್, ಕಾರ್ಯದರ್ಶಿ ಅಜೀಜ್ ಪಿ. ಎ, ಉಪಾಧ್ಯಕ್ಷ ಸಿ. ಎಂ. ಅಶ್ರಫ್, ಕಾಟ್ರಕೊಲ್ಲಿ ಮುಹಿಯದ್ದೀನಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ. ಎ. ಆಲಿ, ಕಾರ್ಯದರ್ಶಿ ಅನೀಫ್, ಅನಫಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ. ಇ. ಫಾಜಿಲ್, ಕಾರ್ಯದರ್ಶಿ ಮೊಹಿಸಿನ್, ಮದರಸ ಧಾರ್ಮಿಕ ಗುರುಗಳಾದ , ಹಿರಿಯರಾದ ಆಲಿರ ಎರ್ಮು ಹಾಜಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲಿರ ರಶೀದ್, ಸದಸ್ಯ ಹಾಗೂ ಕಾರ್ಯಕ್ರಮ ಸಂಚಾಲಕ ಜುನೈದ್ ಸಿ.ಎ, ಪ.ಪಂ. ಸದಸ್ಯ ಅಜೀಜ್, ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿ ಉಸ್ತಾದ್ ಅಬ್ದುಲ್ ರಜಾಕ್ ಸಖಾಫಿ, ಅಧ್ಯಕ್ಷ ಆಲಿರ ಪಿ. ಆಲಿ, ಉಪಾಧ್ಯಕ್ಷ ಆಲಿರ ಎ. ಖಾಲಿದ್, ಕಾರ್ಯದರ್ಶಿ ಆಲಿರ ಹೆಚ್. ಅಬ್ದುಲ್ ಹಮೀದ್, ಹಳ್ಳಿಗಟ್ಟು ಬದರ್ ಜುಮಾ ಮಸೀದಿ ಪದಾಧಿಕಾರಿಗಳು, ಧರ್ಮಗುರುಗಳು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.ಚೆಯ್ಯAಡಾಣೆ: ಸಮೀಪದ ಎಡಪಾಲ ಗ್ರಾಮದಲ್ಲಿ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ವತಿಯಿಂದ ಈದ್‌ಮಿಲಾದ್ ಆಚರಿಸಲಾಯಿತು. ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಬಷೀರ್ ಹಾಜಿ ನೆರವೇರಿಸಿದರು.
ಶುಕ್ರವಾರ ಫಜರ್ ನಮಾಜಿನ ಬಳಿಕ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಹೆಸರಿನಲ್ಲಿ ಮಹಲ್ ಮುದರ್ರಿಸ್ ಶೈಖುನಾ ನಿಝಾರ್ ಫೈಝಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.
ಪ್ರವಾದಿಯವರ ಜನ್ಮ ದಿನಾಚರಣೆಯ ಅಂಗವಾಗಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಪ್ರವಾದಿ ಸಂದೇಶ ಜಾಥಾ ನಡೆಯಿತು. ಜಾಥಾ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಅಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯ ಅಬ್ದುಲ್ಲ ಫೈಝಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.
ಜಾಥಾದಲ್ಲಿ ಮಕ್ಕಳ, ಯುವಕರ ದಫ್ ಪ್ರದರ್ಶನ,ಸ್ಕೌಟ್ಸ್ ನೋಡುಗರ ಗಮನ ಸೆಳೆಯಿತು. ಬಳಿಕ ವಿದ್ಯಾರ್ಥಿಗಳಿಂದ ಭಾಷಣ, ಗೀತ ಗಾಯನ, ಬುರ್ದ ಆಲಾಪನೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆÀದವು.
ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ಉಮ್ಮರ್ ಸಿಆರ್ ಪಿಎಫ್, ಪ್ರಧಾನ ಕಾರ್ಯದರ್ಶಿ ರಫೀಕ್, ಕೋಶಾಧಿಕಾರಿ ಮಮ್ಮದ್, ರಿಯಾಜ್ ನಿಝಾಮಿ, ಅಬ್ದುಲ್ ಹಮೀದ್ ಫೈಝಿ, ಮಜೀದ್ ಮುಸ್ಲಿಯಾರ್, ಅಬ್ದುಲ್ಲ ಸಅದಿ, ರಶೀದ್ ಮುಸ್ಲಿಯಾರ್, ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಡಂಗ: ಯುಎಇಯಲ್ಲಿರುವ ಕೊಡಗಿನ ಕುಂಜಿಲ ಜಮಾಅತ್ ಅನಿವಾಸಿ ಗ್ರಾಮಸ್ಥರ ಸಂಘಟನೆಯಾದ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ದೇರಾ ದುಬೈಯಲ್ಲಿ ಹೊಟೇಲ್ ಸಭಾಂಗಣದಲ್ಲಿ ಪ್ರವಾದಿ ಪೈಗಂಬರ್ ಸ.ಅ. ಅವರ ೧೫೦೦ನೇ ಜನ್ಮದಿನಾಚರಣೆ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಉಸ್ತಾದ್ ಕುಂಜಿಲ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯದ್ ಮೊಹಮ್ಮದ್ ಹೈದ್ರೋಸಿ ಹುದವಿ ತಂಗಳ್ ಅವರ ದುಆದೊಂದಿಗೆ ಮಿಲಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಮೀದ್ ಸಖಾಫಿ ಉಸ್ತಾದ್ ಪುದರೇಕಾರಂಡ, ಮುನೀರ್ ಮಿಸ್ಬಾಯ್ ಉಸ್ತಾದ್ ಬಾರಿಕೇರ ಮತ್ತು ಷರೀಫ್ ಲತೀಫ್ ಉಸ್ತಾದ್ ಅವರು ಮೌಲೂದ್ ಮಜಿಲಿಸ್ಸಿಗೆ ನೇತೃತ್ವ ನೀಡಿದರು. ಸಮಿತಿ ಸದಸ್ಯರಾದ ನಾಸಿರ್ ಪಯಡತಂಡ ಸ್ವಾಗತಿಸಿದರು. ಕೆಸಿಎಫ್ ನೇತಾರ ಜಲೀಲ್ ನಿಜಾಮಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು, ಫಾರೂಕ್ ಪುದರೇಕಾರಂಡ ಹಾಗೂ ಹಾಫಿಜ್ ಹಾಶಿರ್ ಅಲ್ ಅಝರಿ ಉಸ್ತಾದರ ನೇತೃತ್ವದಲ್ಲಿ ಬುರ್ದಾ ಮಜಲಿಸ್ ನಡೆಯಿತು. ಯುಎಇ ಪೈನೆರಿ ಸಮಿತಿ ಕಾರ್ಯದರ್ಶಿ ನಿಜ್ಹಾರ್ ಕುಂಡAಡ ನಿರೂಪಿಸಿ, ವಂದಿಸಿದರು.ಚೆಯ್ಯAಡಾಣೆ: ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ) ರವರ ೧೫೦೦ ನೇ ಜನ್ಮದಿನಾಚರಣೆಯ ಅಂಗವಾಗಿ ಎಮ್ಮೆಮಾಡು ಯುಎಇ ಸಮಿತಿಯ ಆನಿವಾಸಿ ಒಕ್ಕೂಟದ ವತಿಯಿಂದ ಸಾರ್ಥಕ ಜೀವನ ಸೌಹಾರ್ದತೆಯ ಮಾದರಿ ಎಂಬ ಧ್ಯೇಯವಾಕ್ಯದಡಿ ದುಬೈನಲ್ಲಿ ಬೃಹತ್ ಮಿಲಾದ್ ಸಮಾವೇಶ ನಡೆಯಿತು. ದುಬೈಯ ದೇರಾದಲ್ಲಿರುವ ಹೊಟೇಲ್ ಸಭಾಂಗಣದಲ್ಲಿ ಎಮ್ಮೆಮಾಡು ಯುಎಇ ಸಮಿತಿ ಆನಿವಾಸಿ ಒಕ್ಕೂಟದ ಅಧ್ಯಕ್ಷ ಝುಬೈರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಆಬಿದ್ ಸಅದಿಯವರು ಉದ್ಘಾಟಿಸಿ ಮಾತನಾಡಿದರು. ಅಬ್ದುಲ್ ಜಲೀಲ್ ನಿಝಾಮಿ ಉಸ್ತಾದ್ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆಯ ಕುರಿತು ಮುಖ್ಯ ಪ್ರಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‌ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ರಿಫಾಯಿ ದಫ್ ಸಂಘದ ಖಲ್ಫ ಮೊಹಮ್ಮದ್, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಅಧ್ಯಕ್ಷ ಅಹಮದ್ ಚಾಮಿಯಾಲ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜೀವನ ಚರಿತ್ರೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರೀಫಾಯಿ ದಫ್ ಸಂಘದ ಅಶ್ರಫ್, ಹಮೀದ್ ನಾಪೋಕ್ಲು, ರಫೀಕ್ ಹಾಜಿ ಚಾಮಿಯಾಲ ಇಸ್ಮಾಯಿಲ್ ಮೂರ್ನಾಡು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಆಕರ್ಷಕ ದಫ್ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಖುರಾನ್ ಕಿರಾಅತ್, ಮೌಲೂದ್ ಪಾರಾಯಣ, ಬುರ್ದಾ ಆಲಾಪನೆ, ಮಕ್ಕಳ ಹಾಗೂ ಯುವಕರ ಭಾಷಣ, ಗೀತಗಾಯನ, ಮಹಿಳೆಯರಿಗೆ ಇಸ್ಲಾಮಿಕ್ ರಸಪ್ರಶ್ನೆ ಕಾರ್ಯಕ್ರಮಗಳು ನಡೆÀದವು. ಕೊಡಗಿನ ಹಲವಾರು ಆನಿವಾಸಿ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಆಬಿದ್ ಖಿರಾಹತ್ ಪಠಿಸಿದರು. ಮಹಮ್ಮದ್ ಹಾಜಿ ಮುಸ್ಲಿಯಾರ್ ಪ್ರಾರ್ಥಿಸಿ, ಹಂಝ ಬರಾಕೊಲ್ಲಿ ಸ್ವಾಗತಿಸಿ, ಸಹೀದ್ ವಂದಿಸಿದರುಕೊಡ್ಲಿಪೇಟೆ: ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದುನ್ನೂರ್ ಸುನ್ನಿ ಜುಮ್ಮಾ ಮಸ್ಜಿದ್ ವತಿಯಿಂದ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಿಲಾದ್ ಸಂದೇಶ ಜಾಥಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಯಿತು.
