ವೀರಾಜಪೇಟೆ, ಸೆ. ೬: ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿನಲ್ಲಿ ರೂ. ೫೭,೯೯,೬೦,೯೦೧.೭೯ ವ್ಯವಹಾರ ನಡೆಸಿ ರೂ. ೨೫,೭೬,೦೬೩.೨೦ ರೂ ನಿವ್ವಳ ಲಾಭಗಳಿಸಿದೆ ಎಂದು ಕೃಷಿ ಪತ್ತಿ ಸಹಕಾರ ಸಂಘದ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ತಿಳಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ೧೨೩೭ ಸದಸ್ಯರಿದ್ದು ರೂ. ೧,೧೮,೬೫,೫೬೦. ಪಾಲು ಬಂಡವಾಳದೊAದಿಗೆ ವ್ಯವಹರಿಸಲಾಗುತ್ತಿದೆ. ಮೃತಪಟ್ಟ ಸದಸ್ಯರಿಗೆ ರೂ. ೧೦ ಸಾವಿರವನ್ನು ನಾಮಿನಿಗೆ ನೀಡಲಾಗುತ್ತಿದೆ. ಕೆಡಿಸಿಸಿ ಬ್ಯಾಂಕ್ನಲ್ಲಿ ೩೧ ಲಕ್ಷ ರೂಗಳ ಷೇರು ಬಂಡವಾಳ ಹೊಂದಲಾಗಿದೆ. ರೂ. ೭೪,೧೪,೧೬೯.೬೯ ಕ್ಷೇಮ ನಿಧಿ ಇದ್ದು ರೂ. ೮೬,೯೫,೧೦೬.೮೨ ರೂಗಳು ಇತರೆ ನಿಧಿಗಳಾಗಿವೆ. ಸಂಘದ ಸಂಪನ್ಮೂಲವನ್ನು ಠೇವಣಿಗಳ ಮುಖಾಂತರ ಸಂಗ್ರಹಿಸುತ್ತಿದ್ದು ೭,೦೬,೩೮,೩೪೭ ರೂಗಳ ಠೇವಣಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಸಾಲ ವಸೂಲಾತಿಯಲ್ಲಿ ಶೇ ೯೯.೫೯ ರಷ್ಟು ಪ್ರಗತಿಯನ್ನು ಸಾಧಿಸಿದ್ದು, ಪ್ರತಿ ವರ್ಷ ಮಾರ್ಚ್ ೩೧ರ ಒಳಗೆ ಪಾವತಿ ಮಾಡಿದ್ದಲ್ಲಿ ಶೇ ೨ ರ ಬಡ್ಡಿ ರಿಯಾಯಿತಿ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭ ಸಂಘದ ಹಿರಿಯ ಸದಸ್ಯರುಗಳು, ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಹಾಗೂ ಸ್ನಾತಕೋತರ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದು ಸಾಧನೆ ಮಾಡಿ ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಎಂ.ಎನ್ ನಂದ ನಾಚಪ್ಪ, ನಿರ್ದೇಶಕರುಗಳಾದ ಸಿ.ಬಿ ಉತ್ತಯ್ಯ, ಬಿ.ಕೆ. ರಮೇಶ್, ವಿ.ಎಲ್. ಸುರೇಶ್, ಸಿ.ಬಿ. ಪೂಣಚ್ಚ, ಎಂ.ಎA. ಪಾರ್ವತಿ, ಎ.ಎಲ್. ತಾರ, ಕೆ.ಆರ್ ದೇವಯ್ಯ, ಕೆ.ಆರ್ ದೇವಯ್ಯ, ಐ.ಕೆ. ಈರಪ್ಪ, ಗೌತಮ್ ಚಂಗಪ್ಪ, ಹೆಚ್.ಟಿ. ರಂಜನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್ ಉದಯ ಉಪಸ್ಥಿತರಿದ್ದರು.