ಮೂರ್ನಾಡು : ಶ್ರೀ ಗಜೇಂದ್ರ ಯುವಶಕ್ತಿ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾದ ಗೌರಿ ಗಣೇಶೋತ್ಸವ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ, ಘನತ್ಯಾಜ್ಯ ವಿಲೇವಾರಿ ಸಿಬ್ಬಂದಿಗಳಿಗೆ ಹಾಗೂ ಕಳೆದ ಶೈಕ್ಷಣಿಕ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.

ಪಟ್ಟಣದ ಹನುಮಾನ್ ಟ್ರೇರ‍್ಸ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗೆ ೭ ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಶನ್ ರೈ ಆಗಮಿಸಿ ಮಾತನಾಡಿ, ಇಂತಹ ಸಂಘ ಸಂಸ್ಥೆಗಳು ರೂಪಿಸುವÀ ಸಮಾಜಮುಖಿ ಕೆಲಸ ಕಾರ್ಯಗಳು ಇನ್ನಿತರರಿಗೆ ಪ್ರೇರಣೆ ಆಗಿದೆ. ಇಂತಹ ಸಮಾಜಮುಖಿ ಕೆಲಸಗಳು ಯುವಪೀಳಿಗೆಯಿಂದ ಸಮಾಜಕ್ಕೆ ಒದಗಿಬರಬೇಕು ಎಂದು ತಿಳಿಸಿದರು. ದಾನಿಗಳಾದ ಬಾಚ್ಚೇಟಿರ ಕಮಲು ಮುದ್ದಯ್ಯ, ಬಾಡಗ ಗ್ರಾಮದ ಕಾಫಿ ಬೆಳೆಗಾರ ಕಂಬೀರAಡ ಗೌತಮ್, ಉದ್ಯಮಿ ಕಿರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಪೌರಕಾರ್ಮಿಕರಾದ ದೊರೆ, ರಾಜಮ್ಮ, ಮಂಜುಳಾ, ಗಣೇಶ, ಮಾದೇವ ಹಾಗೂ ಘನತ್ಯಾಜ್ಯ ವಿಲೇವಾರಿ ಸಿಬ್ಬಂದಿಗಳಾದ ಟಿ.ಡಿ ಲೀಲಾ, ಬಿ.ಎಲ್ ಭಾರತಿ, ಆಶಾ ದೇವಮ್ಮ, ಶೋಭಾ ಮತ್ತು ಸ್ವಪ್ನ ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಗೃಹ ಬಳಕೆ ಕಿಟ್ ವಿತರಿಸಲಾಯಿತು.

ಕಳೆದ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳಿಸಿದ ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಎಸ್.ಎಸ್ ರವಿ, ಪಿ.ಆರ್ ತನಷೀರ್, ಎಂ.ಎA. ಹೇಮಂತ್ ಹಾಗೂ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ಬಿ.ಸಿ ಲತಾಕ್ಷ ರೈ, ಕೆ.ಎಂ. ತಶ್ಮಿಕ, ಟಿ.ಐ. ಅಲೀಮ ಇಶ್ರ ಅವರಿಗೆ ಸನ್ಮಾನಿಸಿ ಪ್ರೋತ್ಸಾಹ-ಧನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೬ನೇ ಸ್ಥಾನ, ಜಿಲ್ಲೆಗೆ ೨ನೇ ಸ್ಥಾನ, ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿ ಶೈಕ್ಷಣಿಕ ಸಾಧನೆ ಪಡೆದು ಗ್ರಾಮಕ್ಕೆ ಕೀರ್ತಿ ಮೂಡಿಸಿದ ಮೂರ್ನಾಡಿನ ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಸಿ.ಎಂ. ಮುಹಮದ್ ಶಾಹಿಲ್ ಅವರನ್ನು ಕೂಡ ಸನ್ಮಾನಿಸಿ ಪ್ರೋತ್ಸಾಹ ಧನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಜೇಂದ್ರ ಯುವಶಕ್ತಿ ಅಧ್ಯಕ್ಷರಾದ ಎಂ.ಕೆ ಸತೀಶ್ ಅವರು ವಹಿಸಿದ್ದರು. ಶಿಕ್ಷಕ ರಂಜಿತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನೆÀರೆದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಬಳಿಕ ಮೂರ್ನಾಡಿನ ಟೀಮ್ ಇನೋಟಿವ್ ಬಾಯ್ಸ್ ವತಿಯಿಂದ ಕಲಾಕೃತಿಗಳನ್ನೊಳಗೊಂಡ ಅಲಕೃಂತ ಮಂಟಪದಲ್ಲಿ ಪಾರ್ವತಿ ತನಯನಿಗೆ ಗಜವದನ ಪೌರಾಣಿಕ ಕಥಾ ಸಾರಾಂಶದ ಚಲನವಲನ ಮೂಡಿಬಂದು ನೆರೆದವರ ಗಮನ ಸೆಳೆಯಿತು. ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಬಲಮುರಿ ಕಾವೇರಿ ನದಿಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

