ನಾಳೆ(ತಾ.೭ ರಂದು) ಹುಣ್ಣಿಮೆಯ ದಿನ ಈ ಸಂವತ್ಸರದ(ವಿಶ್ವಾವಸು) ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, ಇದು ಖಗ್ರಾಸ ಗ್ರಹಣ (ಪೂರ್ಣ ಗ್ರಹಣ) ಆಗಿರಲಿದೆ. ರಾತ್ರಿ ೯:೫೬ಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ ೧:೨೬ಕ್ಕೆ ಕೊನೆಗೊಳ್ಳಲಿದೆ.

ಚಂದ್ರನು ನಾಳೆ ಸಂಜೆ ೬:೩೦ರ ಅಂದಾಜು ಸಮಯಕ್ಕೆ ಉದಯವಾಗಲಿದೆ. ರಾತ್ರಿ ೯:೫೬ಕ್ಕೆ ಗ್ರಹಣ ಸ್ಪರ್ಶಕಾಲ - ಅಂದರೆ ಭೂಮಿಯ ಪರೋಕ್ಷ ನೆರಳು ಚಂದ್ರನನ್ನು ಸ್ಪರ್ಶಿಸಲಿದೆ. ಈ ಸಂದರ್ಭ ಭೂಮಿಯ ನೆರಳಿನ ಆಕಾರದಲ್ಲಿ ಚಂದ್ರನು ಕೆಂಪಾಗಿ ಗೋಚರಿಸಲಿದೆ. ಇದು ೧೧:೦೨ರವರೆಗೆ ಮುಂದುವರಿಯಲಿದೆ. ೧೧:೦೨ ಸಮಯಕ್ಕೆ ಗ್ರಹಣ ಸಮ್ಮಿಲನ ಕಾಲ ಆರಂಭವಾಗಲಿದ್ದು, ಭೂಮಿಯ ನೇರ ನೆರಳು ಚಂದ್ರನನ್ನು ಸ್ಪರ್ಶಿಸಲಾರಂಭಿಸಲಿದೆ. ಈ ಸಂದರ್ಭ ಚಂದ್ರನು ಕೆಂಪು ಬಣ್ಣದಿಂದ ಸಂಪೂರ್ಣ ಕಪ್ಪಾಗಿ ಬದಲಾವಣೆ ಆಗಲಿದೆ. ೧೧:೪೨ ಕ್ಕೆ ಗ್ರಹಣ ಮಧ್ಯಕಾಲದಲ್ಲಿ ಚಂದ್ರನು ಸಂಪೂರ್ಣ ಭೂಮಿಯ ನೆರಳಿನಿಂದ ಆವರಿಸಲ್ಪಡಲಿದೆ. ೧೨:೨೪ ಕ್ಕೆ ಗ್ರಹಣ ಉನ್ಮೀಲನ ಕಾಲದವರೆಗೆ ಇದು ಮುಂದುವರಿಯಲಿದೆ. ನಂತರ ಗ್ರಹಣ ಮೋಕ್ಷಕಾಲದವರೆಗೆ - ೧:೨೬ ರವರೆಗೆ ಮತ್ತೇ ಭೂಮಿಯ ಪರೋಕ್ಷ ನೆರಳು ಚಂದ್ರನ ಮೇಲೆ ಬೀಳುವ ಸಂದರ್ಭದಲ್ಲಿ ಕೆಂಪು ಬಣ್ಣ ಗೋಚರಿಸಲಿದೆ. ಚಂದ್ರನ ಈಶಾನ್ಯ ದಿಕ್ಕಿನಿಂದ ಗ್ರಹಣ ಪ್ರಾರಂಭವಾಗಿ ಆಗ್ನೇಯ ದಿಕ್ಕಿನಲ್ಲಿ ಗ್ರಹಣ ಬಿಡುಗಡೆ ಆಗಲಿದೆ.

