ಮಡಿಕೇರಿ, ಸೆ. ೯: ಮಡಿಕೇರಿ ವಿದ್ಯುತ್ ಉಪಕೇಂದ್ರದಿAದ ಹೊರಹೊಮ್ಮುವ ಎಫ್೧ ಕೋಟೆ ಫೀಡರ್ನಲ್ಲಿ ಹಾಗೂ ಎಫ್೫ ಜಿ.ಟಿ ರಸ್ತೆ ಫೀಡರ್ನಲ್ಲಿ ತಾ. ೧೧ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ದಸರಾ ಪ್ರಯುಕ್ತ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿ ಬೀದಿ, ಪೆನ್ಸನ್ ಲೈನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟಿçಯಲ್ ಏರಿಯಾ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್, ಹಳೆ ಖಾಸಗಿ ಬಸ್ ಸ್ಟಾಂಡ್, ಜಯನಗರ, ಮಂಗಳಾದೇವಿನಗರ, ಪುಟಾಣಿನಗರ, ಜಲಾಶಯ ಬಡಾವಣೆ, ಅರಣ್ಯಭವನ, ಚೈನ್ ಗೇಟ್, ದೇಚೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
* ವೀರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-೩ ಕೆ.ಎಸ್.ಆರ್.ಟಿ.ಸಿ ಮತ್ತು ವಿಎಫ್-೭ ಹೆಗ್ಗಳ ಫೀಡರ್ಗಳಲ್ಲಿ ತಾ. ೧೧ ರಂದು ಬೆಳಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಫೀಡರ್ ಬೇರ್ಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿAದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ ಪಟ್ಟಣದ ಮೀನುಪೇಟೆ, ಸುಣ್ಣದ ಬೀದಿ, ಖಾಸಗಿ ಬಸ್ ನಿಲ್ದಾಣ, ಪೋಲಿಸ್ ಸ್ಠೇಷನ್ ಹಿಂಬಾಗ, ಆರ್ಜಿ, ಪೆರಂಬಾಡಿ, ಹೆಗ್ಗಳ, ತೋರ, ರಾಮನಗರ, ಬಟ್ಟಮಕ್ಕಿ, ಎಡಮಕ್ಕಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.