ಮಡಿಕೇರಿ, ಸೆ. ೬: ಮಡಿಕೇರಿ ನಗರ ಆರೋಗ್ಯ ಕೇಂದ್ರದ ವತಿಯಿಂದ ಇಂದು ಮಹಿಳಾ ಸಂಘದ ಸದಸ್ಯರುಗಳಿಗೆ ಕ್ಯಾನ್ಸರ್ ಕಾಯಿಲೆ ಬಗ್ಗೆ ಮಾಹಿತಿ ನೀಡಲಾಯಿತು. ನಗರ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸುರಕ್ಷಾ ಕಾರ್ಯದರ್ಶಿ ರೇವತಿ ಅವರು ಕ್ಯಾನ್ಸರ್ ಕಾಯಿಲೆಗೆ ಕಾರಣವಾದ ದೈನಂದಿನ ಆಹಾರ ಪದ್ಧತಿ, ಒತ್ತಡ, ಬೊಜ್ಜು, ವ್ಯಾಯಾಮ ಇಲ್ಲದ ಜೀವನ, ಧೂಮಪಾನ, ಮದ್ಯಪಾನ ಸೇವನೆ, ಹೊಗೆಸೊಪ್ಪು ಸೇವನೆಗಳಿಂದಾಗಿ ಕ್ಯಾನ್ಸರ್ ಹರಡುತ್ತದೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸ್ತನ ಕ್ಯಾನ್ಸರ್‌ಅನ್ನು ಸ್ವತಃ ಪರೀಕ್ಷೆ ಮಾಡಿಕೊಳ್ಳುವದರ ಮೂಲಕ ಪತ್ತೆ ಹಚ್ಚುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಇಂದು ಒಡಿಪಿ ಸಂಘದ ಅಧ್ಯಕ್ಷರು, ಸದಸ್ಯರು, ಕೃಷಿ ಸಂಸ್ಥೆಯ ಅಧ್ಯಕ್ಷರು ಪಾಲ್ಗೊಂಡಿದ್ದರು.