ಮಡಿಕೇರಿ: ನಗರದ ಬದ್ರಿಯಾ ಜಮಾಅತ್ ವತಿಯಿಂದ ಈದ್ ಮಿಲಾದ್ ರ‍್ಯಾಲಿ ನಡೆಯಿತು. ಗದ್ದುಗೆ ಬಳಿಯಿಂದ ಆರಂಭವಾದ ರ‍್ಯಾಲಿ ಬದ್ರಿಯಾ ಜಮಾಅತ್‌ನಲ್ಲಿ ಸಮಾಪನಗೊಂಡಿತು. ನಂತರ ಅಲ್ಲಿನ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ಬದ್ರಿಯಾ ಜಮಾಅತ್ ಅಧ್ಯಕ್ಷ ಅಮೀನ್ ಮೊಯ್ಸಿನ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಇಸ್ಮಾಯಿಲ್, ಸದರ್ ಹನೀಫ್ ಫೈಜಿ, ಉಸ್ತಾದ್ ಅಲಿಯಾರ್, ರಿಯಾಜ್, ಹಬೀಬ್, ಹುರೈಕಾ, ಹನೀಫ್, ಇನ್ನಿತರರು ಉಪಸ್ಥಿತರಿದ್ದರು.ಶನಿವಾರಸಂತೆ: ಶನಿವಾರಸಂತೆ ಪಟ್ಟಣದÀ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಪ್ರಯುಕ್ತ ಮದೀನಾ ಯೂತ್ ಬಾಯ್ಸ್ ವತಿಯಿಂದ ಗುಡುಗಳಲೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಶನಿವಾರಸಂತೆ ಪೊಲೀಸ್ ಠಾಣೆಗೆ ತೆರಳಿ ಪ್ರವಾದಿ ಮಹಮ್ಮದ್‌ರ ಜನ್ಮ ದಿನದ ಸ್ಮರಣೆಗಾಗಿ ಠಾಣಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮದೀನಾ ಯೂತ್ ಬಾಯ್ಸ್ ಸಮಿತಿ ಅಧ್ಯಕ್ಷ ಹಸೈನಾರ್ ಉಸ್ತಾದ್, ಉಪಾಧ್ಯಕ್ಷರಾದ ಜಾಫರ್, ಮುನಾಫ್, ಸದಸ್ಯರಾದ ರಬ್ಬಾನಿ, ಮುಹೀದ್, ಶಾಹಿದ್, ಇಬ್ರಾಹಿಂ, ರಫೀಕ್, ಅಶ್ರಫ್, ಕಲೀಂ, ತಸ್ಲಿಗ, ಶಮೀರ್, ಬಾಬಣ್ಣ, ಬಾವಕ, ದಸ್ತು, ಇತರರು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.ಕುಶಾಲನಗರ: ಈದ್‌ಮಿಲಾದ್ ಪ್ರಯುಕ್ತ ಈದ್‌ಮಿಲಾದ್ ಜಾಥಾ ನಡೆಯಿತು. ದಾರುಲ್ ಉಲೂಂ ಮದ್ರಸ, ಹಿಲಾಲ್ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಆಶ್ರಯದಲ್ಲಿ ಪ್ರವಾದಿಯವರ ಜನ್ಮದಿನ ಹಿನ್ನಲೆ ಪ್ರವಾದಿಯವರ ಸಂದೇಶವನ್ನು ಸಾರುವ ಘೋಷಣೆ ಕೂಗಲಾಯಿತು. ಕುಶಾಲನಗರದ ದಾರುಲ್ ಉಲೂಂ ಮದ್ರಸದಿಂದ ಹೊರಟ ಮೆರವಣಿಗೆಯು ಕುಶಾಲನಗರದ ಮುಖ್ಯರಸ್ತೆಯ ಮೂಲಕ ಸಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಕುಶಾಲನಗರ ಗಣಪತಿ ದೇವಾಲಯ ಬಳಿ ದಾರುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಿತು. ಎಲ್ಲರೂ ಜಾತಿ, ಧರ್ಮವನ್ನು ಬಿಟ್ಟು ಪರಸ್ಪರ ಸಹೋದರರಂತೆ, ಶಾಂತಿ ಸಮಾನತೆಯಿಂದ ಬಾಳಿ ಬದುಕಬೇಕು ಎಂದು ಧರ್ಮಗುರುಗಳು ಕರೆ ನೀಡಿದರು.