- ಟಿ.ಸಿ. ಹರೀಶ್

ವೀರಾಜಪೇಟೆ: ಶಿವಕೇರಿ ಶ್ರೀ ವಿನಾಯಕ ಯುವ ಸಮಿತಿ ವತಿಯಿಂದ ೪೬ನೇ ವರ್ಷದ ವಿಜೃಂಭಣೆಯ ಗೌರಿ ಗಣೇಶೋತ್ಸವ ಅಂಗವಾಗಿ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗ್ಯಾರೆಂಟಿ ಯೋಜನೆಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಸರಕಾರದ ಯಾವುದೇ ಒಂದು ಅನುದಾನವಿಲ್ಲದೆ ಗೌರಿ ಗಣೇಶೋತ್ಸವವನ್ನು ವರ್ಣರಂಜಿತವಾಗಿ ಹಾಗೂ ಸೌಹಾರ್ಧವಾಗಿ ಆಚರಿಸಲ್ಪಡಲಾಗುತ್ತಿದೆ. ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿ ೪೬ನೇ ವರ್ಷದ ಗೌರಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಮಡಿಕೇರಿ ರಾಜರಾಜೇಶ್ವರಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಗೋವಿಂದ ಸ್ವಾಮಿ ಅವರು ಮಾತನಾಡಿ, ಯಾವುದೇ ಶುಭ ಕಾರ್ಯ ಮಾಡಬೇಕಾದರೆ ವಿಘ್ನ ನಿವಾರಕ ವಿಘ್ನೇಶ್ವರನನ್ನು ನೆನೆದು ಪೂಜಾ ಕೈಂಕರ್ಯಗಳನ್ನು ಮಾಡುತ್ತೇವೆ. ನಗರದ ಬೀದಿಗಳಲ್ಲಿ ಗಣೇಶನನ್ನು ಹನ್ನೊಂದು ದಿವಸಗಳ ಕಾಲ ಇರಿಸಿ ವಿಸರ್ಜನೆ ಮಾಡುತ್ತೇವೆ, ವಿಘ್ನೇಶ್ವರನು ಎಲ್ಲರಿಗೂ ಒಳಿತು ಮಾಡಲಿ ಎಂದು ಹಾರೈಸಿದರು. ಸಮಾಜ ಸೇವಕಿ ಬೀನಾ ಜಗದೀಶ್ ಮಾತನಾಡಿ, ಶ್ರೀ ವಿನಾಯಕ ಯುವ ಸಮಿತಿ ಶಿವಕೇರಿ ೪೬ನೇ ವರ್ಷದ ಗೌರಿ ಗಣೇಶೋತ್ಸವವನ್ನು ಆಚರಿಸುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ ಸಚಿಂದ್ರ ಅವರು ವಹಿಸಿದ್ದರು. ಧರ್ಮಜ ಉತ್ತಪ್ಪ, ಬೀನ ಜಗದೀಶ್ ಹಾಗೂ ಗೋವಿಂದ ಸ್ವಾಮಿ ಅವರುಗಳನ್ನು ಶಿವಕೇರಿಯ ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸರ್ವ ಪದಾಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.

ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀ ವೀರಾಂಜನೇಯ ಯುವಕ ಸಂಘದ ೧೧ನೇ ವರ್ಷದ ಶ್ರೀ ವಿನಾಯಕ ಯುವಕ ಸಂಘದ ೪ನೇ ವರ್ಷದ ಗೌರಿ ಗಣೇಶೋತ್ಸವ ಸಂಭ್ರಮಾಚರಣೆಯೊAದಿಗೆ ನೆರವೇರಿತು.