ಸಾಂಪ್ರದಾಯಿಕ ಮಾರ್ಗದರ್ಶನ

ತಾ.೭ ರ ಭಾನುವಾರ ಪೂರ್ಣ ಚಂದ್ರಗ್ರಹಣ ನಡೆಯಲಿದೆ. ಪೂರ್ವಾಭಾದ್ರ ನಕ್ಷತ್ರ ಕುಂಭ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣವಾಗಲಿದೆ. ಜ್ಯೋತಿಷ್ಯಾಸ್ತಾçನುಸಾರ ಶತಭಿಷ, (ಮೊದಲ ಪುಟದಿಂದ) ಪೂರ್ವಾಭಾದ್ರ, ಉತ್ತರಾಭಾದ್ರ, ಪುನರ್ವಸು ಹಾಗೂ ವಿಶಾಖಾ ನಕ್ಷತ್ರದವರಿಗೆ ಗ್ರಹಣದ ದೋಷವಿದೆ. ಅಲ್ಲದೆ, ಮೀನ, ಕರ್ಕಾಟಕ ಹಾಗೂ ಕನ್ಯಾ ರಾಶಿಯವರಿಗೂ ದೋಷವಿದೆ. ಆದರೆ, ತಾ. ೮ ರ ಸೋಮವಾರ ಬೆಳಿಗ್ಗೆ ಸ್ನಾನಾನಂತರ ತಮ್ಮ ಇಷ್ಟ ದೈವಗಳ ಪ್ರಾರ್ಥನೆ, ತಮ್ಮ ಮನೆ ಸನಿಹದ ದೇವಾಲಯಗಳಲ್ಲಿ ಶಕ್ತಾö್ಯನುಸಾರ ಪೂಜೆಗಳಿಂದ ದೋಷ ಪರಿಹಾರವಾಗಲಿದೆ.

ಆರೋಗ್ಯ ರಕ್ಷಣೆ ದೃಷ್ಟಿಯಿಂದ ಎಲ್ಲರೂ ಕೂಡ ಭಾನುವಾರ ಸಂಜೆ ೬ ಗಂಟೆಯೊಳಗೆ ಆಹಾರ ಸೇವನೆ ಮಾಡುವ ಮೂಲಕ ಗ್ರಹಗತಿಯ ದುಷ್ಫಲಗಳಿಂದಲೂ ದೂರವಾಗಬಹುದು. ಸೋಮವಾರ ಪೂರ್ವಾಹ್ನ ೧.೨೬ ಕ್ಕೆ ಗ್ರಹಣ ಅಂತ್ಯವಾಗಲಿದ್ದು ಎಲ್ಲರೂ ಆ ಬಳಿಕ ಅಥವ ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡಿ ಗ್ರಹಣ ಕಾಲದಲ್ಲಿ ಉಟ್ಟಿದ್ದ ವಸ್ತçಗಳನ್ನು ಬದಲಾವಣೆ ಮಾಡಬೇಕು.

ದೈವಿಕ ಪ್ರಾರ್ಥನಾನಂತರ ಪಾನೀಯ- ಆಹಾರ ಸೇವಿಸಬಹುದು. ಗ್ರಹಣ ಸ್ಪರ್ಶ ಕಾಲವಾದ ರಾತ್ರಿ ೯.೫೬ ರಿಂದ ಗ್ರಹಣ ಮುಕ್ತ ಕಾಲದವರೆಗೆ ಧ್ಯಾನ, ದೇವರ ನಾಮ ಜಪಗಳಿಂದ ಉತ್ತಮ ಫಲ ದೊರಕುತ್ತದೆ. ಆಹಾರ -ಪಾನೀಯ ಪದಾರ್ಥಗಳಿದ್ದರೆ ಹಾಗೂ ಹೂವು, ಕುಂಕುಮ ಮೊದಲಾದ ಪೂಜಾ ಸಾಮಗ್ರಿಗಳಿದ್ದರೆ ಅವುಗಳ ಮೇಲೆ ಗ್ರಹಣ ಪ್ರವೇಶ ಕಾಲಕ್ಕೂ ಮುನ್ನ ದರ್ಬೆ, ತುಳಸಿ ಅಥವ ಬಿಲ್ವ ಪತ್ರೆ ಅಥವ ಗರಿಕೆ ಹುಲ್ಲನ್ನು ಹಾಕಿ ಇರಿಸುವುದರಿಂದ ಅಪವಿತ್ರಗೊಳ್ಳುವುದಿಲ್ಲ.