ಪ್ರವಾದಿಯವರ ಜನ್ಮ ದಿನ ಪ್ರಯುಕ್ತ ಮಕ್ಕಳಿಗೆ ಸಿಹಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಈ ಸಂದರ್ಭ ಹಿಲಾಲ್ ಮಸೀದಿ ಕಮಿಟಿ ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸ ಅಧ್ಯಾಪಕರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್‌ನ ಪ್ರಮುಖರು ಇದ್ದರು. ನಂತರ ದಾರುಲ್ ಉಲೂಂ ಮದರಸದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಚೆಟ್ಟಳ್ಳಿ: ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಮುಸ್ಲಿಂ ಜಮಾಅತ್ ಕಮಿಟಿ ವತಿಯಿಂದ ಈದ್‌ಮಿಲಾದ್ ಆಚರಿಸಲಾಯಿತು.ಮಹಲ್ ಖತೀಬರಾದ ಅಬ್ದುಲ್ ಸಲಾಂ ಸಖಾಫಿ ಹಾಗೂ ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಂಡಕರೆ ಹಯಾತುಲ್ ಇಸ್ಲಾಮ್ ಮದರಸ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಂಡಕರೆ ಮಸೀದಿಯಿಂದ ಕಾಫಿ ಬೋರ್ಡ್ರವರೆಗೆ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು. ಹಳೆ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಹಯಾತುಲ್ ಇಸ್ಲಾಮ್ ಮದರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಸ್ಕೌಟ್ ಹಾಗೂ ಫ್ಲವರ್ ಶೋ ಕಾರ್ಯಕ್ರಮವು ನಡೆಯಿತು. ಈ ಸಂದರ್ಭ ಮಹಲ್ ಖತೀಬರಾದ ಅಬ್ದುಲ್ ಸಲಾಂ ಸಖಾಫಿ, ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ, ಕಾರ್ಯದರ್ಶಿ ಸರ್ಫುದ್ದೀನ್,ಉಪಾಧ್ಯಕ್ಷ ಹುಸೈನ್ ಪಿ.ಎ,ಸಹ ಕಾರ್ಯದರ್ಶಿ ಗಫೂರ್ ಪಿ.ಎಂ, ಖಜಾಂಜಿ ಹಾರಿಸ್, ಈದ್ ಮಿಲಾದ್ ಆಚರಣಾ ಸಮಿತಿ ಅಧ್ಯಕ್ಷ ಹನೀಫ ಮುಸ್ಲಿಯಾರ್, ಮದರಸ ಮುಖ್ಯೋಪಾಧ್ಯಾಯ ಹಸೈನಾರ್ ಮುಸ್ಲಿಯಾರ್ ಅಧ್ಯಾಪಕರುಗಳಾದ ಸೈಫುದ್ದೀನ್ ಮುಸ್ಲಿಯಾರ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಇದ್ದರು. ಕೊಟ್ಟಮುಡಿ: ಕೊಟ್ಟಮುಡಿಯಲ್ಲಿ ಈದ್‌ಮಿಲಾದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ಫಜರ್ ನಮಾಜಿನ ಬಳಿಕ ಕೊಟ್ಟಮುಡಿ ಜುಮಾ ಮಸೀದಿಯಲ್ಲಿ ಖತೀಬರಾದ ಅಬ್ದುಲ್ ಮಾಲಿಕ್ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.