ಆಗಸ್ಟ್ ೨೭ರ ಗಣೇಶ ಚೌತಿ ದಿನದಂದು ವೀರಾಂಜನೇಯ ಯುವಕ ಸಂಘ ಶ್ರೀ ನರೇಂದ್ರ ಮೋದಿ ಭವನದಲ್ಲಿ ಹಾಗೂ ವಿನಾಯಕ ಯುವಕ ಸಂಘ ಪಟ್ಟಣದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿತ್ತು.

ಸೆಪ್ಟಂಬರ್ ೪ ಹಾಗೂ ಸೆ.೭ ರಂದು ಕ್ರಮವಾಳಿವೆರಡು ಸಮಿತಿಗಳ ಗಣಪತಿಯ ಉತ್ಸವ ಮೂರ್ತಿಗಳನ್ನು ಮೆರವಣೆಗೆಯೊಂದಿಗೆ ಭೂತನಕಾಡು ಹೊಳೆಯಲ್ಲಿ ವಿಸರ್ಜಿಸಲಾಯಿತು.

ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಸುಂಟಿಕೊಪ್ಪ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ೬೧ನೇ ವರ್ಷದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆಯು ಭಾನುವಾರ ಸಂಜೆ ಅದ್ದೂರಿಯಾಗಿ ನೆರವೇರಿತು.

ಬೆಳಿಗ್ಗೆಯಿಂದ ಗಣಹೋಮ, ಹೂವಿನ ಪೂಜೆಯ ಜೊತೆಯಲ್ಲಿ ಸುತ್ತ ಮುತ್ತಲಿನ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಕೊನೆಯ ಪೂಜೆ ಸಲ್ಲಿಸಿ ಪುನೀತರಾದರು. ನಂತರ ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು.

ಅನಂತರ ದೇವಾಲಯದಲ್ಲಿ ಪ್ರಧಾನ ಅರ್ಚಕ ಹಾ.ಮಾ.ಗಣೇಶ್ ಶರ್ಮಾ, ಮಂಜುನಾಥ್ ಶರ್ಮಾ, ಗಣೇಶ್ ಉಪಾಧ್ಯಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾಪೂಜೆ ಹಾಗೂ ದೇವಾಲಯದಲ್ಲಿ ಗೌರಿ ಗಣೇಶನ ಉತ್ಸವ ಮೂರ್ತಿಗೆ ಕೊನೆಯ ಮಹಾ ಆರತಿಯನ್ನು ಮಾಡುವುದರ ಮೂಲಕ ಜೈ ಘೋಷಣೆಯೊಂದಿಗೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಸಂಗೀತಕ್ಕೆ ಯುವಕ- ಯುವತಿಯರು ಹೆಜ್ಜೆ ಹಾಕುತ್ತಾ ಬೃಹತ್ ಶೋಭಯಾತ್ರೆಯು ಸಾಗಿತು.

ಸಮಿತಿಯ ಪದಾಧಿಕಾರಿಗಳು ಅದ್ದೂರಿಯಾಗಿ ೧೧ ದಿನಗಳ ಕಾಲ ಮೂರ್ತಿಯನ್ನು ಕುಳ್ಳಿರಿಸಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪೂಜೆ ಹವನಗಳನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ರಾಮ ಮಂದಿರದಿAದ ಆರಂಭಗೊAಡ ಮೆರವಣಿಗೆ ಮಾದಾಪುರ ರಸ್ತೆಯಲ್ಲಿಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದತ್ತ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ನಂತರ ಅದೇ ಮಾರ್ಗವಾಗಿ ವಾಪಾಸಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ರಾತ್ರಿ ಗದ್ದೆಹಳ್ಳದ ಯಂಕನ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿ ಪೂಜೆ ಸಲ್ಲಿಸಿ ವಿಸರ್ಜಿಸುವುದರೊಂದಿಗೆ ಸಂಭ್ರಮದ ಗಣೇಶೋತ್ಸವ ತೆರೆ ಕಂಡಿತು.

ಮೆರವಣಿಗೆಯುದ್ದಕ್ಕೂ ಬಾನಂಗಳದಲ್ಲಿ ಪಟಾಕಿಗಳು ಆಕರ್ಷಕವಾಗಿ ಮೂಡಿಬಂದವು. ನೂರಾರು ಸಂಖ್ಯೆಯ ಜನಸ್ತೋಮ ಮೆರವಣಿಗೆಗೆ ಹೆಚ್ಚಿನ ಪುಷ್ಠಿ ನೀಡಿತು.

