ಸಿದ್ದಾಪುರ, ಸೆ. ೭: ಹಿಂದೂ ಸಮಾಜವನ್ನು ಕಾಪಾಡಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ವಿಧಾನಸಭಾ ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ ಕರೆ ನೀಡಿದರು.
ಎಸ್ಎನ್ಡಿಪಿ ಕೊಡಗು ಯೂನಿಯನ್ ವತಿಯಿಂದ ಸಿದ್ದಾಪುರ ಸ್ವರ್ಣಮಾಲ ಸಭಾಂಗಣದಲ್ಲಿ ನಡೆದ ಶ್ರೀ ನಾರಾಯಣ ಗುರುಗಳ ೧೭೧ ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಜಾತಿ-ಬೇಧÀವನ್ನು ತೊಡೆದು ಹಾಕಿದ ಮಹಾನ್ ಸಂತ ಶ್ರೀ ನಾರಾಯಣ ಗುರುಗಳಾಗಿದ್ದಾರೆ. ಗುರುಗಳ ಆದರ್ಶವನ್ನು ಎಲ್ಲರೂ ಪಾಲನೆ ಮಾಡುವುದರೊಂದಿಗೆ ಹಿಂದೂ ಸಮಾಜವನ್ನು ಕಾಪಾಡಲು ಸಂಘಟನೆಗಳು ಮುಂದಾಗಬೇಕೆAದು ಸಲಹೆ ನೀಡಿದರು. ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಿದ ಹೆಮ್ಮೆ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಎಸ್ಎನ್ಡಿಪಿ ಸಂಘಟನೆಯು ಜಿಲ್ಲೆಯಾದ್ಯಂತ ಶಾಖೆಗಳನ್ನು ಹೊಂದುವ ಮೂಲಕ ಸಮಾಜದ ಬಾಂಧವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಿಕ್ಷಣದೊಂದಿಗೆ ಸಂಘಟನೆ ಇದ್ದರೆ ಮಾತ್ರ ವ್ಯಕ್ತಿ ಬಲಿಷ್ಠನಾಗಲು ಸಾಧ್ಯ. ಎಸ್ಎನ್ಡಿಪಿ ಸಾಮಾಜಿಕ ಕಳಕಳಿಯೊಂದಿಗೆ ಶ್ರೀ ನಾರಾಯಣ ಗುರುಗಳ ಆದರ್ಶದೊಂದಿಗೆ ಎಲ್ಲಾ ವರ್ಗದವರಿಗೂ ಸೇವೆಯನ್ನು ಒದಗಿಸುತ್ತಿರುವುದು ಗಮನಾರ್ಹ ಸಂಗತಿ ಎಂದರು. ಎಸ್ಎನ್ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ೫೦ ಶಾಖೆಗಳನ್ನು ಒಳಗೊಂಡ ಎಸ್ಎನ್ಡಿಪಿ ಜಿಲ್ಲೆಯಲ್ಲಿ ಶ್ರೀ ನಾರಾಯಣ ಗುರುಗಳ ಆದರ್ಶವನ್ನು ಸಾರುವ ೪ಏಳನೇ ಪುಟಕ್ಕೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಹಕಾರ ಸಂಘದ ಮೂಲಕ ಸಮುದಾಯದವರನ್ನು ಸ್ವಾವ ಲಂಬಿಗೊಳಿಸುವ ಪ್ರಯತ್ನವಾಗುತ್ತಿದೆ. ವಿದ್ಯಾಭ್ಯಾಸ, ಆರೋಗ್ಯ ಸಂಬAಧ ನೆರವನ್ನು ನೀಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ವಿ.ಎಂ. ವಿಜಯನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಧ್ವಜಾ ರೋಹಣವನ್ನು ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರರಾದ ನಾರಾಯಣ ನೆರವೇರಿಸಿದರು. ಬಿಎಸ್ ಎನ್ಎಸ್ಸಿಸಿ ಉಪಾಧ್ಯಕ್ಷÀ ಎಂ.ವಿ. ಸಜೀವ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಇಮ್ಯಾನುವಲ್ ಟಿ ರಾಮಪುರಂ, ಲಿಟಲ್ ಸ್ಕಾಲರ್ ಅಕಾಡೆಮಿಯ ಪೂಜಾ ಸಜೇಶ್, ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಎಂ.ಜಿ. ರಾಜು, ಕಾರ್ಯದರ್ಶಿ ರೆಜಿತ್ ಕುಮಾರ್, ವನಿತಾ ಯೂನಿಯನ್ ಅಧ್ಯಕ್ಷೆ ರೀಶಾ ಸುರೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
ಎಸ್ಎನ್ಡಿಪಿ ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ ಸ್ವಾಗತಿಸಿದರು. ವಿಶಾಲಾಕ್ಷಿ ಹಾಗೂ ಸುನಿತ ಗಿರೀಶ್ ನಿರೂಪಿಸಿ, ಆರ್ ರಾಜನ್ ವಂದಿಸಿದರು.
ಜಯAತೋತ್ಸವದ ಅಂಗವಾಗಿ ಕೇರಳದ ಕ್ಯಾಲಿಕಟ್ನ ೭ ಬೀಟ್ಸ್ ತಂಡದಿAದ ರಸಮಂಜರಿ ಕಾರ್ಯಕ್ರಮ ಸಾರ್ವಜನಿಕರನ್ನು ರಂಜಿಸಿತ್ತು.
ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಅಲಂಕೃತ ಮಂಟಪದಲ್ಲಿಟ್ಟು ಚಂಡೆ ವಾದ್ಯ, ಮೇಳಗಳೊಂದಿಗೆ ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಸಿದ್ದಾಪುರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಸಭಾಂಗಣ ತನಕ ನಡೆಯಿತು.
ಸಾಧಕರಿಗೆ ಸನ್ಮಾನ
ಸಮಾಜ ಸೇವೆಯಲ್ಲಿ ತೊಡಗಿರುವ ಉದ್ಯಮಿ ಇಮ್ಯಾನುವಲ್ ಟಿ ರಾಂಪುರA ಅವರನ್ನು ಎಸ್ ಎನ್ ಡಿ ಪಿ ಯೂನಿಯನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದರೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ವಿಜೇತರಾದ ಪುಲಿಯೇರಿ ಎಸ್ಎನ್ಡಿಪಿ ಶಾಖೆಗೆ ಬಹುಮಾನ ವಿತರಿಸಲಾಯಿತು.