ಕಣಿವೆ, ಸೆ. ೭: ಪೂರ್ವಜರು ಕಟ್ಟಿ ಸಂರಕ್ಷಿಸಿದ್ದ ಕೆರೆ ಕಟ್ಟೆಗಳು ಹಾಗೂ ಜಲಮೂಲಗಳನ್ನು ಸಂರಕ್ಷಿಸಬೇಕಿರುವ ಕಂದಾಯ ಹಾಗೂ ಸ್ಥಳೀಯ ಪಂಚಾಯಿತಿ ಆಡಳಿತ ವ್ಯವಸ್ಥೆಗಳು ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು ಕೆರೆಕಟ್ಟೆಗಳು ನಶಿಸದಂತೆ ಎಚ್ಚರವಹಿಸಿ ಸಂರಕ್ಷಿಸಬೇಕಾದ ಹೊಣೆಗಾರಿಕೆ ಮೆರೆಯಬೇಕೆಂದು ಕೆರೆ ಕಟ್ಟೆಗಳ ಹಿತರಕ್ಷಣಾ ಸಮಿತಿಯ ಸಂಚಾಲಕ ಹಕ್ಕೆ ಗ್ರಾಮದ ಮೋಹನ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಕೆರೆ ಕಟ್ಟೆಗಳು ಹಾಗೂ ಜಲಮೂಲಗಳ ಸಂರಕ್ಷಣೆ ಬಗ್ಗೆ ಸಂಬAಧಿತ ಸ್ಥಳೀಯ ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದರೂ ಸ್ಥಳೀಯ ಸಂಸ್ಥೆಗಳು ಕೆರೆಗಳ ಬಗ್ಗೆ ಮೈಮರೆತಾಗ ನ್ಯಾಯಾಲಯದ ಕದ ತಟ್ಟಲಾಯಿತು.
ನಿರಂತರ ಹೋರಾಟದ ಫಲವಾಗಿ ರಾಜ್ಯ ಉಚ್ಛನ್ಯಾಯಾಲಯ ತಾಲೂಕು ತಹಶೀಲ್ದಾರ್ ಅವರಿಗೆ ಸೂಕ್ತ ನಿರ್ದೇಶನ ನೀಡಿ ಒತ್ತುವರಿ ಆಗಿರುವ ಕೆರೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಒತ್ತುವರಿದಾರರಿಂದ ತೆರವು ಗೊಳಿಸಿ ಅವುಗಳ ಅಭಿವೃದ್ದಿಗೆ ಗ್ರಾಮ ಪಂಚಾಯತಿಗಳಿಗೆ ೪ಏಳನೇ ಪುಟಕ್ಕೆ ವಹಿಸಲು ನ್ಯಾಯಾಲಯ ಸೂಚಿಸಿತ್ತು ಎಂದು ಮೋಹನ್ ಹೇಳಿದ್ದಾರೆ.
ಕುಶಾಲನಗರ ತಾಲೂಕು ಒಂದರಲ್ಲಿಯೇ ಬರೋಬ್ಬರಿ ೧೩೯ ಕೆರೆಗಳಿದ್ದು ೬೮ ಕೆರೆಗಳು ಒತ್ತುವರಿಯಾಗಿವೆ.
೬೧ ಕೆರೆಗಳು ಅತಿಕ್ರಮಣಕಾರರ ಕಪಿ ಮುಷ್ಟಿಯಿಂದ ಹೊರಗಿವೆ. ಈಗಾಗಲೇ ಒತ್ತುವರಿಯಾಗಿರುವ ೬೮ ಕೆರೆಗಳ ಒತ್ತುವರಿ ತೆರವು ಗೊಳಿಸಿ ಆಯಾಯ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಸ್ತಾಂತರಿಸುವ ಮೂಲಕ ಅವುಗಳನ್ನು ಅಭಿವೃದ್ಧಿಪಡಿಸಬೇಕೆಂದು ರಾಜ್ಯ ಉಚ್ಚನ್ಯಾಯಾಲಯ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ ಕೂಡ ತಾಲೂಕಿನ ಗ್ರಾ.ಪಂ.ಗಳು ಕೆರೆಗಳ ಅಭಿವೃದ್ದಿ ಬಗ್ಗೆ ಮಲತಾಯಿ ಧೋರಣೆ ತಾಳಿವೆ.
ಈ ವಿಚಾರಕ್ಕೆ ಸಂಬAಧಿಸಿದAತೆ ಕುಶಾಲನಗರ ಕಂದಾಯ ಇಲಾಖೆ ಒತ್ತುವರಿಯಾಗಿರುವ ೬೮ ಕೆರೆಗಳನ್ನು ಹಂತ ಹಂತವಾಗಿ ಒತ್ತುವರಿದಾರರಿಂದ ತೆರವುಗೊಳಿಸಿ ಸ್ಥಳೀಯ ಗ್ರಾಮ ಪಂಚಾಯಿತಿ ಗಳ ಸುಪರ್ದಿಗೆ ಬಿಟ್ಟುಕೊಟ್ಟು ವರ್ಷಗಳು ಕಳೆದರೂ ಕೂಡ ಇದುವರೆಗೂ ಕೆಲವು ಗ್ರಾಮ ಪಂಚಾಯಿತಿ ಆಡಳಿತ ಒಂದೇ ಒಂದು ಕೆರೆಗಳ ಅಭಿವೃದ್ದಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ.ಕೊನೆ ಪಕ್ಷ ಅಂತಹ ಕೆರೆಗಳ ಕಡೆಯೂ ಹಲವು ಪಂಚಾಯಿತಿ ಅಧ್ಯಕ್ಷರೂ ಅಥವಾ ಪಿಡಿಒ ಗಳು ಮುಖ ಹಾಕಿ ನೋಡಿಲ್ಲ. ಪಂಚಾಯಿತಿ ಆಡಳಿತ ಹೀಗೆ ನಿರ್ಲಕ್ಷö್ಯ ಮಾಡಿದ್ದರೂ ಕೂಡ ಕಂದಾಯ ಅಧಿಕಾರಿಗಳು ಈ ಬಗ್ಗೆ ಪಂಚಾಯಿತಿ ಆಡಳಿತವನ್ನು ಪ್ರಶ್ನಿಸಿಲ್ಲ.