ಕೊಟ್ಟಮುಡಿಯ ಮುಖ್ಯ ಬೀದಿಗಳಲ್ಲಿ ಪ್ರವಾದಿಯವರ ಶಾಂತಿ ಸೌಹಾರ್ದತೆಯ ಸಂದೇಶ ಸಾರುವ ಬೃಹತ್ ಜಾಥಾ ನಡೆಯಿತು.ಜಾಥಾದಲ್ಲಿ ಪುಟಾಣಿ ಮಕ್ಕಳ ಸ್ಕೌಟ್ಸ್ ವಿದ್ಯಾರ್ಥಿಗಳ, ಯುವಕರ ಹಾಗೂ ಹಿರಿಯರ ದಫ್ ಪ್ರದರ್ಶನ ನಡೆಯಿತು. ಜಾಥಾದಲ್ಲಿ ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಎಚ್.ಎ.ಹಂಸ, ಜಮಾಅತ್ ಉಪಾಧ್ಯಕ್ಷÀ ಮೈಸಿ ಕತ್ತಣಿರ,ಮಸೀದಿಯ ಖತೀಬರಾದ ಅಬ್ದುಲ್ ಮಾಲಿಕ್, ಗ್ರಾ.ಪಂ.ಸದಸ್ಯ ಮೊಯ್ದು, ಕಾರ್ಯದರ್ಶಿ ಅಲಿ, ಸಮಿತಿ ಸದಸ್ಯರಾದ ಗಫೂರ್ ಖಾಸಿಂ,ರಫೀಕ್, ಅಬ್ದುಲ್ಲ, ರಫೀಕ್, ಹಮೀದ್, ಕರೀಂ ಹಾಜಿ, ಅಬೂಬಕ್ಕರ್ ಹಾಗೂ ಜಮಾಅತ್ ಸದಸ್ಯರು, ಮತ್ತಿತರರು ಪಾಲ್ಗೊಂಡಿದ್ದರು.ಚೆರಿಯಪರAಬು: ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ)ರವರ ೧೫೦೦ನೇ ಜನ್ಮದಿನಾಚರಣೆಯ ಅಂಗವಾಗಿ ಚೆರಿಯಪರಂಬುವಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ "ಬ್ರೀಝ್ ಆಫ್ ಮದೀನಾ" ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಫಜರ್ ನಮಾಜಿನ ಬಳಿಕ ಜುಮಾ ಮಸೀದಿಯ ಖತೀಬರಾದ ಮುಹಮ್ಮದ್ ಶಫೀಕ್ ಸಿರಾಜಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಚೆರಿಯಪರಂಬು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಚೆರಿಯಪರಂಬು ಗ್ರಾಮದ ಮುಖ್ಯಬೀದಿಗಳಲ್ಲಿ ಪ್ರವಾದಿಯವರ ಸೌಹಾರ್ದತೆಯ ಸಂದೇಶ ಸಾರುವ ಜಾಥಾ ನಡೆಯಿತು. ಜಾಥಾದಲ್ಲಿ ವಿದ್ಯಾರ್ಥಿಗಳ ಸ್ಕೌಟ್ಸ್, ಯುವಕರ ಹಾಗೂ ಹಿರಿಯರ ದಫ್ ಪ್ರದರ್ಶನವಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗಾಯನ ಸ್ಪರ್ಧೆ, ಭಾಷಣ, ಖವಾಲಿ, ಬುರ್ದಾ ಆಲಾಪನೆ ಸೇರಿದಂತೆ ಪ್ರವಾದಿಯವರ ಸಂದೇಶ ಸಾರುವ ಹಲವಾರು ಕಾರ್ಯಕ್ರಮಗಳು ನಡೆದವು. ಮದರಸ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಹಾಗೂ ಪ್ರಮಾಣ ಪತ್ರ, ಬಹುಮಾನ ವಿತರಿಸಿದರು. ಚೆರಿಯಪರಂಬು ಜಮಾಅತ್ ಅಧ್ಯಕ್ಷರಾದ ಪಿ.ಎ.ಅಹಮದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ಸಮಾಜ ಸೇವಕರಾದ ಖಲೀಲ್ ಕ್ರಿಯೇಟಿವ್, ಮಾಜಿ ಪಂಚಾಯತ್ ಸದಸ್ಯ ಟಿ.