ಮಡಿಕೇರಿ,ಸೆ.೧೦: ಮಾಜಿ ಹಾಕಿಪಟು ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ ಅವರು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ೩೮ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಆಗಸ್ಟ್ ೩೦ ರಂದು ನಿವೃತ್ತರಾಗಿದ್ದು, ಸಂಸ್ಥೆ ವತಿಯಿಂದ ಅವರನ್ನು ಬೀಳ್ಕೊಡಲಾಯಿತು.

ಎಸ್.ಬಿ.ಐ ನ ಡಿ.ಜಿಎಂ ಅಧಿಕಾರಿ ತನುಜ ಚತುರ್ವೇದಿ ಹಾಗೂ ಎ.ಜಿಎಂ ಅಮೃತ ಎಸ್ ಅವರುಗಳು ಪೂಣಚ್ಚ ಅವರನ್ನು ಬೆಂಗಳೂರಿನ ಎಲ್.ಎಚ್.ಓ ನಲ್ಲಿ ಬೀಳ್ಕೊಟ್ಟರು. ಈ ಸಂದರ್ಭ ಪೂಣಚ್ಚ ಅವರ ಪತ್ನಿ ಅಂತರರಾಷ್ಟ್ರೀಯ ಮಟ್ಟದ ಅಥ್ಲೀಟ್ ಸವಿತಾ ಅವರು ಕೂಡ ಇದ್ದರು.

೧೯೯೨ರ ಬಾರ್ಸಿಲೋನ ಹಾಕಿ ಒಲಂಪಿಕ್ಸ್ನಲ್ಲಿ ಆಡಿದ್ದ ಪೂಣಚ್ಚ ಅವರಿಗೆ, ೧೯೯೧ರಲ್ಲಿ ದಸರಾ ಪ್ರಶಸ್ತಿ, ೧೯೯೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೩ರಲ್ಲಿ ಏಕಲವ್ಯ ಪ್ರಶಸ್ತಿ ಹಾಗೂ ೨೦೨೫ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿ ಗೌರವಿಸಿದೆ.