ಮಡಿಕೇರಿ, ಸೆ. ೯: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸೆ.೩೦ ರೊಳಗೆ ಅರ್ಜಿ ಸಲ್ಲಿಸುವಂತೆ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಹಾಗೂ ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್ ತಿಳಿಸಿದ್ದಾರೆ.

೧೦ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಶೇ.೮೫ ಕ್ಕಿಂತ ಮೇಲ್ಪಟ್ಟು ಹಾಗೂ ಆಂಗ್ಲ ಮಾಧ್ಯಮದಲ್ಲಿ ಶೇ.೯೦ ಕ್ಕಿಂತ ಮೇಲ್ಪಟ್ಟು ಅಂಕ ಪಡೆದಿರಬೇಕು. ಪಿಯುಸಿ ಗ್ರಾಮೀಣ ವಿಭಾಗದಲ್ಲಿ ಶೇ.೯೦ ಕ್ಕಿಂತ ಮೇಲ್ಪಟ್ಟು ಮತ್ತು ನಗರ ವಿಭಾಗದಲ್ಲಿ ಶೇ.೯೫ಕ್ಕಿಂತ ಮೇಲ್ಪಟ್ಟು ಅಂಕ ಪಡೆದಿರಬೇಕು. ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ಮತ್ತು ಸಿ.ಇ.ಟಿ ಯಲ್ಲಿ ೧೦೦೦ ರ‍್ಯಾಂಕ್ ಒಳಗೆ ಹಾಗೂ ಎನ್.ಇ.ಇ.ಟಿ (ನೀಟ್) ಯಲ್ಲಿ ರಾಷ್ಟçಮಟ್ಟದಲ್ಲಿ ೫೦೦೦ ದೊಳಗೆ ರ‍್ಯಾಂಕ್ ಪಡೆದುಕೊಂಡಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಅವರು ಪತ್ರಿಕಾ ಪ್ರಟಕಣೆ ನೀಡಿದ್ದಾರೆ.

ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳು ಸೆ. ೩೦ ರೊಳಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಡನೆ ಅರ್ಜಿಯನ್ನು ಸಂಘದ ಕಚೇರಿಗೆ ತಲುಪಿಸಬೇಕು.

ವೈದ್ಯಕೀಯ, ಇಂಜಿನಿಯರಿAಗ್, ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಪಡೆದ ಮತ್ತು ಕ್ರೀಡೆ, ಕಲೆ, ಸಾಂಸ್ಕೃತಿಕ ೪ಏಳನೇ ಪುಟಕ್ಕೆ ಕ್ಷೇತ್ರದಲ್ಲಿ ಸರಕಾರದಿಂದ ನೀಡಲ್ಪಡುವ ರಾಜ್ಯ, ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದ ಪ್ರಶಸ್ತಿ ಪಡೆದು ಉತ್ತಮ ಪ್ರತಿಭಾ ಪ್ರದರ್ಶನ ತೋರುತ್ತಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವುದು.

ಆಸಕ್ತರು ತಾ.೩೦ ರೊಳಗೆ ಸೂಕ್ತ ದಾಖಲೆ ಸಹಿತ ಅರ್ಜಿಯನ್ನು ಸಂಘದ ಕಚೇರಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು ೯೪೪೮೦೦೫೬೪೨ ಹಾಗೂ ಕಾರ್ಯದರ್ಶಿ ೮೧೯೭೨೯೭೫೧೬ ಸಂಪರ್ಕಿಸಬಹುದು ಎಂದು ಅಂಬೆಕಲ್ಲು ನವೀನ್ ಹಾಗೂ ಪೇರಿಯನ ಕೆ. ಉದಯಕುಮಾರ್ ತಿಳಿಸಿದ್ದಾರೆ.