ಮಡಿಕೇರಿ, ಸೆ. ೬: ಭಾರತೀಯ ರಕ್ಷಣಾ ಪಡೆಗೆ ಕೊಡಗು ಜಿಲ್ಲೆಯ ಹಲವಷ್ಟು ಮಂದಿ ಸೇನಾಧಿಕಾರಿಗಳಾಗಿ - ಸೈನಿಕರಾಗಿ ಸೇವೆ ಸಲ್ಲಿಸುವ ಮೂಲಕ ಕೊಡಗು ಜಿಲ್ಲೆ ವಿಶೇಷವಾಗಿ ಸೈನಿಕರ ನಾಡು ಎಂಬAತೆ ಗುರುತಿಸಲ್ಪಟ್ಟಿದೆ. ಪ್ರಸ್ತುತವೂ ರಕ್ಷಣಾ ಪಡೆಯ ಮೂರು ವಿಭಾಗಗಳಲ್ಲೂ ಕೊಡಗಿನ ಹಲವಷ್ಟು ಮಂದಿ ಅಧಿಕಾರಿಗಳಾಗಿ ಕರ್ತವ್ಯದಲ್ಲಿದ್ದಾರೆ.
ಕೆಲದಿನಗಳ ಹಿಂದೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾ ದೇಶಕ್ಕೆ ಭೇಟಿ ನೀಡಿದ್ದರು. ಏಳು ವರ್ಷಗಳ ಬಳಿಕ ಮೋದಿ ಅವರು ಚೀನಾಕ್ಕೆ ತೆರಳಿದ್ದು, ವಿಶ್ವಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಮೋದಿ ಅವರನ್ನು ಚೀನಾದಲ್ಲಿ ಬರಮಾಡಿಕೊಂಡ ಭಾರತೀಯ ಅಧಿಕಾರಿಗಳಲ್ಲಿ ಕೊಡಗಿನ ಸೇನಾಧಿಕಾರಿಯೊಬ್ಬರೂ ಇದ್ದದ್ದು ಸೇನಾ ಜಿಲ್ಲೆ ಕೊಡಗಿಗೆ ಮತ್ತೊಂದು ಪ್ರೌಢಿಮೆ.
ಭಾರತೀಯ ನೌಕಾದಳದಲ್ಲಿ ಕ್ಯಾಫ್ಟನ್ ರ‍್ಯಾಂಕ್‌ನಲ್ಲಿರುವ ಬಟ್ಟಿಯಂಡ ಕೆ. ಪೊನ್ನಪ್ಪ ಅವರು ಚೀನಾದ ಬೀಜಿಂಗ್‌ನಲ್ಲಿ ಇಂಡಿಯನ್ ನೇವಲ್ ಅಟ್ಯಾಚಿ ಆಗಿ ಕಳೆದ ಎರಡು ವರ್ಷಗಳಿಂದ ಕರ್ತವ್ಯದಲ್ಲಿದ್ದಾರೆ. ಚೀನಾದ ಇಂಡಿಯನ್ ಅಂಬೆಸಿಯಲ್ಲಿ
ಮೊದಲ ಪುಟದಿಂದ) ಭಾರತೀಯ ರಾಯಭಾರಿ, ಇಂಡಿಯನ್ ಫಾರಿನ್ ಸರ್ವೀಸ್ ಅಧಿಕಾರಿ ಭಾರತೀಯ ಸೇನೆಯ ಮೂರು ವಿಭಾಗಗಳಾದ ಭೂಸೇನೆ, ನೌಕಾದಳ ವಾಯುಪಡೆಯ ಅಧಿಕಾರಿಗಳು (ಮಿಲಿಟರಿ ಅಟ್ಯಾಚಿ) ಭಾರತದಿಂದ ನಿಯೋಜಿತರಾಗಿರುತ್ತಾರೆ. ಇವರಲ್ಲಿ ಒಬ್ಬರಾಗಿರುವುದು ನೌಕಾದಳದಲ್ಲಿರುವ ಕೊಡಗಿನ ಈ ಅಧಿಕಾರಿ ಎಂಬದು ಹೆಮ್ಮೆ.
ಸೇನೆಯ ಮೂರು ವಿಭಾಗದಿಂದ ಆರ್ಮಿ ಅಟ್ಯಾಚಿ, ನೇವಲ್ ಅಟ್ಯಾಚಿ, ಏರ್‌ಫೋರ್ಸ್ ಅಟ್ಯಾಚಿ ಆಗಿ ಈ ಅಧಿಕಾರಿಗಳಿರುತ್ತಾರೆ. ಭಾರತದಿಂದ ಪ್ರಧಾನಿ, ರಾಷ್ಟçಪತಿ ಸೇರಿದಂತೆ ಪ್ರಮುಖ ವಿಐಪಿಗಳು ತೆರಳುವ ಸಂದರ್ಭ ಇತರ ಅಧಿಕಾರಿಗಳೊಂದಿಗೆ ಇವರುಗಳು ಸ್ವಾಗತದೊಂದಿಗೆ ಜತೆಗಿರುತ್ತಾರೆ.
