ಸುಂಟಿಕೊಪ್ಪ, ಸೆ. ೮: ಮಾತೆ ಮರಿಯಮ್ಮನವರ ಜನ್ಮದಿನ (ಮೊಂತಿ ಫೆಸ್ಟ್ - ಮೇರಿ ಫೀಸ್ಟ್) ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ದಿವ್ಯ ಬಲಿಪೂಜೆ, ಮೊಂಬತ್ತಿ ಹಿಡಿದು ಮಾತೆ ಮರಿಯಮ್ಮನವರ ಸ್ವರೂಪವನ್ನು ಮೆರವಣಿಗೆಯ ಮೂಲಕ ಸಾಗಿಸಿ ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ನೂರಾರು ಸಂಖ್ಯೆಯಲ್ಲಿ ಕ್ರೆöÊಸ್ತ ಬಾಂಧವರು ಶೃದ್ಧಾ ಭಕ್ತಿಯಿಂದ ಪುಷ್ಪನಮನ ಸಲ್ಲಿಸಿ ನಂತರ ನೂತನ ಭತ್ತದ ತೆನೆಯನ್ನು ವಿತರಿಸಲಾಯಿತು.

ಸಂತ ಅಂತೋಣಿ ದೇವಾಲಯದಲ್ಲಿ ಬೆಳಿಗ್ಗೆ ೭.೩೦ ರಿಂದ ಹಬ್ಬಾಚರಣೆಯು ವಿಶೇಷ ಪ್ರಾರ್ಥನೆಯೊಂದಿಗೆ ಆರಂಭಗೊAಡಿದ್ದು, ಮಡಿಕೇರಿ ಸಂತ ಮೈಕಲರ ಶಾಲೆಯ ವ್ಯವಸ್ಥಾಪಕರಾದ ರೆ.ಫಾ.ಸಂಜಯ್ ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾzರ್ ವಿಜಯಕುಮಾರ್ ದಿವ್ಯ ಬಲಿಪೂಜೆ ಪ್ರಭೋದನೆಯನ್ನು ಸಮರ್ಪಿಸಿದರು.

ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾಧರ್ ವಿಜಯಕುಮಾರ್ ಬಲಿಪೂಜೆ ಪ್ರವಚನಗಳನ್ನು ನೀಡಿದರಲ್ಲದೆ ಮೊಂತಿಫೆಸ್ಟ್ ಅಂಗವಾಗಿ ನೂತನ ತೆನೆಗಳನ್ನು ಆಶೀರ್ವದಿಸಿ ವಿತರಿಸಿದರು. ಕ್ರೆöÊಸ್ತ ಬಾಂಧವರು ಮನೆ ಮನೆಗಳಿಂದ ತಂದಿದ್ದ ಬಗೆ-ಬಗೆಯ ಪುಷ್ಪಗಳನ್ನು ಎಲ್ಲರೂ ಕನ್ಯಾಮಾತೆ ಮರಿಯಮ್ಮನವರಿಗೆ ಸಮರ್ಪಿಸಿ, ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತೆ ಮರಿಯಮ್ಮನವರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಇಟ್ಟರು. ಇದೇ ಸಂದರ್ಭದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಬೆಳಗಿನ ಉಪಹಾರವನ್ನು ವಿತರಿಸಲಾಯಿತು.

ತಾ.೮ ರಂದು ಏಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿ ಫೆಸ್ಟ್) ಜಗತ್ತಿನಾದ್ಯಂತ ಆಚÀರಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ೯ ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳ ನೇತೃತ್ವದಲ್ಲಿ ನಡೆಯುವ ದಿವ್ಯ ಬಲಿಪೂಜೆ, ಪ್ರಭೋದನೆಯನ್ನು ಹಾಗೂ ನೊವೇನಾ ಪ್ರಾರ್ಥನೆ ೪ಆರನೇ ಪುಟಕ್ಕೆ ಪುಷ್ಪನಮನಗಳನ್ನು ಸಲ್ಲಿಸಲಾಗುವುದು.

ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಕನ್ಯಾಮಾತೆ ಮರಿಯಮ್ಮನವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕಮಕ್ಕಳು, ಯುವಕ - ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ಗಾಯನ, ಬಲಿಪೂಜೆಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಮಾತೆ ಮರಿಯಮ್ಮನವರಿಗೆ ಸಮರ್ಪಿಸುತ್ತಾರೆ.