ಈ ಅವಧಿಯಲ್ಲಿ ಮೇಕೇರಿರ ರವಿ ಪೆಮ್ಮಯ್ಯ ಅವರು ಕಾರ್ಯಾಧ್ಯಕ್ಷರಾಗಿದ್ದು ಈತನಕ ಇವರ ತಂಡ ಅಕಾಡೆಮಿಯಲ್ಲಿ ಅಧಿಕಾರದಲ್ಲಿತ್ತು.
ಇದೀಗ ಕಳೆದ ಮೇ ತಿಂಗಳಲ್ಲಿ ಈಗಿನ ಆಡಳಿತ ಮಂಡಳಿಯ ಅಧಿಕಾರ ಅವಧಿ ಪೂರ್ಣಗೊಂಡಿದೆ, ನಂತರದಲ್ಲಿ ವಾರ್ಷಿಕ ಪಂದ್ಯಾವಳಿ ಇದ್ದ ಕಾರಣದಿಂದಾಗಿ ಚುನಾವಣೆ ನಡೆದಿರಲಿಲ್ಲ.
ಆ ಬಳಿಕ ಆಗಸ್ಟ್ ೩೧ಕ್ಕೆ ಚುನಾವಣೆ ನಿಗದಿಯಾಗಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಆದರೆ, ಈ ಸಂದರ್ಭದಲ್ಲಿ ಕೆಲವೊಂದು ಗೊಂದಲಗಳು ಉಂಟಾಗಿದ್ದ ಕಾರಣ, ಕಾರಣಾಂತರಗಳಿAದ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣಾಧಿಕಾರಿಯಾಗಿ ನಿವೃತ್ತಿಗೊಂಡಿದ್ದ ಚೋಕಿರ ಪೂವಯ್ಯ ಅವರ ನಿರ್ದೇಶನದಂತೆ ಚುನಾವಣೆ ಮುಂದೂಡಲಾಗಿತ್ತು.
ಇದೀಗ ಸೆ. ೨೮ಕ್ಕೆ ನಿಗದಿ
ಕೊಡವ ಹಾಕಿ ಅಕಾಡೆಮಿಯ ಮುಂದಿನ ೩ ವರ್ಷಗಳ ಅವಧಿಯ ಹೊಸ ಆಡಳಿತ ಮಂಡಳಿಗೆ ಇದೀಗ ಸೆ.೨೮ಕ್ಕೆ ಚುನಾವಣೆ ನಿಗದಿಪಡಿಸಲಾಗಿದ್ದು, ಇದಕ್ಕೆ ಸಂಬAಧಿಸಿದ ಪ್ರಕ್ರಿಯೆಗಳು ಅಧಿಕೃತವಾಗಿ ಪ್ರಾರಂಭಗೊಳ್ಳುತ್ತಿವೆ. ವಿಶೇಷವೆಂದರೆ ಈ ಬಾರಿ ಆಡಳಿತ ಮಂಡಳಿಗೆ ಭಾರೀ ಪೈಪೋಟಿ ಕಂಡುಬರುತ್ತಿದೆ. ೧೯೯೯ರಲ್ಲಿ ಅಕಾಡೆಮಿ ಪ್ರಾರಂಭಗೊAಡ ನಂತರ ಈ ತನಕ ಅವಿರೋಧ ಆಯ್ಕೆ ನಡೆದಿತ್ತ ವಿನಾಃ ಚುನಾವಣೆ ನಡೆದಿರಲಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನ ತಿರುವು ಕಾಣುತ್ತಿದೆ.
ಹೊಸ ಆಡಳಿತ ಮಂಡಳಿಗೆ ಎರಡು ತಂಡಗಳು ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಹಾಲಿ ಅಧ್ಯಕ್ಷ ಪಾಡಂಡ ಕೆ. ಬೋಪಣ್ಣ ನೇತೃತ್ವದ ಒಂದು ತಂಡ ಹಾಗೂ ಕಾರ್ಯಾಧ್ಯಕ್ಷರಾಗಿರುವ ಮೇಕೇರಿರ ರವಿ ಪೆಮ್ಮಯ್ಯ ನೇತೃತ್ವದ ಮತ್ತೊಂದು ತಂಡ ಸ್ಪರ್ಧೆಯಲ್ಲಿದೆ. ಈಗಾಗಲೇ ಪಾಂಡAಡ ಬೋಪಣ್ಣ ನೇತೃತ್ವದ ತಂಡ ಹಾಗೂ ರವಿ ಪೆಮ್ಮಯ್ಯ ನೇತೃತ್ವದ ತಂಡ ಸಿದ್ಧವಾಗಿದೆ.
ಒಂದು ತಂಡದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೋಪಣ್ಣ, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಉಪಾಧ್ಯಕ್ಷ ಸ್ಥಾನಕ್ಕೆ ಮಡಿಕೇರಿ ತಾಲೂಕಿನಿಂದ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ವೀರಾಜಪೇಟೆ ತಾಲೂಕಿನಿಂದ ಕೂತಂಡ ಸುರೇಶ್ ಅಪ್ಪಯ್ಯ ಸ್ಪರ್ಧೆ ಮಾಡುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಯಕಂಡ ದೀಪು ಚಂಗಪ್ಪ ಹಾಗೂ ನಿರ್ದೇಶಕ ಸ್ಥಾನಕ್ಕೆ ಮುಕ್ಕಾಟಿರ ಬಿ. ಸೋಮಯ್ಯ, ಕಂಬೀರAಡ ರಾಖಿ ಪೂವಣ್ಣ, (ಮಹಿಳೆ) ಬೊಳ್ಳೆಪಂಡ ಜೆ. ಕಾರ್ಯಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಚೆಕ್ಕೇರ ಆದರ್ಶ್, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಮುದ್ದಂಡ ರಶಿನ್ ಸುಬ್ಬಯ್ಯ, ಮಂಡೇಪAಡ ಮುಖೇಶ್ ಮೊಣ್ಣಯ್ಯ ಸ್ಪರ್ಧೆಯಲ್ಲಿರುವುದಾಗಿ ತಿಳಿದುಬಂದಿದೆ.
ಮೇಕೇರಿರ ರವಿ ಪೆಮ್ಮಯ್ಯ ನೇತೃತ್ವದಲ್ಲಿ ಇನ್ನೊಂದು ತಂಡದ ಸ್ಪರ್ಧೆಯೂ ಖಚಿತವಾಗಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ರವಿ ಪೆಮ್ಮಯ್ಯ ಅವರು, ಒಂದೆರೆಡು ದಿನದಲ್ಲಿ ತಮ್ಮ ಗುಂಪಿನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿರುವುದಾಗಿ ತಿಳಿಸಿದ್ದಾರೆ.