ಎ. ಮಹಮ್ಮದ್ ಹನೀಫ್, ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ಪರವಂಡ ಮಿರ್ಷಾದ್, ಇಸ್ಮಾಯಿಲ್, ಅಬ್ದುಲ್ ರಹ್ಮಾನ್, ಸೇವ್‌ದ ಡ್ರೀಮ್ಸ್ ಚಾರಿಟಿಯ ಪದಾಧಿಕಾರಿಗಳನ್ನು, ಜಮಾಅತ್ ಪದಾಧಿಕಾರಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಚೆರಿಯಪರಂಬು ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಉಪಾಧ್ಯಕ್ಷ ಪಿ.ಎಂ. ಇಬ್ರಾಹಿಂ, ಸಹ ಕಾರ್ಯದರ್ಶಿ, ಪಿ.ಎಂ.ಆಲಿ, ಕೋಶಾಧಿಕಾರಿ ಪಿ. ಎಚ್. ಬಶೀರ್, ಜಮಾಅತ್ ಮಾಜಿ ಅಧ್ಯಕ್ಷರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಮದರಸ ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಸುAಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಳೆದ ೩ ದಿನಗಳಿಂದ ಮಸೀದಿಯ ಮದ್ರಸಗಳಲ್ಲಿ ವಿದ್ಯಾಭ್ಯಾಸ ನಡೆಸುವ ಮಕ್ಕಳಿಗೆ ಧಾರ್ಮಿಕತೆಯ ಬಗ್ಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಸೀದಿಗಳ ಮೌಲವಿಗಳಿಂದ ಧಾರ್ಮಿಕ ಪ್ರವಚನ ನಡೆಯಿತು. ಶನಿವಾರದಂದು ಬೆಳಿಗ್ಗೆ ಸುಂಟಿಕೊಪ್ಪ ಪಟ್ಟಣದ ಮೆರವಣಿಗೆ ನಡೆಯಿತು. ಸುಂಟಿಕೊಪ್ಪ ಪಟ್ಟಣದ ಸುಂಟಿಕೊಪ್ಪ ಮುಸ್ಲಿಂ ಜಮಾಯತ್‌ನ ಇಬ್ರಾಹಿಂ ಅಹೌಸನಿ, ಸುನ್ನಿ ಹನಫಿ ಮುಸ್ಲಿಂ ಜಾಮೀಯ ಮಸೀದಿ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಇಕ್ಬಾಲ್ ಉಸ್ತಾದ್ ಹಾಗೂ ಗದ್ದೆಹಳ್ಳದ ನೂರುಜುಮ್ಮ ಮಸ್ಜಿದ್‌ನ ಅಬ್ಧುಲ್ ಅಜೀಜ್ ಅವರುಗಳು ಹಾಜರಿದ್ದರು. ಕಡಂಗ: ಕಡಂಗ ಮುಹಯದ್ದಿನ್ ಜುಮಾ ಮಸೀದಿ ವತಿಯಿಂದ ಈದ್‌ಮಿಲಾದ್ ಆಚರಿಸಲಾಯಿತು. ಮದ್ರಸ ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಡಂಗ ಪಟ್ಟಣದ ಮೂಲಕ ವಿದ್ಯಾರ್ಥಿಗಳ ಮತ್ತು ಹಿರಿಯರ ದಫ್ ಪ್ರದರ್ಶನ ಹಾಗೂ ಫ್ಲವರ್ ಶೋದೊಂದಿಗೆ ಜಾಥಾವು ಕೊಕ್ಕಂಡಬಾಣೆ ದರ್ಗಾದವರೆಗೆ ನಡೆಯಿತು. ಮಹಲ್ ಖತೀಬ್ ಉಸ್ತಾದರಾದ ರಫೀಕ್ ಲತೀಫಿ ಪ್ರಾರ್ಥನೆ ನೆರವೇರಿಸಿದರು.