ಸಮಿತಿ ಅಧ್ಯಕ್ಷ ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಹೆಚ್ ನಿಖಿಲ್, ಹಿರಿಯರಾದ ಶಾಂತರಾಮ ಕಾಮತ್, ಧನು ಕಾವೇರಪ್ಪ, ಪಿ.ಆರ್.ಸುನಿಲ್ ಕುಮಾರ್, ಪಟ್ಟೆಮನೆ ಉದಯಕುಮಾರ್, ಸುರೇಶ್ ಗೋಪಿ, ಪದಾಧಿಕಾರಿಗಳಾದ ಪದ್ಮನಾಭ, ಮಿಥುನ್, ಮಹೇಂದ್ರ, ದಿನುದೇವಯ್ಯ ಸೇರಿದಂತೆ ಮತ್ತಿತರರು ಇದ್ದರು. ವಿಸರ್ಜನಾ ಮೆರವಣಿಗೆಯಲ್ಲಿ ಸಿದ್ದಾಪುರದ ನೆಲ್ಲಿಹುದಿಕೇರಿಯ ಶ್ರೀ ಮೂಕಾಂಬಿಕಾ ಭಜನಾ ಕುಣಿತ ಆಕರ್ಷಕವಾಗಿ ಮೂಡಿಬಂದಿತು. ಸುಮಾರು ೫೦ ಮಂದಿ ಮಕ್ಕಳ ತಂಡದಿAದ ಕೃಷ್ಣ, ಗೋಕುಲೆ, ದೇವಾನುದೇವತೆಗಳ ಹಾಡಿಗೆ ರಸ್ತೆಯುದ್ದಕ್ಕೂ ಕುಣಿತ ಏರ್ಪಟ್ಟು ಜನಾಕರ್ಷಣ ಕೇಂದ್ರವಾಗಿತ್ತು.

ಈ ಸಂದರ್ಭ ಮುಸ್ಲಿಂ ಭಾಂದವರು ತಂಪು ಪಾನಿಯ ವಿತರಿಸಿ ಶುಭಾಶಯ ಕೋರಿದರು.

ಐಗೂರು: ಮಾದಾಪುರದ ವಿನಾಯಕ ಸೇವಾ ಸಮಿತಿ ವತಿಯಿಂದ ಮಾದಾಪುರದ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೪೬ನೇ ವರ್ಷದ ಗಣಪತಿಯ ವಿಸರ್ಜನೋತ್ಸವು ಸಂಭ್ರಮದಿAದ ಜರುಗಿತು. ಭವ್ಯ ಅಲಂಕಾರದ ಮಂಟಪದಲ್ಲಿ ಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದಿಂದ ಹೊರಟ ಮೆರವಣಿಗೆಯು ಮಾದಾಪುರದ ಮುಖ್ಯಬೀದಿಗಳಲ್ಲಿ ಸಂಚರಿಸಿತು. ಕೇಸರಿಮಯವಾಗಿದ್ದ ಮೆರವಣಿಗೆಯಲ್ಲಿ ಸಂಗೀತದ ತಾಳಕ್ಕೆ ಯುವಕರು, ವೃದ್ಧರು ಮತ್ತು ಮಹಿಳೆಯರು ಕುಣಿದು ಸಂಭ್ರಮಾಚರಿಸಿದರು. ಉಡೋತ್ ಮೊಟ್ಟೆಯ ಆದಿಶಕ್ತಿ ಭಜನಾ ಸಂಘದ ತಂಡದ ಸದಸ್ಯರು ಮೆರವಣಿಗೆಯುದ್ಧಕ್ಕೂ ಭಜನೆಗಳನ್ನು ಹರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ನೀಡಿದರು. ಭಕ್ತರಿಂದ ಗಣಪನಿಗೆ ಜೈಕಾರ, ಘೋಷಣೆಗಳು ಮೊಳಗಿದವು. ಮೆರವಣಿಗೆಯು ಕೊನೆಗೆ ಮಾದಾಪುರದ ಹೊಳೆಯ ಕಡೆಗೆ ಸಾಗಿ ಮೂರ್ತಿಯನ್ನು ಹೊಳೆಯಲ್ಲಿ ವಿಸರ್ಜಿಸಲಾಯಿತು ಅನ್ನ ಸಂತರ್ಪಣೆ ನಡೆಯಿತು. ಮಾದಾಪುರ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿನಾಯಕ ಸೇವಾ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಮುಳ್ಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಇಲ್ಲಿನ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಭಾನುವಾರ ಬೆಳಿಗ್ಗೆ ವೇದಿಕೆಯಲ್ಲಿ ಕೂರಿಸಿದ್ದ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಅಲಂಕರಿಸಿದ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.

