ಗೋಣಿಕೊಪ್ಪಲು. ಸೆ. ೬: ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಸಮಾಜ ಸೇವಕಿ ಕೊಟ್ಟಂಗಡ ವಿಜು ದೇವಯ್ಯ ಅವರು ಆಹಾರ ಕಿಟ್ ವಿತರಿಸಿದರು.

ಗೋಣಿಕೊಪ್ಪಲುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿ, ಪಂಚಾಯಿತಿ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯಿಂದ ನಗರವು ಶುಚಿತ್ವದಿಂದ ಇಂತಹ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ತಮ್ಮ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಆರೋಗ್ಯ ತಪಾಸಣೆಯನ್ನು ಕೂಡ ಮಾಡಿಸಿಕೊಳ್ಳಬೇಕು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದAತೆ ಎಚ್ಚರ ವಹಿಸಬೇಕು, ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.

ಕೈಲ್ ಪೊಳ್ದ್ ಹಬ್ಬದಂದು ಗೋಣಿಕೊಪ್ಪ ಗ್ರಾ.ಪಂ.ಯ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುತ್ತ ಬಂದಿದ್ದಾರೆ. ಈ ಸಂದರ್ಭ ೧೬ ಪೌರ ಕಾರ್ಮಿಕರ ಕುಟುಂಬಗಳು ಉಪಸ್ಥಿತರಿದ್ದರು.