ಪೊನ್ನಂಪೇಟೆ, ಸೆ. ೮: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವೃಥಾ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಆರೋಪಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲು ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಗ್ರಾಮಸ್ಥರು, ಗ್ರಾಮದ ಶ್ರೀ ಮಂದತ್ತವ್ವ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಂಡರು. ಮುಂಜಾನೆ ಮಂದತ್ತವ್ವ ದೇವಸ್ಥಾನದ ದ್ವಾರದಲ್ಲಿ ತಾವು ಪ್ರಯಾಣಿಸುವ ವಾಹನಕ್ಕೆ ಪೂಜೆ ಸಲ್ಲಿಸಿ ಯಾತ್ರೆಯನ್ನು ಕೈಗೊಂಡರು.ಈ ಸಂದರ್ಭ ಶ್ರೀ ಮಂದÀತ್ತವ್ವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಬೆಕ್ಕೆಸೊಡ್ಲೂರು ಗ್ರಾಮಸ್ಥರು ಹಿಂದೂ ಧರ್ಮದ ಉಳಿವಿಗಾಗಿ ಧರ್ಮಯಾತ್ರೆ ಕೈಗೊಂಡಿದ್ದೇವೆ ಎಂದರು.
ಈ ಸಂದರ್ಭ ಮಲ್ಲಮಾಡ ಪ್ರಕಾಶ್, ಈಶ್ವರ, ವಿಷ್ಣು, ಕಿರು, ಗುಲ್ಸನ್, ಮಲ್ಲಮಾಡ ಸುಕು, ಚರಣ್, ಚಂದ್ರ, ಸಂಪತ್, ಧನು, ಕಿರಣ್, ಸುಮನ್, ಹರೀಶ್,ಮಚ್ಚಮಾಡ ವಿನು, ಮೋನೆ, ರಾಜ, ಸಂಪತ್, ನಂದ, ತಾಣಚೀರ ಸಚ್ಚು, ನಿರನ್, ದೀಪಕ್, ಮಾಚಂಗಡ ನಿಖಿಲ್, ನಿರನ್, ವಿನೇಶ್, ಇಂದ್ರ, ಜೀವನ್, ನವಿ, ಬಾಡಮಾಡ ಅಪ್ಪಿ, ತೀತಮಾಡ ಜಯ ಸೇರಿದಂತೆ ಶ್ರೀ ಮಂದತ್ತವ್ವ ದೇವಸ್ಥಾನ ಭಂಡಾರ ಸಮಿತಿಯ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿಯವರು ಹಾಗೂ ಬೆಕ್ಕೆಸೊಡ್ಲೂರು ಗ್ರಾಮಸ್ಥರು ಧರ್ಮಯಾತ್ರೆಯಲ್ಲಿ ಪಾಲ್ಗೊಂq