ಜಾಥಾದಲ್ಲಿ ನೆರೆದಿದ್ದವರಿಗೆ ಬದ್ರಿಯಾ ಮಸೀದಿ ವತಿಯಿಂದ ಮತ್ತು ಗ್ರಾಮಸ್ಥರಿಂದ ಪಾನೀಯವನ್ನು ವಿತರಣೆ ಮಾಡಲಾಯಿತು ಕಾರ್ಯಕ್ರಮ ಮೊಹಲ್ಲ ಅಧ್ಯಕ್ಷ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ನೆಡೆಯಿತು, ಕಾರ್ಯಕ್ರಮವನ್ನು ಶುಹೈಬ್ ಫೈಜಿ ನಿರೂಪಿಸಿದರು.ಕೊಂಡAಗೇರಿ: ಕೊಂಡAಗೇರಿ ಸುನ್ನೀ ಮುಸ್ಲಿಂ ಜಮಾಅತ್ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಸಹಯೋಗದಲ್ಲಿ ಈದ್‌ಮಿಲಾದ್ ಆಚರಣೆ ನಡೆಯಿತು. ಜಮಾಅತ್ ಅಧ್ಯಕ್ಷ ಪಿ.ಎ. ಯೂಸುಫ್ ಹಾಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಕೊಂಡAಗೇರಿ ಸುನ್ನೀ ಮುಸ್ಲಿಂ ಜಮಾಅತ್ ಖತೀಬರಾದ ಆಸಿಫ್ ಸಖಾಫಿ ಪ್ರಾರ್ಥನೆ ನೇರವೇರಿಸಿದರು.

ಈದ್ ಮಿಲಾದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಡಿಕೇರಿ ವೃತ್ತ ನಿರೀಕ್ಷಕ ರಾಜು ಯುವಕರಿಗೆ ಮಾದಕ ವಸ್ತುಗಳಿಂದ ಉಂಟಾಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳಿಂದ ಪೈಗಂಬರ್ ಅವರ ಕುರಿತು ಭಾಷಣ, ಹಾಡು, ಕವಾಲಿ, ದಫ್ ಪ್ರದರ್ಶನ ಜಾಥಾ ನಡೆಯಿತು. ಈ ಸಂದರ್ಭ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್, ಜಮಾಅತ್‌ನ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ, ಸದರ್ ಉಸ್ತಾದ್ ಸೇರಿದಂತೆ ಮದ್ರಸ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಕಡಂಗ: ಸುಂಟಿಕೊಪ್ಪ - ಗದ್ದೆಹಳ್ಳ ನೂರಿಯ್ಯ ಮಸ್ಜಿದ್ ವತಿಯಿಂದ ಈದ್ ಮಿಲಾದ್ ಆಚರಣೆ ನಡೆಯಿತು.

ಎಸ್.ಎಸ್. ಆಡಿಟೋರಿಯಂನಲ್ಲಿ ನೂರಿಯ್ಯ ಮದ್ರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವಿತ್ತು. ಗದ್ದೆಹಳ್ಳ - ಸುಂಟಿಕೊಪ್ಪದ ಪ್ರಮುಖ ರಸ್ತೆಯಲ್ಲಿ ವಿದ್ಯಾರ್ಥಿಗಳ ದಫ್ ಪ್ರದರ್ಶನ ಹಾಗೂ ಫ್ಲವರ್ ಶೋದೊಂದಿಗೆ ಮಾನವೀಯತೆಯ ಸಂದೇಶ ಸಾರುವ ಜಾಥಾ ನಡೆಯಿತು.

