ಗೋಣಿಕೊಪ್ಪ ವರದಿ, ಸೆ. ೬: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಿತು.

ವಿದ್ಯಾರ್ಥಿಗಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ರಾಧಾ ಕೃಷ್ಣರ ನೃತ್ಯ, ಹಾಡು, ಅಭಿನಯ ಮಾಡಿ ಗಮನಸೆಳೆದರು.

ಶಾಲೆಯ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ , ಪ್ರಾಂಶುಪಾಲೆ ಕೂತಂಡ ಪುಷ್ಪ ಸುಬ್ಬಯ್ಯ ಹಾಜರಿದ್ದರು. ಬಿ.ಎ. ಆದಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಬಿ. ಎಸ್. ಅಪೇಕ್ಷಾ ಸ್ವಾಗತಿಸಿದರು. ಆರ್. ಸಾಕ್ಷಿತಾ ವಂದಿಸಿದರು. ..