ಪ್ರವಾದಿ ಮುಹಮ್ಮದ್ ರವರ ೧೫೦೦ ನೇ ಜನ್ಮದಿನದ ಅಂಗವಾಗಿ ಬ್ಯಾಡಗೊಟ್ಟ ಮದರಸÀದಿಂದ ಪ್ರಾರಂಭಿಸಿದ ಕಾಲ್ನಡಿಗೆ ಜಾಥÀವೂ ಹ್ಯಾಂಡ್‌ಪೋಸ್ಟ್ ಸರ್ಕಲ್ ಮೂಲಕ ದೊಡ್ಡಕುಂದದವರೆಗೆ ಸಾಗಿತು,
ಮದರಸ ವಿದ್ಯಾರ್ಥಿಗಳ ದಫ್ ಸೇರಿದಂತೆ ಸಾಂಸ್ಕೃತಿಕ ಪ್ರದರ್ಶನವು ಜಾಥಾಗೆ ಮೆರುಗು ನೀಡಿತು. ಹ್ಯಾಂಡ್‌ಪೋಸ್ಟ್ನಲ್ಲಿ ತೇಜ್‌ಕುಮಾರ್ ಅವರು ಜಾಥಾದಲ್ಲಿ ಭಾಗಿಯಾಗಿದ್ದವರಿಗೆ ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದರು.
ಮಸ್ಜಿದ್ ಆಡಳಿತ ಮಂಡಳಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಜಿ, ಉಪಾಧ್ಯಕ್ಷ ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಹನೀಫ್, ಕಾರ್ಯದರ್ಶಿಗಳಾದ ಮುನೀರ್, ಹಾರೂನ್ ರಶೀದ್ ,ಕೋಶಾಧಿಕಾರಿ ಬಾಸಿತ್, ಸದಸ್ಯರುಗಳಾದ ಜಕಾರೀಯಾ, ಸಾಬ್ಜಾನ್, ಆಝೀಝ್, ಖಾದರ್, ಹಮೀದ್, ದಾವೂದ್, ಹಂಝ, ರಹೀಂ, ಸಲಹಾ ಸಮಿತಿ ಸದಸ್ಯರಾದ ಸುಲೈಮಾನ್, ಇಬ್ರಾಹಿಂ, ನೂರ್ ಯೂತ್ ಸಮಿತಿ ಅಧ್ಯಕ್ಷ ಬಾಸಿತ್ ಹಾಜಿ, ಉಪಾಧ್ಯಕ್ಷ ಹನೀಫ್, ಕಾರ್ಯದರ್ಶಿ ಇಸ್ಮಾಯಿಲ್, ಪದಾಧಿಕಾರಿಗಳಾದ ಜಾಸಿಕ್, ಶರೀಫ್, ಹಾರಿಸ್, ಅಝೀಜ್ ಮುಂತಾದವರಿದ್ದರು.*ಗೋಣಿಕೊಪ್ಪ: ಪ್ರವಾದಿ ಮುಹಮ್ಮದ್ ಅವರ ಜನ್ಮದಿನಾಚರಣೆಯನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿAದ ಆಚರಿಸಿದರು.
ಗೋಣಿಕೊಪ್ಪ ಶಾಫಿ ಮುಸ್ಲಿಂ ಜಮಾಅತ್ ಮತ್ತು ನೂರುಲ್ ಹುದಾ ಮದÀರಸ ಆಶ್ರಯದಲ್ಲಿ ರೋಹಿ ಪಿದಾರ್ ೧೫೦೦ ಈದ್ ಮೀಲಾದ್ ಸಂದೇಶ ರ‍್ಯಾಲಿ ನಡೆಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಬಸ್ ನಿಲ್ದಾಣದವರೆಗೆ ಪ್ರವಾದಿ ಮಹಮ್ಮದ್ ಅವರ ಸಂದೇಶಗಳನ್ನು ಬಿತ್ತರಿಸುತ್ತಾ ಮೆರವಣಿಗೆ ಸಾಗಿಬಂದು, ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡರು. ನಂತರ ಉರ್ದು ಶಾಲೆಯ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ನಡೆಯಿತು. ಜನರಿಗೆ ಸಿಹಿ ಹಂಚಲಾಯಿತು.