ಮೊಹಲ್ಲ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಖತೀಬ್ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಪಾಲ್ಗೊಂಡಿದ್ದರು. ಸಮದ್ ಸಖಾಫಿ ಸ್ವಾಗತಿಸಿ, ಹಸೈನಾರ್ ಸಖಾಫಿ ವಂದಿಸಿದರು. ಮೊಹಲ್ಲಾ ಕಾರ್ಯದರ್ಶಿ ಶರೀಫ್, ರಶೀದ್, ಮಮ್ಮಿಕ್ಕ, ಸೂಫಿ ಉಸ್ತಾದ್ ಸೇರಿದಂತೆ ಹಲವರು ಹಾಜರಿದ್ದರು.ಎಮ್ಮೆಮಾಡು: ಪ್ರವಾದಿ ಮಹಮ್ಮದ್ ಪೈಗಂಬರ್ ರವರ ೧೫೦೦ ಜನ್ಮದಿನಾಚರಣೆಯ ಅಂಗವಾಗಿ ಎಮ್ಮೆಮಾಡುವಿನಲ್ಲಿ ಫಜರ್ ನಮಾಜಿನ ಬಳಿಕ ಮಸೀದಿಯ ಖತೀಬರಾದ ರಾಝಿಕ್ ಫೈಝಿ ಹಾಗೂ ಮುದರ್ರಿಸ್ ಹಂಸ ಸಖಾಫಿ ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಸೂಫೀ ಶಹೀದ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೊಳಕೇರಿಯ ಜುಮಾ ಮಸೀದಿಯಲ್ಲಿ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ, ಹಳೇ ತಾಲೂಕಿನ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬರಾದ ಖಲೀಲ್ ಹಿಮಮಿ ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.ಎಮ್ಮೆಮಾಡು: ಪ್ರವಾದಿ ಮಹಮ್ಮದ್ ಪೈಗಂಬರ್ ರವರ ೧೫೦೦ ಜನ್ಮದಿನಾಚರಣೆಯ ಅಂಗವಾಗಿ ಎಮ್ಮೆಮಾಡುವಿನಲ್ಲಿ ಫಜರ್ ನಮಾಜಿನ ಬಳಿಕ ಮಸೀದಿಯ ಖತೀಬರಾದ ರಾಝಿಕ್ ಫೈಝಿ ಹಾಗೂ ಮುದರ್ರಿಸ್ ಹಂಸ ಸಖಾಫಿ ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಸೂಫೀ ಶಹೀದ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೊಳಕೇರಿಯ ಜುಮಾ ಮಸೀದಿಯಲ್ಲಿ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ, ಹಳೇ ತಾಲೂಕಿನ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬರಾದ ಖಲೀಲ್ ಹಿಮಮಿ ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.ಹೊಸತೋಟ: ಪ್ರತಿಯೊಬ್ಬರೂ ಜೀವನದಲ್ಲಿ ಮಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕÀ ಡಾ. ಮಂತರ್‌ಗೌಡ ಹೇಳಿದರು. ಹೊಸ ತೋಟದ ಜಾಮೀಯ ಮಸೀದಿ ಹಾಗೂ ಇಸ್ಲಾ ಮದರಸದ ವಿದ್ಯಾರ್ಥಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಸೀದಿಯ ಪಕ್ಕದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದ ಮೇರೆಗೆ ಮಾತನಾಡಿದ ಶಾಸಕರು ಸಮುದಾಯ ಭವನದ ಕಾಮಗಾರಿಗೆ ಅನುದಾನ ನೀಡುವ ಭರವಸೆ ನೀಡಿದರು. ಶಾಸಕರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೌಲೋದ್ ಪಾರಾಯಣ, ವಿಶೇಷ ಪ್ರಾರ್ಥನೆ ನಡೆಯಿತು.

ಪ್ರವಾದಿಯ ಶಾಂತಿ ಸೌಹಾರ್ದತೆ ಸಾರುವ ಜಾಥಾ ಮತ್ತು ದಫ್ ಕಾರ್ಯಕ್ರಮ ಗಮನ ಸೆಳೆಯಿತು. ಸಭೆಯ ಅಧ್ಯಕ್ಷತೆಯನ್ನು ಮಹಮ್ಮದ್ ಕುಟ್ಟಿ ವಹಿಸಿದ್ದರು. ಕಾರ್ಯದರ್ಶಿ ಖಾಲಿದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಲೀಂ ಹೂಸತೋಟ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾರ್ಯಕ್ರಮದಲ್ಲಿ ಕೋಯ ತಂಙಳ್, ಪಂ.ಸದಸ್ಯ ಕಿರಣ್, ಉಮ್ಮರ್, ಉಸ್ಮಾನ್ ಸಖಾಫಿ, ಭಾಗವಹಿಸಿದ್ದರು.