ಸೋಮವಾರಪೇಟೆ, ಸೆ. ೮ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನೂರಾರು ಮಂದಿ ಸಾರ್ವಜನಿಕರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಕೊತ್ನಳ್ಳಿ, ನಾಡ್ನಳ್ಳಿ, ಕನ್ನಳ್ಳಿ, ಬೆಟ್ಟದಕೊಪ್ಪ, ಗುಡ್ಡಳ್ಳಿ, ಬೀಕಳ್ಳಿ, ಬೆಂಕಳ್ಳಿ ಸೇರಿದಂತೆ ಇತರ ಗ್ರಾಮಗಳಿಂದ ಆಗಮಿಸಿದ ಮಹಿಳೆಯರಾದಿಯಾಗಿ ಗ್ರಾಮಸ್ಥರು, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಂಬAಧಿಸಿದ ನರ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಟ್ಟದಳ್ಳಿಯಲ್ಲಿರುವ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಗೆ ಸೇರಿದ ಜಾಗವನ್ನು ಶುಶ್ರೂಷಕಿಯ ಕುಟುಂಬ ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸುವ ಸಂದರ್ಭ ಉಂಟಾದ ಜಗಳಕ್ಕೆ ಸಂಬAಧಿಸಿದAತೆ, ಶುಶ್ರೂಷಕಿ ಹಾಗೂ ಆಕೆಯ ಪತಿ ಸುಳ್ಳು ದೂರು ದಾಖಲಿಸಿದ್ದಾರೆ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಡಿಹೆಚ್‌ಓ ಹಾಗೂ ಶಾಸಕರು ಆಗಮಿಸಬೇಕೆಂದು ಪಟ್ಟು ಹಿಡಿದರು.

ನಂತರ ಸ್ಥಳಕ್ಕಾಗಮಿಸಿದ ಡಿಹೆಚ್‌ಓ ಡಾ. ಸತೀಶ್‌ಕುಮಾರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರು.

ಈ ಸಂದರ್ಭ ಮಾತನಾಡಿದ ಡಿಹೆಚ್‌ಓ, ತನಿಖಾಧಿಕಾರಿಯನ್ನು ಕಳುಹಿಸಿ ವರದಿ ಪಡೆಯಲಾಗಿದೆ ಎಂದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಶ್ರೀ ಕುಮಾರ್‌ಲಿಂಗೇಶ್ವರ ವಿದ್ಯಾಸಂಸ್ಥೆಯ ನಿರ್ದೇಶಕ ಅರುಣ್ ಕೊತ್ನಳ್ಳಿ ಸೇರಿದಂತೆ ಇತರರು, ದೂರು ನೀಡಿದವರನ್ನು ಕರೆಸಿ ವಿಚಾರಣೆ ಮಾಡದೇ ಏಕಪಕ್ಷೀಯವಾಗಿ ವರದಿ ನೀಡಿದ್ದಾರೆ. ಗ್ರಾಮಸ್ಥರ ಕಣ್ಣೆದುರೇ ನರ್ಸ್ ಬೆದರಿಕೆ ಹಾಕಿದ್ದು, ಇವರನ್ನು ತನಿಖೆ ಸಂದರ್ಭ ಯಾಕೆ ಕರೆಸಿಲ್ಲ? ಎಂದು ಪ್ರಶ್ನಿಸಿದರಲ್ಲದೆ, ಶುಶ್ರೂಷಕಿಯನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.

ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ಡಿಹೆಚ್‌ಓ ಸತೀಶ್‌ಕುಮಾರ್ ಅವರುಗಳು ಚರ್ಚಿಸಿ, ಆಪಾದನೆ ವ್ಯಕ್ತವಾಗಿರುವ ಶುಶ್ರೂಷಕಿಯನ್ನು ಬೇರೆಡೆಗೆ ನಿಯೋಜಿಸುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭ ಸ್ಥಳಕ್ಕೆ ಶಾಸಕರು ಆಗಮಿಸಲಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಕೆಲ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಶಾಸಕ ಡಾ. ಮಂತರ್‌ಗೌಡ ಅವರಲ್ಲಿಯೂ ಗ್ರಾಮಸ್ಥರು, ಶುಶ್ರೂಷಕಿಯ ವಿರುದ್ಧ ತಕ್ಷಣ ಕ್ರಮಕ್ಕೆ ಒತ್ತಾಯಿಸಿದರು.

ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಶಾಸಕರು, ಆರೋಪ ವ್ಯಕ್ತವಾಗಿರುವ ಬಗ್ಗೆ ಮತ್ತೊಮ್ಮೆ ಕೂಲಂಕಷ ತನಿಖೆ ನಡೆಸಬೇಕು. ದೂರುದಾರರನ್ನು ಒಳಗೊಂಡAತೆ ಹೇಳಿಕೆ ಪಡೆಯಬೇಕು. ಇಲಾಖಾ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂದು ಡಿಹೆಚ್‌ಓ ಅವರಿಗೆ ಸೂಚಿಸಿದರು.