ಅತ್ತ ಗ್ರಾಮ ಪಂಚಾಯಿತಿ ಆಡಳಿತಗಳು ಕೂಡ ಕಂದಾಯ ಇಲಾಖೆ ಹಸ್ತಾಂತರಿಸಿರುವ ಕೆರೆಗಳನ್ನು ತನ್ನ ಸುಪರ್ದಿಗೆ ಪಡೆದು ಯಾವುದೇ ಅಭಿವೃದ್ಧಿಗೆ ಮುಂದಾಗದೇ ಇರುವ ಕುರಿತು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದರೂ ಕೂಡ ಯಾವುದೇ ಕ್ರಮಗಳಾಗಿಲ್ಲ ಎಂದು ಮೋಹನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೆರೆಗಳ ಒತ್ತುವರಿ ಹಾಗೂ ಕೆರೆಗಳ ಅಧಃಪತನದ ಕುರಿತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕೆರೆಗಳ ಒತ್ತುವರಿ ತೆರವಿನ ದೂರನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಉಚ್ಚ ನ್ಯಾಯಾಲಯ ೨೦೨೩ ರಲ್ಲಿ ತಾಲೂಕು ತಹಶೀಲ್ದಾರ್ ಅವರಿಗೆ ಈ ಬಗ್ಗೆ ಆದೇಶ ಹೊರಡಿಸಿ ಕೂಡಲೇ ಒತ್ತುವರಿಯಾಗಿರುವ ಕೆರೆ ಕಟ್ಟೆಗಳು ಹಾಗೂ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಹಾಗೂ ಕೆರೆಗಳು ಮತ್ತೆ ಒತ್ತುವರಿಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶನ ನೀಡಿತ್ತು.
ಹಾಗಾಗಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ತಾಲೂಕಿನ ೧೩೯ ಕೆರೆಗಳ ಪೈಕಿ ೬೮ ಕೆರೆಗಳನ್ನು ಒತ್ತುವರಿ ದಾರರಿಂದ ತೆರವುಗೊಳಿಸಿ ಸ್ಥಳೀಯ ಸಂಬAಧಿತ ಗ್ರಾ.ಪಂ.ಗಳಿಗೆ ಹಸ್ತಾಂತರಿಸಿದ್ದು, ಪಂಚಾಯಿತಿಗಳು ಅವುಗಳ ಅಭಿವೃದ್ಧಿಗೆ ಕ್ರಮವಹಿಸಬೇಕಿದೆ.
ಇತ್ತ ಕೆರೆಗಳ ಅಭಿವೃದ್ದಿಗೆ ಬದ್ಧತೆ ತೋರದ ಗ್ರಾಪಂ ಆಡಳಿತ ಮಂಡಳಿ ತೀವ್ರ ನಿರ್ಲಕ್ಷö್ಯ ತೋರಿರುವ ಬಗ್ಗೆ ಮತ್ತೆ ರಾಜ್ಯ ಉಚ್ಚನ್ಯಾಯಾಲಯಕ್ಕೆ ಗ್ರಾ.ಪಂ. ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವುದಾಗಿ ಮೋಹನ್ ಎಚ್ಚರಿಕೆ ನೀಡಿದ್ದಾರೆ.
ಒತ್ತುವರಿಯಾಗಿರುವ ಕೆರೆಗಳ ಒಟ್ಟು ಭೂಮಿ ಬರೋಬ್ಬರಿ ೨೫೮ ಎಕರೆಗಳಷ್ಟಿದ್ದು ಕೂಡಲೇ ತೆರವುಗೊಳಿಸಬೇಕಿದೆ. ಹಾಗೆಯೇ ಸಾಗುವಳಿ ಕೆರೆ, ಹಿಡುವಳಿ ಕೆರೆ, ಭೋಗಣಿ ಕೆರೆ, ಹಿತ್ತಲಕೆರೆ, ಲೋಕೋಪಯೋಗಿ
ಇಲಾಖೆಗೆ ಸೇರಿದ ಕೆರೆಗಳೂ ಒಳಗೊಂಡAತೆ ೬೯೦ ಕ್ಕೂ ಹೆಚ್ಚು ಸಣ್ಣ ಪುಟ್ಟ ಜಲಮೂಲಗಳಿದ್ದು ಎಲ್ಲವನ್ನು ಒತ್ತುವರಿಯಿಂದ ತೆರವುಗೊಳಿಸಿ ಸಂರಕ್ಷಿಸಬೇಕೆAದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡುವ ಮೂಲಕ ಕೆರೆ ಕಟ್ಟೆಗಳು ಹಾಗೂ ಜಲಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸಬೇಕೆಂದು ಕೋರಲಾಗಿದೆ.