ಮಡಿಕೇರಿ, ಸೆ. ೯: ಮಾಂದಲಪಟ್ಟಿಗೆ ತೆರಳುವ ಮಾರ್ಗಮಧ್ಯೆಯ ನಂದಿಮೊಟ್ಟೆ ಜಂಕ್ಷನ್‌ನಲ್ಲಿ ಪ್ರವಾಸಿಗನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಗಸ್ಟಿನ್, ಥೋಮಸ್, ನಾರಾಯಣ ಸೇರಿದಂತೆ ಇತರರ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ತಾ. ೬ ರಂದು ತಮಿಳುನಾಡಿನಿಂದ ಮಡಿಕೇರಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬವೊAದು ಅಬ್ಬಿಫಾಲ್ಸ್ಗೆ ತೆರಳಿ ಬಳಿಕ ಮಾಂದಲಪಟ್ಟಿಗೆ ಬಂದು ಅಲ್ಲಿಗೆ ತೆರಳಲೆಂದು ನಂದಿಮೊಟ್ಟೆ ಜಂಕ್ಷನ್‌ನಲ್ಲಿ ಚಾಲಕರೊಬ್ಬರನ್ನು ವಿಚಾರಿಸಿದಾಗ ರೂ. ೪,೫೦೦ ಹಣ ಎಂದು ತಿಳಿಸಿದ್ದು, ಉಳಿದ ಚಾಲಕರ ಬಳಿ ಬೆಲೆ ಕೇಳಿದ ಸಂದರ್ಭ ಮೊದಲು ಕೇಳಿದ ಚಾಲಕ ಪ್ರವಾಸಿಗರ ಬಳಿ ಗಲಾಟೆ ಮಾಡಿ ಶರವಣನ್ ಎಂಬವರ ಮೇಲೆ ಹಲ್ಲೆಗೈದಿದ್ದು, ಆ ಸಂದರ್ಭ ಬಂದ ಅವರ ಪತ್ನಿ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂದು ದೂರುದಾರರಾದ ಶರವಣನ್, ಜಯಂತ್ ಹಾಗೂ ಗೋಪಿನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.