ಸದ್ಯಕ್ಕೆ ಶುಶ್ರೂಷಕಿಯನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಿಂದ ಬೇರೆಡೆಗೆ ನಿಯೋಜನೆ ಮಾಡಲಾಗುವುದು. ಇಲಾಖಾ ಮಟ್ಟದ ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆದ ಸಾರ್ವಜನಿಕರು, ನರ್ಸ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದರೆ ಮುಂದಿನ ದಿನಗಳಲ್ಲಿ ಆಹೋರಾತ್ರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕಾರ್ಯಪ್ಪ, ಬೆಟ್ಟದಳ್ಳಿ ಸಂಪತ್, ಗುಡ್ಡಳ್ಳಿ ರಾಜೇಶ್, ಶಾಂತಳ್ಳಿ ಲೋಕೇಶ್, ದಿವ್ಯಕುಮಾರ್, ಅಭಿಮಠ ಅಪ್ಪಯ್ಯ, ತಲ್ತರೆಶೆಟ್ಟಳ್ಳಿ ಸುಖಾಂತ್, ಶಾಂತಳ್ಳಿ ಬಸವರಾಜು, ಬೆಟ್ಟದಕೊಪ್ಪ ಶಾಂತಪ್ಪ, ವೆಂಕಟೇಶ್, ಹರಗ ತ್ರಿಶೂಲ್, ಡಾಲಿ ಪ್ರಕಾಶ್, ಪೂವಯ್ಯ, ಪರಮೇಶ್, ಕುಮಾರಳ್ಳಿ ಕಿಶನ್, ಕುಡಿಗಾಣ ಸುಧಿನ್, ಈಶ್ವರ, ಬೀದಳ್ಳಿ ದೇಶರಾಜ್, ಹೆಗ್ಗಡಮನೆ ಉದಯ್, ಪಾರ್ವತಿ, ಹೇಮಾ ಸೇರಿದಂತೆ ಇತರರು ಇದ್ದರು.

ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

ಸೋಮವಾರಪೇಟೆ,ಸೆ.೮: ಐತಿಹಾಸಿಕ ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಹಾಗೂ ಮೈಸೂರಿನ ಚಾಮುಂಡಿ ಬೆಟ್ಟ ಕೇವಲ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಖಂಡಿಸಿ ಮಂಡಲ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರು, ಸರ್ಕಾರದ ಕ್ರಮವನ್ನು ಖಂಡಿಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಕನ್ನಡಕ್ಕೆ ತಾಯಿಯ ಸ್ಥಾನಮಾನ ನೀಡಿ ಗೌರವದಿಂದ ಕಾಣುತ್ತಿರುವ ಕನ್ನಡ ಸಂಸ್ಕೃತಿಗೆ ಅವಮಾನ ಮಾಡುವ ಹೇಳಿಕೆಗಳನ್ನು ಭಾನು ಮುಷ್ತಾಕ್ ನೀಡಿದ್ದಾರೆ. ಹಿಂದೂಗಳು ಗೌರವದಿಂದ ಕಾಣುವ ತಾಯಿ ಭುವನೇಶ್ವರಿ, ಅರಿಶಿಣ ಕುಂಕುಮದ ಬಗ್ಗೆ ಅಸಹನೆಯ ಮಾತುಗಳನ್ನು ಆಡಿರುವ ಸಾಹಿತಿಯನ್ನು ನಾಡಹಬ್ಬ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಸಿದ್ದರಾಮಯ್ಯ ಅವರು ಹಿಂದೂಗಳ ಧಾರ್ಮಿಕ ಭಾವನೆಯೊಂದಿಗೆ ಆಟವಾಡಿದ್ದಾರೆ ಎಂದು ಆರೋಪಿಸಿದರು.

ಭಾನು ಮುಷ್ತಾಕ್ ಅವರು ಅರಿಶಿಣ ಕುಂಕುಮ ಧರಿಸಿ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಹಿಂದೂ ಸಂಸ್ಕೃತಿಯAತೆ ದಸರಾ ಉದ್ಘಾಟಿಸಲಿ ಎಂದು ಸವಾಲು ಹಾಕಿದರು. ತಾಯಿ ಚಾಮುಂಡಿ ನೆಲೆಯಾಗಿರುವ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದು ನಾಚಿಕೆಗೇಡು ಎಂದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಸರ್ಕಾರವೇ ೬೩ ಕ್ರಿಮಿನಲ್ ಕೇಸ್‌ಗಳನ್ನು ಹಿಂಪಡೆದು, ಸಮಾಜಘಾತುಕ ಶಕ್ತಿಗಳ ಪೋಷಣೆಗೆ ಮುಂದಾಗಿದೆ ಎಂದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಮಂಡಲ ಅಧ್ಯಕ್ಷ ಗೌತಮ್ ಗೌಡ, ಪ್ರಮುಖರಾದ ದರ್ಶನ್ ಜೋಯಪ್ಪ, ಮನುಕುಮಾರ್ ರೈ, ಮಹೇಶ್ ತಿಮ್ಮಯ್ಯ, ಮೋಹಿತ್ ತಿಮ್ಮಯ್ಯ, ಹೆಚ್.ಕೆ. ಮಾದಪ್ಪ, ರೂಪಾ ಸತೀಶ್, ಮಚ್ಚಂಡ ಪ್ರಕಾಶ್, ಹೆಚ್.ಸಿ. ರಾಮಕೃಷ್ಣ, ಎಸ್.ಆರ್. ಸೋಮೇಶ್, ಶರತ್‌ಚಂದ್ರ, ಮೋಕ್ಷಿಕ್ ರಾಜ್, ಕೃಷ್ಣಪ್ಪ, ಜಯಲಕ್ಷಿö್ಮÃ, ಇಂದಿರಾ ಮೋಣಪ್ಪ, ಭುವನೇಶ್, ಕೆ.ಕೆ. ಸುಧಾಕರ್ ಸೇರಿದಂತೆ ಇತರರು ಇದ್ದರು.