ಇದೀಗ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ನೇವಲ್ ಅಟ್ಯಾಚಿ ಆಗಿರುವ ಕ್ಯಾಫ್ಟನ್ ಬಟ್ಟಿಯಂಡ ಕೆ. ಪೊನ್ನಪ್ಪ ಅವರೂ ಮೋದಿ ಅವರನ್ನು ಬರಮಾಡಿಕೊಂಡರು. ಚಿತ್ರದಲ್ಲಿರುವದು ಮೋದಿ ಅವರು ತಿಯಾಂಜಿನ್‌ನಲ್ಲಿ ಎಸ್‌ಇಓ ಕಾನ್ಫರೆನ್ಸ್ಗೆ ತೆರಳಿದ್ದ ಸಂದರ್ಭದಲ್ಲಿ ಪೊನ್ನಪ್ಪ ಅವರು ಹಸ್ತಲಾಘವ ನೀಡುತ್ತಿರುವ ದೃಶ್ಯವಾಗಿದೆ.
ನೌಕಾದಳಕ್ಕೆ ಕಮೀಷನ್ಡ್ ಅಧಿಕಾರಿಯಾಗಿ ಸೇರ್ಪಡೆಗೊಂಡ ಪೊನ್ನಪ್ಪ ಅವರು ವೆಲ್ಲಿಂಗ್ಟನ್‌ನ ಸ್ಟಾಫ್ ಕಾಲೇಜ್‌ನಲ್ಲಿ ಎಲ್ಲಾ ವಿಭಾಗದಲ್ಲೂ ಉನ್ನತ ಸ್ಥಾನದ ಸಾಧನೆ ತೋರಿದವರಾಗಿದ್ದಾರೆ. ಉತ್ತಮ ಸೇವೆ - ಸಾಮರ್ಥ್ಯ ತೋರುವವರನ್ನು ಭಾರತೀಯ ಡಿಫೆನ್ಸ್ ಮಿನಿಸ್ಟರಿಯ ಮೂಲಕ ಈ ರೀತಿ ಇತರ ರಾಷ್ಟçಗಳಿಗೆ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ರೀತಿ ಆಯ್ಕೆಗೊಂಡ ಪೊನ್ನಪ್ಪ ಅವರು ನೇವಲ್ ಅಟ್ಯಾಚಿ ಆಗಿ ಬೀಜಿಂಗ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಕರ್ತವ್ಯದಲ್ಲಿದ್ದಾರೆ. ಮೂಲತಃ ಕೊಡಗು ಜಿಲ್ಲೆಯ ಚೆಯ್ಯಂಡಾಣೆ, ನರಿಯಂದಡ ಗ್ರಾಮಕ್ಕೆ ಸೇರಿದವರಾಗಿರುವ ಪೊನ್ನಪ್ಪ ಅವರ ಇಡೀ ಕುಟುಂಬ ಸೇನಾ ಕರ್ತವ್ಯದಲ್ಲಿರುವುದು ವಿಶೇಷ.
ಇವರ ತಂದೆ ಕೂಡ ಸೇನೆಯಲ್ಲಿ ಮೇಜರ್ ಆಗಿದ್ದರು. ಆರ್ಮಿ ಮೆಡಿಕಲ್ ಕೋರ್‌ನಲ್ಲಿ ಮೇಜರ್ ಆಗಿದ್ದ ಬಟ್ಟಿಯಂಡ ಕಾವೇರಪ್ಪ ಅವರು ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಇವರ ಮತ್ತೋರ್ವ ಪುತ್ರ ವಿವೇಕ್ ಗಣಪತಿ ಕೂಡ ನೌಕಾದಳದಲ್ಲಿ ಕಮಾಂಡರ್ ಆಗಿದ್ದು ಪುಣೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಪೊನ್ನಪ್ಪ ಅವರ ತಾಯಿ ಪ್ರೇಮಾ (ತಾಮನೆ : ನಾಯಕಂಡ, ಕೈಕಾಡು) ಅವರು ಪತಿ ಮೇಜರ್ ಕಾವೇರಿಯಪ್ಪ ಅವರೊಂದಿಗೆ ಹೈದರಾಬಾದ್‌ನಲ್ಲಿದ್ದಾರೆ.
- ಶಶಿ ಸೋಮಯ್ಯ