ಮೆರವಣಿಗೆ ಸಂದರ್ಭದಲ್ಲಿ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ಗ್ರಾಮದ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.ಕುಶಾಲನಗರ, ಕುಶಾಲನಗರದ ಜನತಾ ಕಾಲೋನಿಯ ಶ್ರೀರಾಮ ಯುವಕರ ಸಂಘದ ಆಶ್ರಯದಲ್ಲಿ ೨೮ನೇ ವರ್ಷದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧೆ ನಡೆಯಿತು. ಹಾಸನ, ಹುಣಸೂರು, ಶನಿವಾರಸಂತೆ, ಚಿಕ್ಕಮಗಳೂರು, ಕುಶಾಲನಗರ, ಕೂಡಿಗೆ ಸೇರಿದಂತೆ ವಿವಿಧ ಕಡೆಗಳಿಂದ ೧೦ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.

ವಿವಿಧ ನೃತ್ಯ ತಂಡಗಳ ನೃತ್ಯಪಟುಗಳು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಹಾಸನದ ಡಿಜೆ ಡ್ಯಾನ್ಸ್ ಸ್ಟುಡಿಯೋ ಪ್ರಥಮ, ಕೂಡಿಗೆಯ ಎ ಕ್ರಿಯೇಟಿವ್ ಅಕಾಡೆಮಿ ದ್ವಿತೀಯ ಹಾಗೂ ಕುಶಾಲನಗರದ ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆ ತೃತೀಯ ಬಹುಮಾನವನ್ನು ಪಡೆದುಕೊಂಡಿತು. ಮಂಗಳೂರಿನ ಮನೋಜ್ ಕಿಶನ್, ಚಿಕ್ಕ ಮಗಳೂರಿನ ಸುಂದರೇಶ್ ಹಾಗೂ ಕುಶಾಲನಗರದ ಮಂಜು ಭಾರ್ಗವಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಇದೇ ಸಂದರ್ಭ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ, ಸಂತೋಷ್, ಕುಮಾರ್, ಪುರಸಭೆ ನಾಮ ನಿರ್ದೇಶಿತ ಸದಸ್ಯ ನವೀನ್, ಬಿ.ಜೆ.ಪಿ. ಯುವಮೋರ್ಚ ಕಾರ್ಯದರ್ಶಿ ಸಚಿನ್, ಶ್ರೀರಾಮ ಯುವಕರ ಸಂಘದ ಪ್ರಮುಖರಾದ ಚಂದನ್, ಕೃತಿಕ್, ಅಕ್ಷಯ್, ಪುನೀತ್, ಜೀವನ್, ಗಣೇಶ್, ಗಿರೀಶ, ಮೋಹನ, ಹರೀಶ, ಸಚಿನ್, ವಿಷ್ಣು, ದೀಪಕ್, ವಿಕ್ರಮ್, ಶ್ರೀಕಾಂತ್, ಪ್ರೀತಮ್, ಅಮಯ್, ಸೇರಿದಂತೆ ಮತ್ತಿತರರು ಇದ್ದರು. ಗುಡ್ಡೆಹೊಸೂರು: ಇಲ್ಲಿನ ಸಮುದಾಯ ಭವನದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿಯ ೩೧ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ೫ ದಿನಗಳ ಕಾಲ ೬ ಅಡಿಯ ಗಣೇಶ ಮೂರ್ತಿಗೆ ಗ್ರಾಮಸ್ಥರು ಪ್ರತಿನಿತ್ಯ ಪೂಜೆ ನಡೆಸಿ ಅನ್ನದಾನ ನಡೆಸಿದರು. ಅದೇ ರೀತಿ ವಿಸರ್ಜನೆ ದಿನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ತರಿಕೇರಿಯ ಭವ್ಯವಾದ ರಥದಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ತುಂತುರು ಮಳೆಯ ನಡುವೆ ಸಂಗೀತದೊAದಿಗೆ ಸಾವಿರಾರು ಯುವಕರು, ಮಹಿಳೆಯರು ನೃತ್ಯ ಮಾಡುವ ದೃಶ್ಯ ಕಂಡುಬAತು. ವಿವಿಧ ಭಾಗಕ್ಕೆ ಮೆರವಣಿಗೆ ಸಾಗಿ ಗುಡ್ಡೆಹೊಸೂರಿನ ವೃತ್ತಕ್ಕೆ ಆಗಮಿಸಿದ ಸಂದರ್ಭ ಗ್ರಾಮದ ವಿವಿಧ ಭಾಗಗಳಿಂದ ಸಾರ್ವಜನಿಕರು ತಂಡೋಪ ತಂಡವಾಗಿ ಬಂದು ಮೆರವಣಿಗೆ ವೀಕ್ಷಿಸಿದರು. ಈ ಸಂದರ್ಭ ಗುಡ್ಡೆಹೊಸೂರಿನ ವೃತ್ತ ವಿದ್ಯುತ್ ದೀಪಗಳಿಂದ ಅಲಂಕೃತವಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಗುಡ್ಡೆಹೊಸೂರಿನ ವೃತ್ತದ ಬಳಿ ಯುವಕರು ನೃತ್ಯ ಮಾಡಿದರು.

