ಗೋಣಿಕೊಪ್ಪ ವರದಿ, ಸೆ. ೧೦: ತಾ. ೧೨ ರಿಂದ (ನಾಳೆಯಿಂದ) ಕೂರ್ಗ್ ಹಾಕ್ಸ್ ಮತ್ತು ಯುಟಿಎಸ್ಸಿ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಫಾಪ್ (ಈಂP) ಹಾಕಿ ಫೆಸ್ಟಿವಲ್ ಆರಂಭಗೊಳ್ಳಲಿದೆ. ೪ ದಿನ ನಡೆಯಲಿರುವ ಟೂರ್ನಿಯಲ್ಲಿ ಬಾಲಕರ ತಂಡ ಹಾಗೂ ಮಹಿಳಾ ತಂಡಗಳು ಭಾಗವಹಿಸುತ್ತಿವೆ.
ಬಾಲಕರಲ್ಲಿ ಯುಟಿಎಸ್ಸಿ ಹಾಕಿ ಅಕಾಡೆಮಿ, ಪೊನ್ನಂಪೇಟೆ ಸೆಂಟ್ ಆಂಟೋನಿ ಹೈಸ್ಕೂಲ್, ನಾಪೋಕ್ಲು ಅಂಕುರ್ ಪಬ್ಲಿಕ್ ಸ್ಕೂಲ್, ಪತ್ತಿರಿಯಾದ್ ಹಾಕಿ ಅಕಾಡೆಮಿ, ಕೂಡಿಗೆ ಡಿವೈಇಎಸ್-ಬಿ, ವೀರಾಜಪೇಟೆ ತ್ರಿವೇಣಿ ಸ್ಕೂಲ್, ಕೊಚ್ಚಿನ್ ಇಎಚ್ಎಲ್, ಪೊನ್ನಂಪೇಟೆ ಅಪ್ಪಚ್ಚಕವಿ, ಬೆಂಗಳೂರು ಜೆಎಫ್ಎಚ್ಎ, ಬೆಂಗಳೂರು ಆರ್ಮಿ ಬಾಯ್ಸ್, ಕೂಡಿಗೆ ಡಿವೈಇಎಸ್-ಎ, ನಾಪೋಕ್ಲ್ ಪಳೇ ತಾಲೂಕ್ ತಂಡಗಳು ಸೆಣೆಸಾಟ ನಡೆಸಲಿದೆ.
ಮಹಿಳೆಯರಲ್ಲಿ ಕೂರ್ಗ್ ಇಲೆವೆನ್, ಕೊಡಗು ವಂಡರ್ ವುಮೆನ್ಸ್, ಕೇರಳ ಸ್ಪೆöÊಸ್ ವುಮೆನ್ಸ್, ಕೂರ್ಗ್ ಹೈ ಫ್ಲೆöÊರ್ಸ್, ಪುರುಷರ ಕೂರ್ಗ್ ಹಾಕ್ಸ್ ಮತ್ತು ಯುಟಿಎಸ್ಸಿ ತಂಡಗಳು ಪ್ರದರ್ಶನ ಪಂದ್ಯ ನೀಡಲಿದೆ.
ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದ್ದು, ಒಲಿಂಪಿಯನ್ ಕರ್ನಲ್ ಬಿ. ಕೆ. ಸುಬ್ರಮಣಿ ಹಾಗೂ ಒಲಿಂಪಿಯನ್ ಸಿ.ಎಸ್ ಪೂಣಚ್ಚ, ಹಿರಿಯ ಹಾಕಿ ಆಟಗಾರ ಕಾಂಡAಡ ಜೋಯಪ್ಪ, ಕ್ರೀಡಾ ವಿಶ್ಲೇಷಕ ಚೆಪ್ಪುಡೀರ ಕಾರ್ಯಪ್ಪ, ಅಂತರರಾಷ್ಟಿçÃಯ ಹಾಕಿ ಆಟಗಾರ ಕುಲ್ಲೇಟಿರ ಉತ್ತಯ್ಯ, ಅಪ್ಪಚ್ಚಕವಿ ವಿದ್ಯಾಲಯ ಪ್ರಾಂಶುಪಾಲ ಎಸ್. ಎಸ್. ತನುಜ, ಹಿರಿಯ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ ೧೪ ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಸಮಾರೋಪ ನೆರವೇರಲಿದೆ. ಅಂತರರಾಷ್ಟಿçÃಯ ಬಾಸ್ಕೆಟ್ಬಾಲ್ ಆಟಗಾರ್ತಿ ಪುಷ್ಪಾ ಕುಟ್ಟಣ್ಣ, ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಎ. ಬಿ. ಸುಬ್ಬಯ್ಯ, ವಿಶ್ವಕಪ್ ಆಟಗಾರ ಕೆ.ಕೆ. ಪೂಣಚ್ಚ, ಕೇರಳ ಹಾಕಿ ಉಪಾಧ್ಯಕ್ಷ ಹಾಶಿರ್ ಪೊನ್ನಮಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಹಾಕಿ ತರಬೇತುದಾರ ಕೋಟೆರ ಮುದ್ದಯ್ಯ, ರತ್ನ ಚರ್ಮಣ, ಕಾರ್ಯದರ್ಶಿ ಅಂಕುರ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ರತ್ನ ಚರ್ಮಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ ಬೋಪಣ್ಣ, ಹಿರಿಯ ಹಾಕಿ ಆಟಗಾರ ಎಂ.ಪಿ.ಕುಶಾಲಪ್ಪ ಭಾಗವಹಿಸಲಿದ್ದಾರೆ.
ಟೂರ್ನಿ ನಿರ್ದೇಶಕರಾಗಿ ಕಳ್ಳಿಚಂಡ ಗೌತಮ್, ಅಂಪೈರ್ ವ್ಯವಸ್ಥಾಪಕರಾಗಿ ಕುಪ್ಪಂಡ ದಿಲನ್, ಹಾಗೂ ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟೀರ ವಿಕ್ರಮ್ ಉತ್ತಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೆಡೊ ಮೆಡಿಕಲ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ವೈದ್ಯಕೀಯ ಮಾರ್ಗದರ್ಶನ ನೀಡಲಿದೆ. ಟೂರ್ನಿ ಸಂಚಾಲಕರಾಗಿ ಮೇಕೇರಿರ ಬೆಲ್ಲು ಕುಟ್ಟಪ್ಪ ಹಾಗೂ ಸಂಯೋಜಕರಾಗಿ ಚೆಪ್ಪುಡೀರ ಎ ಕಾರ್ಯಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜೇತರಿಗೆ ೨೦ ಸಾವಿರ ನಗದು, ಟ್ರೋಫಿ, ರನ್ನರ್ ಅಪ್ ತಂಡಕ್ಕೆ ೧೦ ಸಾವಿರ ನಗದು ಟ್ರೋಫಿ, ಅತ್ಯುತ್ತಮ ಆಟಗಾರ, ಗೋಲ್ ಕೀಪರ್, ಡಿಫೆಂಡರ್, ಮಿಡ್ ಫೀಲ್ಡರ್, ಹೆಚ್ಚು ಗೋಲು ದಾಖಲೆ, ಭರವಸೆ ಆಟಗಾರ, ಫಾರ್ವರ್ಡ್ ಆಟಗಾರ, ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು.