ಮಡಿಕೇರಿ, ಸೆ. ೯: ಚೆನ್ನಪಟ್ಟಣ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅವಘಡವೊಂದರಲ್ಲಿ ಕೊಡಗು ಜಿಲ್ಲೆಯ ದಂಪತಿ ದುರ್ಮರಣಗೊಂಡಿರುವ ಘಟನೆ ನಡೆದಿದೆ.

ಮೂಲತಃ ದಕ್ಷಿಣ ಕೊಡಗಿನ ಪರಕಟಗೇರಿ (ಪೂಕೊಳ) ಗ್ರಾಮದವರಾದ ಬೆಂಗಳೂರಿನ ದಾಸರಹಳ್ಳಿಯಲ್ಲಿ ನೆಲೆಸಿದ್ದ ಕಾಳಿಮಾಡ ಸೋಮಯ್ಯ (ರಮೇಶ್- ೭೦) ಹಾಗೂ ಅವರ ಪತ್ನಿ ಸರಸ್ವತಿ (೬೫- ತಾಮನೆ ಚೆಟ್ಟಮಾಡ) ಅವರು ಈ ಅವಘಡದಲ್ಲಿ ಸ್ಥಳದಲ್ಲೇ ದುರ್ಮರಣಗೊಂಡಿದ್ದಾರೆ. ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ.

ಕಾರು ಚಾಲಿಸುತ್ತಿದ್ದ ಸೋಮಯ್ಯ ಅವರ ಪುತ್ರ ಪವನ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇವರ ಜತೆ ಕಾರಿನಲ್ಲಿದ್ದ ಮುದ್ದಿನ ಶ್ವಾನವೂ ಬದುಕುಳಿದಿದೆ. ಚೆನ್ನಪಟ್ಟಣ ಮುಖ್ಯರಸ್ತೆಯಲ್ಲಿ ಬರುವ ದೇವರಹೊಸಹಳ್ಳಿ ಎಂಬಲ್ಲಿ ಅವಘಡ ಸಂಭವಿಸಿದೆ.

ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಘಟನೆ

ಕಾಳಿಮಾಡ ಸೋಮಯ್ಯ ಅವರು ಪರಕಟಗೇರಿಯಲ್ಲಿ ತೋಟ ಹಾಗೂ ಮನೆ ಹೊಂದಿದ್ದು ಪ್ರಸ್ತುತ ಬೆಂಗಳೂರಿನ ದಾಸರಹಳ್ಳಿಯಲ್ಲಿ ನೆಲೆಸಿದ್ದರು. ಎರಡು ದಿನಗಳ ಹಿಂದೆ ಸಂಬAಧಿಕರ ನಿಶ್ಚಿತಾರ್ಥ ಸಮಾರಂಭಕ್ಕೆAದು ಆಗಮಿಸಿದ್ದ ಇವರು ಪತ್ನಿ ಹಾಗೂ ಪುತ್ರನೊಂದಿಗೆ ಪರಕಟಗೇರಿಯ ಮನೆಯಲ್ಲಿ ಉಳಿದಿದ್ದು ಇಂದು ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.

ಇವರ ಕಾರಿನ ಮುಂಬದಿಯಲ್ಲಿ ಸಾಗುತ್ತಿದ್ದ ಕಂಟೈನರ್ ಲಾರಿಯೊಂದರ ಹಿಂಬದಿಯಲ್ಲಿ ಅಳವಡಿಸಿದ್ದ ಟಯರ್ (ಸ್ಟೆಪ್ನಿ) ಏಕಾಏಕಿ ರಸ್ತೆಗೆ ಬಿದ್ದು ಇದು ಕಾರಿನ ಮುಂಭಾಗಕ್ಕೆ ಬಡಿದಿದೆ. ಈ ಸಂದರ್ಭ ಕಾರು ಚಾಲಿಸುತ್ತಿದ್ದ ಪವನ್ ಅವರ ನಿಯಂತ್ರಣ ತಪ್ಪಿದ ಕಾರು ಕಂಟೈನರ್‌ನ ಹಿಂಬದಿಗೆ ಡಿಕ್ಕಿಯಾಗಿದ್ದಲ್ಲದೆ, ಅಲ್ಲಿನ ರಸ್ತೆ ವಿಭಜಗಕ್ಕೂ ೪ಏಳನೇ ಪುಟಕ್ಕೆಅಪ್ಪಳಿಸಿದೆ ಎನ್ನಲಾಗಿದೆ. ಈ ದುರ್ಘಟನೆ ಸಂದರ್ಭ ಕಾರಿನ ಮುಂಬದಿಯಲ್ಲಿ ಕುಳಿತಿದ್ದ ಸೋಮಯ್ಯ ಹಾಗೂ ಹಿಂಬದಿ ಸೀಟಿನಲ್ಲಿದ್ದ ಸರಸ್ವತಿ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಚಾಲಕ ಪವನ್ ಹಾಗೂ ಇವರುಗಳ ಜತೆ ಕಾರಿನಲ್ಲಿದ್ದ ಶ್ವಾನ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ.

ಮೃತದೇಹವನ್ನು ಚೆನ್ನಪಟ್ಟಣ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಮೃತದೇಹವನ್ನು ಬೆಂಗಳೂರು ದಾಸರಹಳ್ಳಿಯ ಮೃತರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಬುಧವಾರ (ಇಂದು) ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿರುವುದಾಗಿ ಸಂಬAಧಿಕರು ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಚೆನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಮತ್ತೋರ್ವ ಪುತ್ರ ಸಜನ್ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.