ಸಮಿತಿಯ ಅಧ್ಯಕ್ಷರಾದ ಬಿ.ಎಂ.ಪ್ರದೀಪ್ ಮತ್ತು ಎಲ್ಲಾ ಸದಸ್ಯರು ಹಾಜರಿದ್ದು ಮೆರವಣಿಗೆಯನ್ನು ಯಶಸ್ವಿಗೊಳಿಸಿದರು. ಯುವಕರ ತಂಡ ಯಾವುದೆ ಟ್ರಾಫಿಕ್ ಜಾಮ್ ಆಗದ ರೀತಿಯಲ್ಲಿ ಪೊಲೀಸರಿಗೆ ನೆರವಾದರು. ಈ ಸಂದಭÀð ಕುಶಾಲನಗರ ಗ್ರಾಮಾಂತರ ಠಾಣೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು. ನಂಜರಾಯಪಟ್ಟಣ: ನಂಜರಾಯಪಟ್ಟಣ ಗುಳಿಗ ಗ್ರಾಮದಲ್ಲಿ ಅದ್ದೂರಿಯಾಗಿ ೧೮ನೆ ವರ್ಷದ ಗೌರಿ ಗಣೇಶ ವಿಸರ್ಜನ ಉತ್ಸವ ಕಾರ್ಯಕ್ರಮ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆ ದುಬಾರೆ ಕಾವೇರಿ ನದಿಯಲ್ಲಿ ಸಂಪನ್ನಗೊAಡಿತು. ನಂತರ ಪೂಜಾ ವಿಧಿವಿಧಾನಗಳೊಂದಿಗೆ ವಿಸರ್ಜನೆ ಕಾರ್ಯಕ್ರಮ ನೆರವೇರಿತು. ವಿಸರ್ಜನಾ ಮೆರವಣಿಗೆ ಸಂದರ್ಭ ಮುಸ್ಲಿಂ ಜಮಾಅತ್ ಸದಸ್ಯರು ಭಕ್ತಾದಿಗಳಿಗೆ ತಂಪು ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಿದರು. ಸುಂಟಿಕೊಪ್ಪ: ೭ನೇ ಹೊಸಕೋಟೆಯ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿವಗಣೇಶ ಉತ್ಸವ ಮೂರ್ತಿಯ ವಿಸರ್ಜನೋತ್ಸವವು ಅದ್ದೂರಿಯಾಗಿ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು.

ವಿದ್ಯುತ್ ದೀಪ ಅಲಂಕಾರ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿ ಮೆರವಣಿಗೆ ನಗಾರಿ, ಹುಲಿ ವೇಷದೊಂದಿಗೆ ದೇವಾಲಯದಿಂದ ಹೊರಟು ಮೆಟ್ನಳ್ಳದವರೆಗೆ ಸಾಗಿ ಅಲ್ಲಿಂದ ವಾಪಾಸಾಗಿ ಅದೇ ಮಾರ್ಗವಾಗಿ ಏಳನೇ ಹೊಸಕೋಟೆಯ ಪ್ರಮುಖ ಬೀದಿಗಳಲ್ಲಿ ಸಾಗಿತು. ಭಕ್ತಾದಿಗಳ ಪೂಜೆ ನೆರವೇರಿಸಿದ ಬಳಿಕ ೭ನೇ ಹೊಸಕೋಟೆ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ದಾಸಂಡ ರಮೇಶ್ ಚಂಗಪ್ಪ, ರಮೇಶ್, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಮತ್ತಿತರರು ಇದ್ದರು.