ಮುಳ್ಳೂರು, ಸೆ. ೬: ಸಮೀಪದ ಕೊಡ್ಲಿಪೇಟೆಯಲ್ಲಿ ನಡೆಯುತ್ತಿರುವ ವಲಯಮಟ್ಟದ ೧೭ರ ವಯೋಮಿತಿಯ ಕ್ರೀಡಾಕೂಟದಲ್ಲಿ ಕೊಡ್ಲಿಪೇಟೆ ಕಲ್ಲುಮಟದ ಎಸ್.ಕೆ.ಎಸ್. ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಾಲಕಿಯರ ವಿಭಾಗದ ಕಬಡ್ಡಿ, ಕೋಕೋ ಮತ್ತು ಥ್ರೋಬಾಲ್‌ನಲ್ಲಿ ಬಾಲಕಿಯರು ಪ್ರಥಮ ಸ್ಥಾನ, ಬಾಲಕರ ವಿಭಾಗದ ಅಥ್ಲೆಟಿಕ್ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವುದರೊಂದಿಗೆ ವಲಯಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.